Belagavi

ವಿದ್ಯಾರ್ಥಿಗಳ ಮುಗ್ಧತೆಯೇ ಹಾಸ್ಯಕ್ಕೆ ವಸ್ತು : ಪ್ರೊ. ಜಿ.ಕೆ. ಕುಲಕರ್ಣಿ

ಬೆಳಗಾವಿ ೧೩ : ವಿದ್ಯಾರ್ಥಿಗಳ ಮುಗ್ಧತೆಯೇ ನನ್ನ ಹಾಸ್ಯಕ್ಕೆ ವಸ್ತುವಾಯಿತು. ನಾನು ನನ್ನ ವಿದ್ಯಾರ್ಥಿಗಳನ್ನು ನನ್ನ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಇದರಿಂದ ವಿದ್ಯಾರ್ಥಿಗಳು ನನಗೆ ತುಂಬ ಹತ್ತಿರವಾಗಿ ಬಿಡುತ್ತಿದ್ದರು. ದಿನಾಲೂ ನನ್ನ ಸಂಪರ್ಕದಲ್ಲಿ ಬರುತ್ತಿದ್ದ ಅವರ ಮುಗ್ಧಸ್ವಭಾವವೇ ನನ್ನ ನಗೆಮಾತಿಗೆ ವಸ್ತುವಾಯಿತು. ಎಂದು ನಗೆಮಾತುಗಾರ ಪ್ರೊ. ಜಿ. ಕೆ. ಕುಲಕರ್ಣಿ ಇಂದಿಲ್ಲಿ ಹೇಳಿದರು.
ನಗರದ ವಿಶ್ವ ಮಧ್ವ ಪರಿಷತ್‌ನವರು ಇದೇ ದಿ. ೧೨ ಶುಕ್ರವಾರದಂದು ಚೆನ್ನಮ್ಮ ನಗರದ ಸತ್ಯಪ್ರಮೋದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಾಸ್ಯ ಸಂಜೆಯಲ್ಲಿ ಮಾತನಾಡುತ್ತಾ ಪ್ರೊ. ಜಿ. ಕೆ. ಕುಲಕರ್ಣಿಯವರು ಮೇಲಿನಂತೆ ಹೇಳಿದರು. ಜೀವ ನದಲ್ಲಿ ಬರುವ ಸುಖ ದುಃಖ ಗಳನ್ನು ಸಮಾನಾಗಿ ಸ್ವೀಕರಿಸುವ ಗುಣವಿದ್ದಲ್ಲಿ ಜೀವನ ಸುಗಮವಾಗುತ್ತದೆ. ಈ ಗುಣವನ್ನು ಹಾಸ್ಯ ಕಲಿಸಿಕೊಡುತ್ತದೆ ಎಂದು ಹೇಳಿ ಗುರು ಹಾಗೂ ಶಿಷ್ಯರಲ್ಲಿ ನಡೆಯುವ ಹಲವಾರು ನಗೆ ಪ್ರಸಂಗಳನ್ನು ಹಂಚಿಕೊAಡು ಜನರನ್ನು ನಗೆಗಡಲಲ್ಲಿ ತೇಲಿಸಿ ದರು.ಅತಿಥಿಗಳಾಗಿ ಆಗಮಿಸಿದ್ದ ಅರವಿಂದ ಹುನಗುಂದ ಅವರು ಮಾತನಾಡುತ್ತ ಶಿಕ್ಷಣ ಗುಣಮಟ್ಟ ಕಡಿಮೆಯಾಗುತ್ತಿದ್ದು. ಮೊದಲು ನಾವು ಕಲಿಯುತಿದ್ದ ಸಂದರ್ಭದಲ್ಲಿದ್ದ ಗುರು ಶಿಷ್ಯ ಸಂಬAಧ ಇಂದು ಕಡಿಮೆಯಾಗುತ್ತಲಿದೆ. ಬಿತ್ತಿದ್ದನ್ನು ಬೆಳೆದುಕೋ ಎಂಬAತೆ ನಾವು ನಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತೇವೆಯೋ ಅದನ್ನೇ ನಾವು ಪಡೆದುಕೊಳ್ಳುತ್ತೇವೆ ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ನಡೆಯುವ ಹಾಸ್ಯ ಪ್ರಸಂಗಗಳನ್ನು ಹಂಚಿಕೊAಡರು.
ಇನ್ನೋರ್ವ ಅತಿಥಿ ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಮಾತನಾಡಿ ಸಾಹಿತಿ, ಪತ್ರಕರ್ತರ ವೃತ್ತಿಯಲ್ಲಿ ನಡೆಯುವ ನೋವಿನ ಪ್ರಸಂಗಗಳಿಗೆ ನಗೆಲೇಪನ ಕೊಟ್ಟು ನಗೆಕಾರಂಜಿ ಎಬ್ಬಿಸಿದರು ಅಲ್ಲದೇ ಎಲ್ಲರನ್ನೂ ಹಾಸ್ಯಕೂಟ ಕರ‍್ಯಕ್ರಮಗಳಿಗೆ ಬಂದು ನಕ್ಕು, ನಗಿಸಿ ಮನಸ್ಸನ್ನು ಹಗುರ ಮಾಡು ವಂತೆ ಎಲ್ಲರಲ್ಲಿ ವಿನಂತಿಸಿ ಕೊಂಡರು.
ಜಿ. ಆರ್. ಕುಲಕರ್ಣಿ ನಗೆ ಚುಟು ಕುಗಳನ್ನು ಹೇಳಿ ರಂಜಿಸಿದರು.
ಚಾಟರ್ಟ ಅಕೌಂಟAಟ್‌ರಾದ ಶ್ರೀನಿವಾಸ ಶಿವಣಗಿ ಅಧ್ಯಕ್ಷತೆ ವಹಿಸಿದ್ದರು. ವ್ಯಾಸಾಚಾರ್ಯ ಅಂಬೇಕರ ನಿರೂಪಿಸಿದರು. ರಾಜೇಂದ್ರ ಕುಲಕರ್ಣಿ ಪರಿಚಯಿಸಿದರು. ಗುರುರಾಜ ಪರ್ವತಿಕರ ವಂದಿಸಿದರು. ಅರವಿಂದ ತೇಲಂಗ, ಸುನಿಲ ದೇಶಪಾಂಡೆ, ರಾಜು ಜೋಶಿ ಅತಿಥಿಗಳನ್ನು ಗೌರವಿಸಿದರು. ಪೂರ್ಣಬೋಧ ಕಡಗದಕೈ, ಮುಕುಂದ ದೇಸಾಯಿ, ವಿನಾಯಕ ಮು ತಾಲಿಕ ದೇಸಾಯಿ ಮಧ್ವಸಮಾಜದ ಅನೇಕ ಧುರಿಣರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker