Karnataka
ಕಲಾವಿದೆ ಪದ್ಮಜಾ ರಾವ್ ವಿರುದ್ಧ ವಾರಂಟ್

ಬೆಂಗಳೂರು ; ಮೂಡಲ ಮನೆ ಧಾರಾವಾಹಿ ಖ್ಯಾತಿಯ ಹಿರಿಯ ಕಲಾವಿದೆ ಪದ್ಮಜಾ ರಾವ್ ಅವರ ವಿರುದ್ಧ ಮಂಗಳೂರಿನ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದೆ .ನಿರ್ದೇಶಕ ವೀರೇಂದ್ರ ಶಟ್ಟೆ ಒಡೆತನದ ವೀರೂ ಟಾಕೀಸ್ ಸಂಸ್ಥೆಗೆ ನೀಡಿದ್ದ 40 ಲಕ್ಷ ರೂಪಾಯಿ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಸಂಸ್ಥೆಯ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಜೆ ಎಂ ಎಂ ಸಿ 5ನೇ ನ್ಯಾಯಾಲಯ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ. ಕಲಾವಿದೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸುವಂತೆ ಪೊಲಿಸರಿಗೆ ಸೂಚಿಸಿದೆ.