Belagavi

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಆನಂದ ಮಾಮನಿ

" ಯರಗಟ್ಟಿಯಲ್ಲಿ ಇದೆ ತಿಂಗಳ 28 ರಂದು ನೂತನ ತಾಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ತಾಲೂಕಿನ ಸಮಸ್ತ ಮಹಾ ಜನತೆ ಇದರಲ್ಲಿ ಪಾಲ್ಗೊಂಡು ಕನ್ನಡದ ಈ ಜಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು. ಆನಂದ ಮಾಮನಿ ವಿಧಾನಸಭಾ ಉಪಸಭಾಧ್ಯಕ್ಷರ

ಯರಗಟ್ಟಿ: ಸ್ಥಳೀಯ ಯರಗಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 10 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಯರಗಟ್ಟಿ ಪಟ್ಟಣವನ್ನು ಸಂಪೂರ್ಣ ಅಭಿವೃದ್ಧಿ ನಡೆಸಲಾಗುವುದು. ಇಲ್ಲಿನ ಕುಮಾನ ಮಡ್ಡಿಯಲ್ಲಿ 2 ಕೋಟಿ ರೂ. ಅನುದಾನದಲ್ಲಿ ಮೂಲಭೂತ ಸೌಲಭ್ಯ ಒದಗಿಸಲಾಗುವು.

ಬರುವ ದಿನದಲ್ಲಿ ಸತ್ತಿಗೇರಿಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಪ್ರಾರಂಭಿಸಲಾಗುವುದು ಮತ್ತು ಶೀಘ್ರದಲ್ಲಿ ಸತ್ತಿಗೇರಿ ನೀರಾವರಿ ಯೋಜನೆಗೆ ಚಾಲನೆ ನೀಡಿಲಾಗುವುದು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಈ ಸಂದರ್ಭದಲ್ಲಿ ಯರಗಟ್ಟಿ ಜಿ. ಪಂ ಸದಸ್ಯರಾದ ಅಜೀತಕುಮಾರ ದೇಸಾಯಿ, ಮಾಜಿ ಎ ಪಿ ಎಂ ಸಿ ಅಧ್ಯಕ್ಷರಾದ ಬಸಯ್ಯ ಹಿರೇಮಠ, ಈರಣ್ಣಾ ಚಂದರಗಿ, ಸತ್ತಿಗೇರಿ ಗ್ರಾ. ಪಂ. ಅಧ್ಯಕ್ಷರಾದ ಗೌಡಪ್ಪ ಸವದತ್ತಿ, ವಿಶಾಲಗೌಡ ಪಾಟೀಲ, ವೆಂಕಟೇಶ ದೇವರಡ್ಡಿ, ಸದಾನಂದ ಹಣಬರ, ಶಿವಾನಂದ ಕರಿಗೋಣ್ಣವರ, ಮಹೇಶ ಕರ್ಜಗಿಮಠ, ಹನಮಂತ ಪಾಟೀಲ, ಗುರು ವಾಲಿ, ರಾಜೇಶ್ವರಿ ಮಹಾಕಾಳಿ, ಮಹಾಂತೇಶ ಗೋಡಿ ಇತರರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker