Karnataka
ಅಫ್ಗಾನಿಸ್ತಾನದಲ್ಲಿ ಬೆಂಕಿ ಅವಘಡ 100ಕ್ಕೂ ಹೆಚ್ಚು ತೈಲ ಟ್ಯಾಂಕರ್ ನಾಶ
ಇಸ್ಲಾಂ ಖಲ: ಅಫ್ಗಾನಿಸ್ತಾನ ಮತ್ತು ಇರಾನ್ ಗಡಿ ಪ್ರದೇಶ ಬಳಿಯ ಬಂದರು ಪ್ರದೇಶದಲ್ಲಿ ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, 100ಕ್ಕೂ ಅಧಿಕ ತೈಲ ಟ್ಯಾಂಕರ್ಗಳು ಭಸ್ಮವಾಗಿವೆ.
‘ಇದು ಇರಾನ್ನೊಂದಿಗಿನ ಅಫ್ಗಾನಿಸ್ತಾನದ ಅತಿ ದೊಡ್ಡ ವ್ಯಾಪಾರವಾಗಿತ್ತು. ಆದರೆ ಈ ಬೆಂಕಿ ಅವಘಡದಿಂದಾಗಿ ಅಫ್ಗಾನಿಸ್ತಾನಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಹೇರತ್ನಿಂದ 120 ಕಿ.ಮೀ ದೂರದಲ್ಲಿರುವ ಇಸ್ಲಾಂ ಖಲ ಬಂದರಿನಲ್ಲಿ ಶನಿವಾರ ಸಂಜೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿಯನ್ನು ಭಾಗಶಃ ನಂದಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಇಸ್ಲಾಂ ಖಲವು ಅಫ್ಗಾನಿಸ್ತಾನದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಅಮೆರಿಕವು ಇರಾನ್ ಮೇಲೆ ನಿರ್ಬಂಧ ಹೇರಿದೆ. ಈ ನಡುವೆಯೂ ಅಫ್ಗಾನಿಸ್ತಾನವು ಅಮೆರಿಕದ ಅನುಮತಿ ಪಡೆದು ಇರಾನ್ನಿಂದ ತೈಲವನ್ನು ಆಮದು ಮಾಡಿಕೊಂಡಿತ್ತು.