Belagavi

ಮಕ್ಕಳ ಸಾಹಿತ್ಯ ಲೋಕದ ಕಣಜ-ಪ್ರೋ ಸಂಗಮೇಶ ಗುಜಗೊಂಡ

ಮೂಡಲಗಿ:- ಸಾಮಾನ್ಯವಾಗಿ ಸಾರಸ್ವತ ಲೋಕದಲ್ಲಿ ಒಂದು ಮಾತು ಇದೆ ಕಾಲೇಜು ಹಾಗೂ ವಿಶ್ವವಿದ್ಯಾಲಯದಲ್ಲಿಯ ಕನ್ನಡ ಪ್ರಾದ್ಯಾಪಕರು ಕನ್ನಡ ಸಾಹಿತ್ಯದ ವಾರಸುದಾರಿಕೆ ಮೇಲೆ ಸವಾರಿ ಮಾಡುತ್ತಾರೆ. ಎಂದು, ಆದರೆ ಅದಕ್ಕೆ ತದ್ವಿರುದ್ದವಾಗಿರುವಂತೆ ಪದವಿಯಲ್ಲಿ ಅರ್ಥಶಾಸ್ತç ವಿಷಯವನ್ನು ಪ್ರಧಾನವಾಗಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಭೂಗೋಳ ವಿಷಯದಲ್ಲಿ ಅಧ್ಯಯನ ಮಾಡಿ ಅದೂ ಅದರಲ್ಲಿ ಚಿನ್ನದ ಪದಕ ಪಡೆದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭೂಗೋಳ ಶಾಸ್ತç ಪ್ರಾದ್ಯಾಪಕರಾಗಿದ್ದುಕೊಂಡು ಕನ್ನಡ ಸಾಹಿತ್ಯದಲ್ಲಿ ದೊಡ್ಡವರಿಂದ ನಿರ್ಲಕ್ಷಿಸಲ್ಪಡುವ ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕರ್ನಾಟಕದ ಮಕ್ಕಳ ಸಾರಸ್ವತ ಲೋಕದಲ್ಲಿ ಮೇರು ವ್ಯಕ್ತಿಯಾಗಿ ಗುರುತಿಸಿಕೊಂಡ ಪ್ರೋ ಸಂಗಮೇಶ ಮಲ್ಲಪ್ಪ ಗುಜಗೊಂಡ ಅವರು ೧೩-೨-೨೦೨೧ ರಂದು ಮೂಡಲಗಿಯಲ್ಲಿ ಜರುಗಲಿರುವ ಮೂಡಲಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಾಹಿತ್ಯ ಪ್ರೀಯರಿಗೆ ಹಾಗೂ ಮಕ್ಕಳ ಸಾಹಿತ್ಯ ಲೋಕಕ್ಕೆ ಹರ್ಷವನ್ನೊಂಟು ಮಾಡಿದೆ.
ಸಂಗಮೇಶ ಎಂದ ತಕ್ಷಣ ಬಸವಣ್ಣನವರ ವಚನಗಳಲ್ಲಿನ ಸಂಗಮನಾಥ ಎಂಬ ಸಂಬೋಧನೆ ನೆನಪಿಗೆ ಬರುತ್ತದೆ ಸಂಗಮ ಎಂದರೆ ಕೂಡುವುದು, ಕೃಷ್ಣಾ, ಘಟಪ್ರಭಾ, ಮಲಪ್ರಬಾ ನದಿಗಳ ಸಂಗಮ ಅದುವೇ ಕೂಡಲ ಸಂಗಮ, ಅದ್ಯಾವ ಶುಭಗಳಿಗೆಯಲ್ಲಿ ಇವರ ತಂದೆ-ತಾಯಿ ಇವರಿಗೆ ಸಂಗಮೇಶ ಅಂತ ಹೆಸರು ಇಟ್ಟರು ಗೊತ್ತಿಲ್ಲಾ ಗುಜಗೊಂಡ ಸರ್ ಎಂದು ಕರೆಯಲ್ಪಡುವ ಸಂಗಮೇಶ ಇಂದು ವೃತ್ತಿಯಲ್ಲಿ ಭೂಗೋಳಶಾಸ್ತçದ ಅತ್ಯತ್ತಮ ಪ್ರಾದ್ಯಾಪಕರಾಗಿ ವಿದ್ಯಾರ್ಥಿ ವಲಯದಲ್ಲಿ ಗುರುತಿಸಿಕೊಂಡರೆ, ಮಕ್ಕಳ ಸಾಹಿತ್ಯದಲ್ಲಿ ಮೌಲಿಕ ಸಾಹಿತ್ಯ ಕೃಷಿಮಾಡಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಚಾಪು ಒತ್ತಿದ್ದಾರೆ ಅಲ್ಲದೆ ಮಾತುಗಾರಿಕೆಯಲ್ಲಿ ಸಂಗಮೇಶ ಅವರನ್ನು ಮೀರಿಸುವವರಿಲ್ಲ. ಎಂತಹ ಸಣ್ಣ ವಿಷಯವೇ ಇರಲಿ ತಮ್ಮ ಮಾತಿನ ಸೊಗಸುಗಾರಿಕೆಯಿಂದ ಅದನ್ನು ಅದ್ಭುತವಾಗಿ ಬಿಂಬಿಸುವ ಕಲೆಗಾರಿಕೆ ಹಾಗೂ ಎಂತಹ ಕ್ಲಿಷ್ಟಕರ ವಿಷಯವಿದ್ದರೂ ಅದನ್ನು ಸರಳಿಕರಿಸಿ ಕೇಳುಗರ ಸ್ರö್ಮತಿ ಪಟಲಕ್ಕೆ ತಾಕುವಂತೆ ನಿವೇದಿಸುವ ವಿದ್ಯೆ ಅವರಿಗೆ ಸಂಗಮನಾಥನಿAದ ಹರಿದು ಬಂದಿರಬಹುದು ಎನಿಸುತ್ತದೆ.
ಮೂಲತಾ ಭೂಗೋಳ ಶಾಸ್ತçದ ಪ್ರಾದ್ಯಪಕರಾಗಿದ್ದರಿಂದಲೂ ಎನೂ ಗೊತ್ತಿಲ್ಲಾ ಪರಿಸರ ಕಾಳಜಿ ಕುರಿತಾದ ಸಂಗಮೇಶ ಅವರ ಮಾತುಗಳಿಗೆ ತಲೆದೂಗದವರೇ ಇಲ್ಲಾ ಜನಮಾನಸದಲ್ಲಿ ಅದರಲ್ಲೂ ವಿದ್ಯಾರ್ಥಿಗಳ ಮೇಲೆ ಇವರ ಪರಿಸರ ಕುರಿತಾದ ಭಾಷಣಗಳು ಬಹುತರವಾಗಿ ಪರಿಣಾಮ ಬೀರೆವೆ.
ಇಂತಹ ಮೇರು ವ್ಯಕ್ತಿತ್ವದ ಪ್ರೋ ಸಂಗಮೇಶ ಗುಜಗೊಂಡ ಪಂಚನದಿಗಳ ಬೀಡು ಆದರೂ ಬರಗಾಲದ ನಾಡು ಎಂಬ ಖ್ಯಾತಿಗೆ ಹೆಸರಾದ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮನಗೊಳಿಯಲ್ಲಿ ೧೯೬೪ ಅಗಸ್ಟ ೬ ರಂದು ತಂದೆ ಮಲ್ಲಪ್ಪ ತಾಯಿ ಮಹಾದೇವಿ ಪುಣ್ಯ ಉದರದಲ್ಲಿ ಜನಿಸಿದರು.
ತಂದೆ, ತಾಯಿ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರು, ಇವರ ತಂದೆ ತಾಯಿಗೆ ಏಕಮೇವ ಪುತ್ರ ಸಂಗಮೇಶ ಹಾಗೂ ಜಯಶ್ರೀ ಎಂಬ ಒಬ್ಬಳೇ ಸಹೋದರಿಯನ್ನೋಳಗೂಂಡ ಚಿಕ್ಕ ಹಾಗೂ ಚೊಕ್ಕ ಸಂಸಾರದಲ್ಲಿ ಸಂಗಮೇಶರ ಬಾಲ್ಯದ ದಿನಗಳನ್ನು ಕಳೆದರು. ಇವರ ಪ್ರಾಥಮಿಕ ಶಿಕ್ಷಣವನ್ನು ಹುಟ್ಟರು ಮನಗೊಳಿಯಲ್ಲಿಯ ತಂದೆ ತಾಯಿ ಜೊತೆಗೆ ಪೂರೈಸಿಕೊಂಡು ಪದವಿ ಶಿಕ್ಷಣವನ್ನು ವಿಜಯಪುರದಲ್ಲಿ ಮುಗಿಸಿಕೊಂಡು ನಂತರ ತಮ್ಮ ಉನ್ನತ ವ್ಯಾಸಂಗವನ್ನು ಧಾರವಾಡ ಪ್ರತಿಷ್ಟಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೂಗೋಳಶಾಸ್ತç ವಿಷಯದಲ್ಲಿ ಚಿನ್ನದ ಪದಕದೊಂದಿಗೆ ೧೯೮೭ ರಲ್ಲಿ ಮುಗಿಸಿಕೊಂಡು ನಂತರ ೧೯೮೭ರಿಂದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತçದ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಕಳೆದ ೩೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿದಾರೆ.
ಇಂದು ಅವರ ವೃತ್ತಿ ಪ್ರವೃತ್ತಿಗಳಿಗೆ ಬಾಧೆ ಬರದಂತೆ ಸಂಸಾರ ನೌಕೆಗೆ ಹುಟ್ಟು ಹಾಕುತಿರುವ ಧರ್ಮ ಪತ್ನಿ ಶ್ರೀಮತಿ ಕವಿತಾ., ಶ್ರೇಯಾಂಕ ಸುಪ್ರೀತ, ಸಂಜನಾ ಎಂಬ ಇಂಜನೀಯರ ಪದವಿಧರರಾದ ಇಬ್ಬರು ಗಂಡು ಒಬ್ಬಳು ಹೆಣ್ಣು ಮಗಳನ್ನೂಳಗೊಂಡ ಕುಟುಂಬ ಎಂಬ ಬಾಳ ಪಯಣದ ನೌಕೆಯಲ್ಲಿ ಸಾಗುತ್ತಿದ್ದಾರೆ.
ಇವರು ೮ನೇ ತರಗತಿಯಲ್ಲಿದ್ದಾಗಲೇ ಇವರ ಜಯಶಾಲಿ ಜಾಣಮಿತ್ರರು ಎಂಬ ನಿಳ್ಗತೆ ವಿಜಯಪುರದ ಕನಾಟಕ ಸಂದೇಶ ವಾರ ಪತ್ರಿಕೆಯಲ್ಲಿ ಧಾರಾವಾಯಿಯಾಗಿ ಪ್ರಕಟಗೊಂಡಿದ್ದು ಇವರ ಬಾಲ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ.
ಜೀವನ ಶಿಕ್ಷಣ , ಸುಧಾ, ಮಯೂರ, ಪ್ರಜಾವಾಣಿ, ತರಂಗ, ಸಂಯುಕ್ತ ಕರ್ನಾಟಕ ತುಷಾರ, ವಿಜಯ ಕರ್ನಾಟಕ ಕನ್ನಡಪ್ರಭ, ಹೊಸತು, ಮಕ್ಕಳ ಮಂದಿರ ಮುಂತಾದ ಪತ್ರಿಕೆಗಳಲ್ಲಿ ಹಲವಾರು ಮಕ್ಕಳ ಕತೆ, ಕವಿತೆಗಳು ಪ್ರಕಟವಾಗಿವೆ. ಕೆಲವು ಕವಿತೆಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ.
೨೦೦೮ ರಲ್ಲಿ ಇವರ ಹುಟ್ಟು ಹಬ್ಬ ಎಂಬ ಕವಿತೆ, ೨೦೧೪ರಲ್ಲಿ ಹೋದ ಮಳೆ ಬಂತು, ಕಥೆ, ಮಹಾರಾಷ್ಟç ರಾಜ್ಯದ ೩ನೇ ತರಗತಿಯ ಬಾಲ ಭಾರತಿ ಪಠ್ಯ ಪುಸ್ತಕಕ್ಕೆ ಆಯ್ಕೆಯಾದರೆ ೨೦೧೨ ರಲ್ಲಿ ಇನಾಮು ಪತ್ರ ಕಥೆ ಕಾರ್ನಾಟಕ ರಾಜ್ಯಾದ ೫ನೇ ತರಗತಿ, ೨೦೧೪ರಲ್ಲಿ ಪ್ರೀತಿಯೇ ದೇವರು ಕವಿತೆ ಕನ್ನಡ ೬ನೇ ತರಗತಿಯ ತೃತೀಯ ಕನ್ನಡ ಭಾಷಾ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿವೆ.
೧೯೯೪ರಲ್ಲಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಸಾರಾಂಗದ ಮಾಲಿಕೆಯಲ್ಲಿ ಗ್ರಾಮೀಣ ಸಂಸ್ಕೃತಿಕ ಪರಂಪರೆ ಮತ್ತು ರಾಷ್ಟಿçÃಯ ಬಾವೈಕ್ಯ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನ ಪಡೆದು ನೂರು ನಾಣ್ಯ ಮೂರು ಮಾತು , ಸುವರ್ಣ ಸ್ವಾತಂತ್ರö್ಯ ಹಾಗೂ ಪಾಪಣ್ಣ ಗುರುಗಳು ಕಥಾ ಸಂಕಲನ , ಅಮ್ಮಾಕೇಳೆ ಮತ್ತೆ ಬಂತು ಚೈತ್ರ ಕವನ ಸಂಕನಲ, ಮಕ್ಕಳಿಗಾಗಿ ಕೈವಲ್ಯ ಚಕ್ರವರ್ತಿ ನಿಜಗುಣ ಶಿವಯೋಗಿಗಳ ಜೀವನ ಚರಿತ್ರೆ ಪುಸ್ತಕಗಳು ಪ್ರಕಟನೆಗೊಂಡಿವೆ.
ನೂರು ನಾಣ್ಯ ಮೂರು ಮಾತು ಇದರ ಹಸ್ತಪ್ರತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರ ಪ್ರೋತ್ಸಾಹ ಯೋಜನೆಯಲ್ಲಿ ಆಯ್ಕೆಯಾಗಿ ಸಹಾಯಧನ ಪಡೆದುದ್ದಲ್ಲದೆ ಬನಹಟ್ಟಿಯ ರಾಜ್ಯ ಮಟ್ಟದ ತಮ್ಮಣ್ಣಪ್ಪ ಚಿಕ್ಕೋಡಿ ಮಕ್ಕಳ ಸಾಹಿತ್ಯ ಪುರಸ್ಕಾರ ದಿಟ್ಟಿಸಿಕೊಂಡಿದೆ.
ಹಸಿರಿನ ಗೂಡನು ಕಟ್ಟುವೆವು ಹಸ್ತ ಪ್ರತಿಯು ೧೯೯೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಉದಯೋನ್ಮೂಖ ಮಕ್ಕಳ ಸಾಹಿತಿಗಳ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮನ ಪಡೆದಿದೆ. ಅಮ್ಮಾ ಕೇಳೆ ಕವಿತಾ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ೨೦೦೨ನೇಯ ಸಾಲಿನ ಕನ್ನಡ ಪುಸ್ತಕ ಸೊಗಸು ಬಹುಮಾನ ನಾಲತವಾಡದ ವಿಜಯ ಪ್ರಕಾಶನದಿಂದ ಮಕ್ಕಳ ರತ್ನ ಪ್ರಶಸ್ತಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ ಪಿ. ವಿಜಯಕುಮಾರ ದತ್ತಿ ಪ್ರಶಸ್ತಿ, ಬನಹಟ್ಟಿಯ ಮಕ್ಕಳ ಸಂಗಮದ ಲಿಂ.ಮಹಾದೇವಪ್ಪಾ ಲೋಕಪ್ಪ ಕರ್ಲಟ್ಟಿ ಮಕ್ಕಳ ಸಾಹಿತ್ಯ ಪುರಸ್ಕಾರ ಲಭಿಸಿದೆ.
ಮತ್ತೆ ಬಂತು ಚೈತ್ರ ಹಾಗೂ ಸುವರ್ಣ ಸ್ವಾತಂತ್ರö್ಯ ಹಾಗೂ ಪಾಪಣ್ಣ ಗುರುಗಳು ಕೃತಿಗಳಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಪಿ. ವಿಜಯಕುಮಾರ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ಅಲ್ಲದೆ ಸುವರ್ಣ ಸ್ವತಂತ್ರö್ಯ ಹಾಗೂ ಪಾಪಣ್ಣ ಗುರುಗಳು ಕೃತಿಗೆ ೨೦೧೨ನೇ ಸಾಲಿನ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಲಭಿಸಿವೆ.
ಇವರ ಶೈಕ್ಷಣಿಕ ಮತ್ತು ಸಾಂಸ್ಕçತಿಕ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಕಲೆ ಸಾಹಿತ್ಯ ಸಂಸ್ಕçತಿ ಮತ್ತು ರಂಗಭೂಮಿ ಸಂಸ್ಥೆ(ರಿ) ಡಾ ಎಸ್. ರಾಧಾಕೃಷ್ಣನ್ ಪ್ರಶಸ್ತಿ ಗೋಕಾಕದ ಕಲಾ ಬದುಕು ಸಂಸ್ಥೆಯವರು ಸದ್ಭಾವನಾ ಪ್ರಶಸ್ತಿ ಹಾಗೂ ಮಕ್ಕಳ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಸನ್ಮಾನ ಗೋಕಾಕದ ಗುರುಸ್ಮೃತಿ ಬಳಗದ ಸನ್ಮಾನ ಪ್ರೋ ಸಂಗಮೇಶ ಗುಜಗೊಂಡ ಅವರಿಗೆ ಲಭಿಸಿದ್ದಲ್ಲದೆ ೨೦೧೫ರಲ್ಲಿ ಅರುಣಕುಮಾರ ರಾಜಮಾನೆ ಅವರು ಸಲ್ಲಿಸಿದ ಸಂಗಮೇಶ ಗುಜಗೊಂಡ ಮಕ್ಕಳ ಸಾಹಿತ್ಯ ಒಂದು ಅಧ್ಯಯನ ಪ್ರಬಂದಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಎಮ್.ಪಿಲ್ ಪದವಿ ಪ್ರಧಾನವಾಗಿದೆ.
ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟನ ಪುಸ್ತಕೂಟದ ಸದಸ್ಯರಾಗಿ ಗೋಕಾಕ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿ ಬೆಳಗಾವಿ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಸದಸ್ಯ ಖಂಜಾಚಿ ಹಾಗೂ ಉಪಾಧ್ಯಕ್ಷರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಕ್ಕಳ ಸಾಹಿತ್ಯ ಕಮ್ಮಟ (ಶಿವಯೋಗಿ ಮಂದಿರ ) ನಿರ್ದೇಶಕರಾಗಿ ಮೂಡಲಗಿ ಭೂ ಮಂಡಲ ಪ್ರಕಾಶನ ನಿರ್ದೇಶಕ, ವಿಜಾಪೂರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಸಂಸ್ಥಾಪಕ ಸದಸ್ಯ, ಬೆಂಗಳೂರ ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಬೆಳಗಾವಿ ಸಾಹಿತ್ಯ ಸಂವಾದದ ಅಜೀವ ಸದಸ್ಯ, ಮಹಾಲಿಂಗಪೂರದ ಶರಣ ಚೇತನ ಮಾಸಿಕ ಪತ್ರಿಕೆ ಸಮಾಲೋಚಕ ಮಂಡಳಿ ಸದಸ್ಯ, ಕೂಡಲ ಸಂಗಮದ ಸಚೇತನ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮೂಡಲಗಿ ಘಟಕದ ಗೌರವ ಸಲಹಾ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮೃದು ಹಾಗೂ ಶಾಂತ ಸ್ವಭಾವದ ಪ್ರೊ.ಸಂಗಮೇಶ ಗುಜಗೊಂಡ ಅವರು ಸ್ನೇಹ ಜೀವಿ ಕೂಡ, ಸಾಹಿತಿ ದಿಗ್ಗಜರುಗಳು ಸೇರಿದಂತೆ ನಾಡಿನಾದ್ಯಾಂತ ಸಾಹಿತಿಕ ದೊಡ್ಡ ಬಳಗವನ್ನು ಹೊಂದಿದ್ದಾರೆ. ಯಾವುದೇ ಮಾನ-ಸನ್ಮಾನಗಳ ಬೆನ್ನು ಹತ್ತದೆ ಹಾಗೂ ಭಾವ-ಪ್ರಭಾವಗಳನ್ನು ಬೀರದ ಆಸೆ-ಆಮಿಷಗಳಿಗೆ ಒಳಗಾಗ ಸ್ವಚ್ಛ ಬದುಕಿನ ಅಪ್ಪಟ ಸ್ಪಟಿಕ ಅವರ ವ್ಯಕ್ತಿತ್ವ ಇಂತವರನ್ನು ಮೂಡಲಗಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆತೆಯಂತಹ ಗೌರವ ಅವರ ಬುದುಕಿನಲ್ಲಿ ಬಲು ಬೇಗನೆ ಹುಡುಕಿಕೊಂಡು ಬಂದದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker