Belagavi

ಕೋವಿಡ್ 19 ಸಾಂಕ್ರಾಮಿಕ ರೋಗಗಳ ಬಗ್ಗೆ ಪ್ರಭಂದ ಸ್ಪರ್ಧೆ

ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ತಾಲೂಕಾ ಆರೋಗ್ಯಾಧಿಕಾರಿಗಳು ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗಗಳ ಬಗ್ಗೆ ಪ್ರಭಂದ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ಯು. ಬಿ. ಬೆಟಗೇರಿ, ಮುರಗೇಶ ಗುಣಕಿ, ಆಯ್. ಆರ್. ಗಂಜಿ, ವಿಧ್ಯಾರ್ಥಿಗಳು ಹಾಜರಿದ್ದರು
ಅಧ್ಯಕ್ಷ ತೆಯನ್ನು ಶ್ರೀಕಾಂತ ಕರಲಿಂಗಪ್ಪನವರ, ಉಪಪ್ರಾಂಶುಪಾಲರು. ಸತ್ತಿಗೇರಿ ಇವರು ವಹಿಸಿದ್ದರು.

ಕೋವಿಡ್ 19 ರೋಗ ವನ್ನು ನಿಯಂತ್ರಣ ಮಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವದು, ಮಾಸ್ಕ ಧರಿಸುವದು, ಸ್ಯಾನಿಟೈಜರ್ ಬಳಸುವದಾಗಿದೆ, ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಗೆ ಕೋವಾಕ್ಸಿನ್ ಲಸಿಕೆ ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಇತರೆ ಇಲಾಖೆಯ ಸಿಬ್ಬಂದಿಯವರಿಗೆ ಲಸಿಕೆ ಕೊಡಲಾಗುವದು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ
ಶ್ರೀ ಯು. ಬಿ. ಬೆಟಗೇರಿ, ಕಿರಿಯ ಆರೋಗ್ಯ ನಿರಿಕ್ಷಕ ಹೇಳಿದರು. ಸೋಂಕಿತ ಗಾಳಿಯಿಂದ ಬರುವ ರೋಗಗಳಾದ ಕ್ಷಯರೋಗ. ಕೋವಿಡ್ 19 ಕುಷ್ಠರೋಗ. ಹೆಚ್1 ಎನ್1 ರೋಗಗಳ ಹರಡುವಿಕೆ ಲಕ್ಷಣಗಳು ನಿಯಂತ್ರಣ ಮಾಡಲು ವೈಯಕ್ತಿಕ ಆರೋಗ್ಯ ಪರಿಸರ ನೈರ್ಮಲ್ಯದ ಶುಚಿತ್ವ ಬಗ್ಗೆ ಮತ್ತು ಕಲುಷಿತ ನೀರಿನಿಂದ ಬರುವ ರೋಗಗಳಾದ ಕಾಲರಾ, ಕಾಮಣಿ, ವಾಂತಿ, ಭೇದಿ, ಟೈಪಾಯಿಡ್, ಪೋಲಿಯೊ, ಆಮಶಂಕೆ ರೋಗಗಳ ಹರಡುವಿಕೆ ನಿಯಂತ್ರಣ ಮಾಡಲು ಶುದ್ದ ಕುಡಿಯುವ ನೀರಿನ ಬಳಕೆ. ಪಾದರಕ್ಷೆಗಳ ಬಳಕೆ. ಶೌಚಾಲಯದ ಮಹತ್ವ. ವೈಯಕ್ತಿಕ ಆರೋಗ್ಯ ಕಾಪಾಡುವದಾಗಿದೆ ಹಾಗೂ ಸೋಂಕಿತ ರಕ್ತ ದಿಂದ ಬರುವ ರೋಗಗಳಾದ ಹೆಚ್ ಆಯ್ ವಿ/ಏಡ್ಸ್ ಕಾಮಾಲೆ ರೋಗಗಳ ಹರಡುವಿಕೆ ನಿಯಂತ್ರಣದ ಬಗ್ಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರಿ ಆಯ್. ಆರ್. ಗಂಜಿ ಹೇಳಿದರು ನಂತರ ಕೀಟ ಜನ್ಯ ರೋಗಗಳಾದ ಮಲೇರಿಯಾ, ಡೆಂಗಿಜ್ವರ, ಚಿಕುನ್ ಗುಣ್ಯ ಮೆದುಳು ಜ್ವರ, ಆನೆ ಕಾಲು ರೋಗ. ಜಿಕಾವೈರಸ್ ರೋಗಗಳ ಹರಡುವಿಕೆ. ಲಕ್ಷಣಗಳು. ನಿಯಂತ್ರಣ ಕ್ರಮಗಳ ಬಗ್ಗೆ ಹಿರಿಯ ಆರೋಗ್ಯ ನಿರಿಕ್ಷರಾದ ಶ್ರೀ ಮುರಗೇಶ ಗುಣಕಿ ಹೇಳಿದರು.
ಸದರಿ ಪ್ರಭಂದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಯಿತು. ಆರೋಗ್ಯ ಇಲಾಖೆಯ ಆರೋಗ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮೂಲಕ ಮನೆ ಮನೆ ತಲುಪಿ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿಗೆ ದಾರೀದೀಪವಾಗಬೇಕೆಂದು ಅಧ್ಯಕ್ಷತೆ ವಹಿಸಿದ್ದ ಶ್ರೀಕಾಂತ ಕರಲಿಂಗಪ್ಪನವರ ಹೇಳಿದರು. ಎಸ್. ಸಿ. ಹೊಶೆಟ್ಟಿ ನಿರೂಪಣೆ ಮಾಡಿ ಸ್ವಾಗತಿಸಿ ಸರಸ್ವತಿ ಜಗಲಿ ವಂದಿಸಿದರು
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker