Karnataka

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಸಭೆ

ಬೆಂಗಳೂರು,  12 ; ಕರ್ನಾಟಕ ವೀರಶೈವ ಲಿಂಗಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿತ್ತು. ಇಂದು ನಿಗಮದ ಮಂಡಳಿಯ ಮೊದಲನೇ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಸದಸ್ಯರುಗಳಾದ ಪ್ರಭಾಕರ ಕೋರೆ, ಶಂಕರ ಮುನೇನಕೊಪ್ಪ ಪಾಟೀಲ್, ಯು. ಬಿ. ಬಣಕಾರ, ಅರವಿಂದ ಬೆಲ್ಲದ, ಲಿಂಗಮೂರ್ತಿ ಹೊಸದುರ್ಗ, ಮಹಾಂತೇಶ್ ಎಂ. ಪಾಟೀಲ್, ಡಾ: ವಿಜಯಲಕ್ಷ್ಮಿ ಈಶ್ವರಪ್ಪ ಬಾಳೆಕುಂದ್ರಿ ಹಾಜರಾಗಿದ್ದು ಸಭೆಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker