State

ಇಂದು ಕನ್ನಡದ ಖ್ಯಾತ ಮಕ್ಕಳ ಸಾಹಿತಿ ಶ್ರೀ ಶ್ರೀನಿವಾಸ್ ಉಡುಪರ ಜನ್ಮ ದಿನ


ಶ್ರೀನಿವಾಸ ಉಡುಪ ಸಾಹಿತಿ, ಪ್ರಾಧ್ಯಾಪಕರಾಗಿದ್ದರು, ೧೯೩೩ ಜನೆವರಿ ೮ರಂದು ಹೊಸನಗರ ತಾಲೂಕಿನ ಹುಂಚದಲ್ಲಿ ಜನಿಸಿದ ಇವರು ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿ ಇಂಗ್ಲೀಷ್ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಕಥೆ, ಕವಿತೆ, ಅಂಕಣ ಬರಹ ಪ್ರಕಟಿಸಿದ್ದ ಶ್ರೀನಿವಾಸ ಉಡುಪರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಾಂತಾವರ ಕನ್ನಡ ಸಂಘದ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಸಂದಿವೆ.

ಶ್ರೀನಿವಾಸ ಉಡುಪ
*ಜನನ*
ಜನೆವರಿ ೮, ೧೯೩೩
ನಲ್ಲುಂಡೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
*ವಿದಾಯ*
ಮಾರ್ಚ್ ೯, ೨೦೦೦
ಬೆಂಗಳೂರು, ಕರ್ನಾಟಕ, ಭಾರತ
*ಕಾವ್ಯನಾಮ*
‘ಶ್ರೀಮುಖ’, ‘ಹೋಶ್ರೀ’, ‘ಶ್ರೀಶ’
*ವೃತ್ತಿ*
ಕವಿ, ಲೇಖಕ, ಸರ್ಕಾರಿ ನೌಕರ
ಪ್ರಕಾರ/ಶೈಲಿ
ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ
ಪ್ರಮುಖ ಪ್ರಶಸ್ತಿ(ಗಳು)
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಅಖಿಲ ಭಾರತ ಆಕಾಶವಾಣಿ ಪುರಸ್ಕಾರ
*ತಂದೆ*
ಸುಬ್ಬರಾಯ ಉಡುಪ
*ತಾಯಿ*
ತಾಯಿ ವೆಂಕಟಲಕ್ಷ್ಮಮ್ಮ
*ಕೃತಿಗಳು*
ಶ್ರೀನಿವಾಸ ಉಡುಪ ಎಂಬ ಹೆಸರಲ್ಲದೇ ‘ಶ್ರೀಮುಖ’, ‘ಹೋಶ್ರೀ’ ಮತ್ತು ‘ಶ್ರೀಶ’ ಕಾವ್ಯನಾಮಗಳಿಂದ ಸುಮಾರು ೬೦ ಕಾದಂಬರಿಗಳು, ೧೩ ಕಥಾಸಂಕಲನಗಳು, ೧೬ ಮಕ್ಕಳ ಕೃತಿಗಳು, ೬ ನಾಟಕಗಳು, ೮ ಸಂಪಾದಿತ ಕೃತಿಗಳು, ಒಂದು ವಿಮರ್ಶೆ ಹಾಗೂ ಒಂದು ಕ್ಷೇತ್ರ ದರ್ಶನ ಕೃತಿ ಸೇರಿ ಅವರ ಸಾಹಿತ್ಯ ಕೃತಿಗಳ ಒಟ್ಟು ಸಂಖ್ಯೆ ನೂರಕ್ಕೂ ಹೆಚ್ಚು.

*ಕಥಾಸಂಕಲನಗಳು*
ಮನೆಗೆ ಬಂದ ಮಗಳು(೧೯೫೭)
ನಿರಾಶೆಯ ಕೊನೆಯಲ್ಲಿ(೧೯೫೯)
ಕಪ್ಪುಬೆಳಗಿತು (೧೯೬೦)
ಅವಳ ಕಥೆ (೧೯೬೦)
ಬದುಕು (೧೯೬೫)
ಹೆಗ್ಗಡತಿ ಹೆತ್ತ ದೆವ್ವ (೧೯೬೫)
ಹೊಸ ಕಥೆಗಳು (೧೯೬೭)
ಪುರಾಣ ಕಥೆಗಳು (೧೯೭೩)
ಸಂಭಾವಿತ (೧೯೭೭)
*ನಾಟಕಗಳು*
ರೇಷ್ಮೆ ಸೀರೆ
ಅಮೃತ ಹೃದಯ
ಗಣಪತಿ ಭರವಸೆ
ಮದುವೆ ಹೆಣ್ಣು
*ಕಾದಂಬರಿಗಳು*
ಒಲಿದು ಬಂದವಳು
ಕೆಂಪು ತುಟಿ
ಜೀವನದ ಜೊತೆಗಾರ
ತುಂಬಿದ ಬಾಳು
ಪ್ರೇಮದ ಮನೆ
ಬಾಳಿನ ವೈಭವ
ಮನೆಗೆ ಬಂದವಳು
ವಿಜಯಲಕ್ಷ್ಮಿ
ಶೀಲವಂತೆ
ಸೋತ ಹೃದಯ
ಸ್ನೇಹಶೀಲೆ
*ಮಕ್ಕಳ ಕಾದಂಬರಿ*
ಅಭಿಮನ್ಯು
*ಮಕ್ಕಳ ಪದ್ಯಗಳು*
ಪಾಪು ಪದ್ಯಗಳು
*ಪುರಸ್ಕಾರ*
ಒಲಿದು ಬಂದವಳು’ ಕೃತಿಗೆ ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.
ಅವರು ಭೂತನಾಡನ್ನು ದಾಟಿ ಬಂದರು’ ಕಥೆಗೆ ೧೯೬೦ ರಲ್ಲಿ ಬೆಂಗಳೂರಿನ ಪೀಪಲ್‌ ಆರ್ಟಿಸ್ಟ್‌ಸ್‌ ಅಸೋಸಿಯೇಷನ್‌ ಪ್ರಶಸ್ತಿ
ಅಮೃತಮಯಿ’ ನಾಟಕಕ್ಕೆ ೧೯೬೨ ರಲ್ಲಿ ಅಖಿಲ ಭಾರತ ಆಕಾಶವಾಣಿ ಬೆಂಗಳೂರು ಪ್ರಶಸ್ತಿ
ಒಲಿದು ಬಂದವಳು’ ಕಾದಂಬರಿಗೆ ೧೯೬೭ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ
‘ರೇಷ್ಮೆಸೀರೆ’ ನಾಟಕಕ್ಕೆ ೧೯೭೫ ರಲ್ಲಿ ವಿಶಾಲ ಕರ್ನಾಟಕ ದೀಪಾವಳಿ ನಾಟಕ ಸ್ಪರ್ಧಾ ಪ್ರಶಸ್ತಿ
ಸಂಭಾವಿತ’ ಕಥಾಸಂಕಲನಕ್ಕೆ ೧೯೭೮ ರಲ್ಲಿ ದೇವರಾಜ ಬಹದ್ದೂರ್ ಪ್ರಶಸ್ತಿ
*ಮಾಹಿತಿ ಕೃಪೆ: ವಿಕಿಪೀಡಿಯ*
*ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ*


Leave a Reply