ಭಾರತೀಯ ಸಂವಿಧಾನ ಕುರಿತು ಯಶಸ್ವಿ ಕಾರ್ಯಾಗಾರ

ಬೆಳಗಾವಿ- ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಳಗಾವಿ ,ಭಾರತ ಸೇವಾ ದಳ ಬೆಳಗಾವಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾರತೀಯ ಸಂವಿಧಾನ ಹಾಗೂ ವೈಜ್ಞಾನಿಕ ಮನೋವೃತ್ತಿ ಕುರಿತು ಒಂದು ದಿನದ ಕಾರ್ಯಾಗಾರ ಹಾಗೂ ಮಹಿಳಾ ಜಾಗೃತಿ ಶಿಬಿರವು ಇತ್ತೀಚೆಗೆ ಮಹಿಳಾ ಕಲ್ಯಾಣ ಸಂಸ್ಥೆ, ಭಾರತ ಕಾಲನಿ, ಬೆಳಗಾವಿಯ ಸಭಾಂಗಣದಲ್ಲಿ ಜರುಗಿತು
ಒಂದು ದಿನದ ಕಾರ್ಯಾಗಾರದ ಉದ್ಘಾಟಣೆಯನ್ನು ವಿಜಯ.ದೇವರಾಜಅರಸ, ಗೌರವಾನ್ವಿತ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ಇವರು ನೆರವೇರಿಸಿದರು. ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ಆಂದೋಲನದ ಕಾರ್ಯದರ್ಶಿಗಳಾದ ಪ್ರೊ.ಎಂ.ಅಬ್ದುಲ್ರೆಹಮಾನ ಪಾಷಾ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ.ಬಸವರಾಜ.ಎಂ.ಹಟ್ಟಿಗೌಡರ ಉಪದಳಪತಿ ಭಾರತ ಸೇವಾದಳ ಸಮೀತಿ ಹಾಗೂ ಶ್ರೀಮತಿ.ವೈಜಯಂತಿ. ಎಂ.ಚೌಗಲಾ, ಗೌ.ಕಾರ್ಯದರ್ಶಿಗಳು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರು ಆಗಮಿಸಿದ್ದರು.
ವಿಜಯ.ದೇವರಾಜಅರಸ ಗೌರವಾನ್ವಿತ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ಇವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉಚಿತ ಸೇವೆಗಳ ಬಗ್ಗೆ, ಪಾರಿವಾರಿಕ ಲೋಕ ಅದಾಲತ್ ಕುರಿತು ಮಾಹಿತಿ ನೀಡಿದರು. ಬಸವರಾಜ.ಎಂ.ಹಟ್ಟಿಗೌಡರ ಉಪದಳಪತಿ ಭಾರತ ಸೇವಾದಳ ಸಮೀತಿ ಇವರು ಭಾರತ ಸೇವಾದಳದ ಬಗ್ಗೆ ಮಾಹಿತಿ ನೀಡಿದರು.
ಪ್ರೊ.ಎಂ.ಅಬ್ದುಲ್ರೆಹಮಾನ ಪಾಷಾ ಇವರು ತಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ವೈಜ್ಞಾನಿಕ ಮನೋವೃತ್ತಿ ಕುರಿತು ಮಾತನಾಡಿ, ನಂಬಿಕೆ, ಮೂಢನಂಬಿಕೆ, ಸೂರ್ಯಗ್ರಹಣ, ಖಗೋಳಶಾಸ್ತ್ರ, ಪವಾಡಗಳ ಕುರಿತು ಮಾಹಿತಿ ನೀಡಿದರು. ನಂತರ ಭಾರತದ ಸಂವಿಧಾನದ ಕುರಿತು ಮಾಹಿತಿ ನೀಡುತ್ತಾ, ಭಾರತೀಯ ಸಂವಿಧಾನದ ಪ್ರಸ್ತಾವನೆ, ಪರಿಚಯ, ಸಂವಿಧಾನದ ರಚನಾ ಸಭೆ, ಮೂಲಭೂತ ಹಕ್ಕುಗಳು ಕರ್ತವ್ಯಗಳು, ಅಧಿಕಾರ, ಸಂವಿಧಾನದ ಸಾಕ್ಷರತೆಯ ಅಗತ್ಯಗಳ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಕಲ್ಯಾಣ ಸಂಸ್ಥೆಯ ಸಿಬ್ಬಂದಿ ವರ್ಗದವರು, ಸೇವಾದಳದ ಕಾರ್ಯಕರ್ತರು, ದೇಶಪಾಂಡೆ ಫೌಂಡೇಶನ್ದ ಕಾರ್ಯಕರ್ತರು ಭಾಗವಹಿಸಿದ್ದರು. “ಉಜ್ವಲಾ” ಕೇಂದ್ರದ ನಿವಾಸಿಗಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಆರಂಭವಾಗಿ , ಕವಿತಾ.ಅಕ್ಕಿ ಸಲಹಾಗಾರರು “ಸಂಗಾತಿ” ಕೌಟುಂಬಿಕ ಸಲಹಾ ಕೇಂದ್ರ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್.ಚೌಗಲಾ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.