Belagavi

೨೦೨೧-೨೨ನೇ ಸಾಲಿನ ಮಹಾನಗರ ಪಾಲಿಕೆಯ ಬಜೆಟ್ ಮಂಡನೆ ಬಜೆಟ್ ಗಾತ್ರ ೪೧,೧೨೮ ಲಕ್ಷ; ೧೩.೫೧ ಲಕ್ಷ ಉಳಿತಾಯ ನಿರೀಕ್ಷೆ

ಬೆಳಗಾವಿ ಫೆ.೧೭ : ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಹಾನಗರ ಪಾಲಿಕೆಯ ೨೦೨೧-೨೨ ನೇ ಸಾಲಿನ ಬಜೆಟ್ ಅನ್ನು ಬುಧವಾರ(ಫೆ.೧೭) ಮಂಡಿಸಿದರು.
೨೦೨೧-೨೨ ನೇ ಸಾಲಿನಲ್ಲಿ ಪಾಲಿಕೆಯ ಒಟ್ಟು ಸ್ವೀಕೃತಿ ರೂ. ೪೧,೧೨೮.೩೨ ಲಕ್ಷಗಳು ನಿರೀಕ್ಷಿಸಲಾಗಿದ್ದು, ಒಟ್ಟಾರೆಯಾಗಿ ರೂ. ೪೧,೧೧೪.೮೧ ಲಕ್ಷಗಳಷ್ಟು ಅಂದಾಜು ವೆಚ್ಚ ಭರಿಸಲು ನಿರೀಕ್ಷಿಸಲಾಗಿದೆ. ಅಂದಾಜು ರೂ. ೧೩.೫೧ ಲಕ್ಷಗಳಷ್ಟು ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಆಯವ್ಯಯಪತ್ರದಲ್ಲಿ ತಿಳಿಸಲಾಗಿದೆ.
೨೦೨೧-೨೨ ನೇ ಸಾಲಿನ ಮಹಾನಗರ ಪಾಲಿಕೆಯ ಅಂದಾಜು ಆಯವ್ಯಯದ ಮುಖ್ಯಾಂಶಗಳು ಆಯವ್ಯಯದ ಪಕ್ಷಿನೋಟ :- ಒಟ್ಟು ಸ್ವೀಕೃತಿ : ರೂ. ೪೧,೧೨೮.೩೨ ಲಕ್ಷಗಳು, ಒಟ್ಟು ವೆಚ್ಚ : ರೂ. ೪೧,೧೧೪.೮೧ ಲಕ್ಷಗಳು೨೦೨೧-೨೨ ನೇ ಸಾಲಿನ ಮಹಾನಗರ ಪಾಲಿಕೆ ಬೆಳಗಾವಿಯ ಆಯವ್ಯಯವನ್ನು ಹಾಗೂ ೨೦೨೦-೨೧ ನೇ ಸಾಲಿನ ಪರಿಷ್ಕೃತ ಆಯವ್ಯಯವನ್ನು ಮಂಡಿಸಲು ನನಗೆ ತುಂಬಾ ಹರ್ಷವೆನಿಸುತ್ತದೆ.
ಈ ೨೦೨೧-೨೨ ನೇ ಸಾಲಿನ ಆಯವ್ಯಯವನ್ನು ಮಹಾನಗರ ಪಾಲಿಕೆ ಬೆಳಗಾವಿಯ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ನಗರದ ಎಲ್ಲ ವರ್ಗದ ನಾಗರೀಕರನ್ನು ಗಮನದಲ್ಲಿರಿಸಿ ರೂಪಿಸಲಾಗಿದೆ. ಬೆಳಗಾವಿಯು ಸುಂದರ ನಗರವಾಗಲು ಹಾಗೂ ಉತ್ತಮ ಪರಿಸರವನ್ನು ಹೊಂದಲು ಜನಪರ ಅಭಿವೃದ್ದಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮುಖ್ಯವಾಗಿ ಹಿರಿಯ ನಾಗರೀಕರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಶಾಲಾ ಮಕ್ಕಳ ಹಾಗೂ ದಿವ್ಯಾಂಗರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಈ ಆಯವ್ಯಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಮಾರ್ಟ ಸಿಟಿ ಯೋಜನೆಯೊಂದಿಗೆ ನಗರದ ವೃತ್ತಗಳನ್ನು ಮತ್ತು ರಸ್ತೆಗಳನ್ನು ಮತ್ತು ಬಸ್ ತಂಗುದಾಣಗಳನ್ನು ಸುಂದರೀಕರಣಗೊಳಿಸುವದು ಪ್ರಮುಖ ಯೋಜನೆಗಳಾಗಿವೆ. ನಗರದಲ್ಲಿರುವ ಖಾಲಿ ಸ್ಥಳಗಳನ್ನು ತಂಗುದಾಣಗಳಿಗಾಗಿ ಮತ್ತು ಮಾರುಕಟ್ಟೆಗಳಿಗಾಗಿ ಮಾರ್ಪಡಿಸಿ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಾಗೂ ನಗರದ ಗಣ್ಯವ್ಯಕ್ತಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಬೆಳಗಾವಿ ಸಮಗ್ರ ಅಭಿವೃಧ್ದಿಯಾಗುವ ಕನಸನ್ನು ನನಸಾಗಿಸುವ ಪಥದತ್ತ ಸಾಗುವದು ಈ ಅಂದಾಜು ಆಯವ್ಯಯದ ಪ್ರಮುಖ ವಿಷಯಗಳು.
೧. ಆಸ್ತಿ ತೆರಿಗೆ
೨೦೧೯-೨೦ ಆಸ್ತಿ ತೆರಿಗೆ ಆಕರಣೆ ವಿಶೇಷ ಅಭಿಯಾನವನ್ನು ಈ ವರ್ಷವೂ ಮುಂದುವರೆಸುತ್ತಾ, ಆನ್‌ಲೈನ್ ತೆರಿಗೆ ಪಾವತಿಯ ಸೌಲಭ್ಯ ಒದಗಿಸಿದ್ದು ಮತ್ತು ಪೇ-ಟಿಎಮ್ ಆಪ್ ಹಾಗೂ ಇಆಅ (ಇಲೆಕ್ಟಾçನಿಕ್ ಡಾಟಾ ಕ್ಯಾಪ್ಚರ್) ಮಶಿನ್‌ಗಳನ್ನು ಕರ ವಸೂಲಿಗಾರರಿಗೆ ಒದಗಿಸಿ ತೆರಿಗೆ ಪಾವತಿದಾರರ ಮನೆ ಮನೆಗೆ ಹೋಗಿ ತೆರಿಗೆ ವಸೂಲು ಮಾಡುವ ಪ್ರಕ್ರಿಯೇ ಪ್ರಗತಿಯಲ್ಲಿದ್ದು, ೨೦೨೦-೨೧ ಸಾಲಿನಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗ ಕಾರಣದಿಂದ ಪ್ರಸಕ್ತ ಆಸ್ತಿ ತೆರಿಗೆಯಲ್ಲಿ ನಿವ್ವಳ ಆದಾಯ ಕುಂಠಿತಗೊAಡಿರುತ್ತದೆ. ಈ ಹಿನ್ನೆಲೆಯಲ್ಲಿ ೨೦೨೧-೨೨ ನೇ ಸಾಲಿಗೆ ರೂ. ೫೦೦೦.೦೦ ಲಕ್ಷ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಹೆಚ್ಚಿನ ತಂಡವನ್ನು ರಚಿಸಿ ರಾಜಸ್ವ ಜಮೆಯಾಗುವ ನಿರೀಕ್ಷಿಸಲಾಗಿದೆ.
ಸರ್ಕಾರಿ ನಿಯಮಾವಳಿಯ ಪ್ರಕಾರ ಪರಿಸರ ಸ್ನೇಹಿ ಕಟ್ಟಡಗಳಿಗೆ, ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಹಾಗೂ ಸ್ವಾತಂತ್ರö್ಯ ಯೋಧರಿಗೆ ರೂ. ೧೦% ರಷ್ಟು ರಿಯಾಯಿತಿ ಕೊಡುವದನ್ನು ಈ ವರ್ಷವೂ ಮುಂದುವರೆಸಲಾಗುವುದು. ಆಸ್ತಿ ತೆರಿಗೆಯ ಮೇಲಿನಿಂದ ಉಪಕರಗಳಾದ ನಗರ ಸಾರಿಗೆ ಉಪಕರ, ಆರೋಗ್ಯಕರ, ಶಿಕ್ಷಣಕರ, ಭಿಕ್ಷÄಕ ಕರ, ವಾಚನಾಲಯ ಕರ ವಸೂಲಾತಿಯಾಗಿರುವ ಮೊತ್ತದಲ್ಲಿ ಸರ್ಕಾರಕ್ಕೆ ಭರಣಾ ಮಾಡಿದ ನಂತರ ಶೇ ೧೦% ರಷ್ಟು ವಸೂಲಾತಿಯ ಮೇಲೆ ಆದಾಯ ನಿರೀಕ್ಷಿಸಲಾಗಿದೆ.
ಆಸ್ತಿ ತೆರಿಗೆಯ ಮೇಲೆ ವಿಳಂಬ ನೀತಿ ಅನುಸರಿಸುವ ತೆರಿಗೆ ಪಾವತಿದಾರರಿಂದ ರೂ. ೩೦೦.೦೦ ಲಕ್ಷಗಳಷ್ಟು ದಂಡ ರೂಪದಲ್ಲಿ ಆದಾಯ ನಿರೀಕ್ಷಿಸಲಾಗಿದೆ.
ಅಲ್ಲದೇ ನಗರ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳ ವರ್ಗಾವಣೆಯಿಂದ ಅಧಿಭಾರ ಶುಲ್ಕದಿಂದ ನೋಂದಣಿ ಇಲಾಖೆಯಿಂದ ರೂ. ೧೫೦.೦೦ ಲಕ್ಷಗಳ ಆದಾಯ ನಿರೀಕ್ಷಿಸಲಾಗಿದೆ.
ಪಾಲಿಕೆಯ ವಾಣಿಜ್ಯ ಮಳಿಗೆಗಳಿಂದ ಮತ್ತು ಫುಡ್ ಕಿಯೋಸ್ಕಿಯಿಂದ ರೂ. ೨೦೫.೦೦ ಲಕ್ಷಗಳ ಆದಾಯ ನಿರೀಕ್ಷಿಸಲಾಗಿದೆ.
೨. ನಗರ ಯೋಜನೆ ಶಾಖೆ
ಪಾಲಿಕೆಗೆ ಅಭಿವೃದ್ದಿ ಶುಲ್ಕದಿಂದ ರೂ.೬೦೦.೦೦ ಲಕ್ಷ, ಮೂಲಭೂತ ಸೌಕರ್ಯದ ಬೆಟರಮೆಂಟ ಶುಲ್ಕದಿಂದ ರೂ.೨೫.೦೦ ಲಕ್ಷಗಳನ್ನು, ಕಟ್ಟಡ ಅವಶೇಷ ನಿರ್ಮೂಲನೆಗಳಿಂದ ರೂ. ೧೦೦.೦೦ ಲಕ್ಷಗಳು, ಕಟ್ಟಡ ಪರವಾ ನಿಗೆಯಿಂದ ರೂ.೧೮೫.೦೦ ಲಕ್ಷಗಳ ಆದಾಯ ಬರುವ ನಿರೀಕ್ಷೆ ಇದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಹೆಸ್ಕಾಂದಿAದ ಅಳವಡಿಸಿರುವ ಭೂಗತ ಕೇಬಲ್ ಸಂಪರ್ಕದಿAದ ರೂ. ೧೭೦೦ ಲಕ್ಷಗಳು ಆದಾಯ ನಿರೀಕ್ಷೆ ಇದೆ.
ಕುಡಿಯುವ ನೀರಿನ ಪೂರೈಕೆ
ಹಿಡಕಲ್ ಜಲಾಶಯದಿಂದ ಬೃಹತ್ ಉದ್ದಿಮೆಗಳಿಗೆ ನೀರು ಸರಬರಾಜು ಮಾಡಲು ಬಳಸುವ ವಿದ್ಯುತಶಕ್ತಿಯ ಬಿಲ್ಲುಗಳ ಮರು ಪಾವತಿಯಿಂದ ರೂ. ೩೫೦.೦೦ ಲಕ್ಷಗಳನ್ನು ಈ ವರ್ಷವು ಮುಂದುವರೆಸಲಾಗಿದೆ.
೩. ಉದ್ದಿಮೆ ಪರವಾನಿಗೆ
ಉದ್ದಿಮೆ ಪರವಾನಿಗೆ ಶುಲ್ಕವಾಗಿ ರೂ. ೨೦೦.೦೦ ಲಕ್ಷಗಳ ಆದಾಯ ಪಾಲಿಕೆಯ ಬೊಕ್ಕಸಕ್ಕೆ ಬರಲಿದೆ. ವಾಹನ ನಿಲುಗಡೆ ಫೀಗಳಿಂದ ರೂ. ೨೦.೦೦ ಲಕ್ಷ ನಿರೀಕ್ಷಿಸಲಾಗಿದೆ.. ಗಣಕೀಕೃತ ಆನ್‌ಲೈನ್ ಉದ್ದಿಮೆ ಪರವಾನಿಗೆ ಸೇವೆಯನ್ನು ಒದಗಿಸಲಾಗುತ್ತಿದ್ದು, ಪ್ರತಿಯೊಂದು ಮಾಹಿತಿಯನ್ನು ಪಾಲಿಕೆಯ ಅಂತರಜಾಲದಲ್ಲಿ ಲಭ್ಯವಿರುವ ಹಾಗೆ ಮಾಡಿದೆ. ಇದರಿಂದ ಹೆಚ್ಚಿನ ಆದಾಯದ ನಿರೀಕ್ಷೆ ಇದೆ.
೪. ಮಹಾನಗರ ಪಾಲಿಕೆಯ ಒಡೆತನದ ಕ್ರೀಡಾ ಚಟುವಟಿಕೆಗಳಿಗಾಗಿ ನಿರ್ಮಿಸಲಾದ, ಈಜುಕೊಳ, ಬ್ಯಾಡ್ಮಿಂಟನ್ ಇತರೆ ಚಟುವಟಿಕೆಗಳಿಂದ ರೂ. ೫೧.೦೦ ಲಕ್ಷಗಳ ಆದಾಯ ನಿರೀಕ್ಷಿಸಲಾಗಿದೆ.
೫. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸ್ವೀಕೃತಿ ೨೦೨೧-೨೨ ನೇ ಸಾಲಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ರೂ. ೩೯೧೫.೦೦ ಲಕ್ಷ ಆದಾಯವನ್ನು ನೀರಿನ ತೆರಿಗೆ ಮತ್ತು ಹೊಸ ಜೋಡಣೆಗಳಿಂದ ಹಾಗೂ ಬೃಹತ್ ಕೈಗಾರಿಕೆಗಳಿಗೆ ಒದಗಿಸುವ ನೀರಿನಿಂದ ನಿರೀಕ್ಷಿಸಲಾಗಿದೆ.
ಕೆ.ಯು.ಐ.ಡಿ.ಎಫ್.ಸಿ ೧೦ ವಾರ್ಡಗಳ ನಿರಂತರ ನೀರು ಸರಬರಾಜು (೨೪/೭) ಡೆಮೋ ಝೋನ್‌ಗಳಿಂದ ನೀರಿನ ಕರ ಮೊತ್ತ ರೂ. ೩೭೨.೦೦ ಲಕ್ಷಗಳನ್ನು ನಿರೀಕ್ಷಿಸಲಾಗಿದೆ.
೬. ಬಂಡವಾಳ ಸ್ವೀಕೃತಿ
ಪಾಲಿಕೆಯ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳ ಮಾರಾಟದಿಂದ ರೂ. ೫೦೦.೦೦ ಲಕ್ಷಗಳ ಆದಾಯ ನಿರೀಕ್ಷಿಸಲಾಗಿದೆ.
೭. ಸರ್ಕಾರದಿಂದ ಬರುವ ಅಂದಾಜು ಅನುದಾನಗಳು
೧. ಮಹಾನಗರ ಪಾಲಿಕೆ ಬೆಳಗಾವಿಗೆ ಸಿಬ್ಬಂದಿಗಳ ಮಾಸಿಕ ವೇತನ ಬಟವಡೆಗಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ ವೇತನ ಅನುದಾನ ರೂ. ೬೦೮೭.೩೦ ಲಕ್ಷಗಳಷ್ಟು ನಿರೀಕ್ಷಿಸಲಾಗಿದೆ.
೨. ಮಹಾನಗರ ಪಾಲಿಕೆ ಬೆಳಗಾವಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ ಬೀದಿ ದೀಪಗಳ ಹಾಗೂ ನೀರು ಸರಬರಾಜು ವಿದ್ಯುತ್‌ಶಕ್ತಿ ಬಿಲ್ಲಿನ ಅನುದಾನ ರೂ. ೩೬೬೯.೨೬ ಲಕ್ಷಗಳಷ್ಟು ನಿರೀಕ್ಷಿಸಲಾಗಿದೆ.
೩. ಮಹಾನಗರ ಪಾಲಿಕೆ ಬೆಳಗಾವಿಗೆ ಅಭಿವೃಧ್ದಿಗಾಗಿ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ ರೂ. ೬೨೫.೦೦ ಲಕ್ಷಗಳಷ್ಟು ನಿರೀಕ್ಷಿಸಲಾಗಿದ್ದು, ಅದಕ್ಕನುಗುಣವಾಗಿ ಸರ್ಕಾರದ ನಿರ್ದೇಶನದಂತೆ ಶೇ. ೨೪.೧೦%, ೭.೨೫% ಮತ್ತು ಶೇ ೫% ರಷ್ಟು ಮೊತ್ತವನ್ನು ಕಾಯ್ದಿರಿಸಿ, ಬಾಕಿ ಮೊತ್ತವನ್ನು ಹೊರಗುತ್ತಿಗೆ ಕಾರ್ಮಿಕರ ವೇತನ ಮತ್ತು ಇಂದಿರಾ ಕ್ಯಾಂಟೀನಗಳ ಆವರ್ತಕ ವೆಚ್ಚಕ್ಕಾಗಿ ಬಳಸಲಾಗುವುದು.
೪. ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ೧೫ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿ ಇತರೆ ಕಾರ್ಯಕ್ರಮಗಳಿಗಾಗಿ ರೂ. ೨೩೨೪.೦೦ ಲಕ್ಷಗಳ ಅನುದಾನ ನಿರೀಕ್ಷಿಸಲಾಗಿದೆ.
೫. ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ ವಿಶೇಷ ಅನುದಾನ ದಕ್ಷಿಣ ಮತಕ್ಷೇತ್ರ ಹಾಗೂ ಉತ್ತರ ಮತಕ್ಷೇತ್ರಗಳಿಗೆ ತಲಾ ೧೦೦೦.೦೦ ಲಕ್ಷಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ರೂ. ೫೦೦.೦೦ ಲಕ್ಷಗಳು ಒಟ್ಟು ರೂ. ೨೫೦೦.೦೦ ಲಕ್ಷಗಳ ಅನುದಾನ ಮಂಜೂರಾಗಿರುತ್ತದೆ. ಅದಕ್ಕನುಗುಣವಾಗಿ ಮಾನ್ಯ ಶಾಸಕರುಗಳ ಕೋರಿಕೆ ಮೇರೆಗೆ ನಗರದ ಅಭಿವೃಧ್ದಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುವುದು.
೬. ಅದರಂತೆ ನೂತನವಾಗಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳಿಗೆ ರೂ. ೧೨೫.೦೦ ಕೋಟಿ ಗಳ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅವಕಾಶ ಕಲ್ಪಿಸಿ ಮಾರ್ಗ ಸೂಚಿಗಳ ಪ್ರಕಾರ ಪ್ರತಿ ವರ್ಷಕ್ಕೆ ರೂ. ೩೧೨೫.೦೦ ಲಕ್ಷಗಳ ಅನುದಾನ ಕಲ್ಪಿಸಿದ್ದು, ಒಟ್ಟಾರೆ ೧೨೫.೦೦ ಕೋಟಿಗಳ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುವುದು.
೭. ಅಮೃತ ಯೋಜನೆಗಾಗಿ ರೂ. ೨೦೦೦.೦೦ ಲಕ್ಷಗಳ ವಂತಿಗೆ ಮೊತ್ತವನ್ನು ಕಾಯ್ದಿರಿಸಲಾಗಿದೆ.ಒಟ್ಟಾರೆ ಸ್ವೀಕೃತಿ ೨೦೨೧-೨೨ ನೇ ಸಾಲಿಗಾಗಿ ರೂ. ೪೧,೧೨೮.೩೨ ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
೨೦೨೧-೨೨ ನೇ ಸಾಲಿನ ಅಂದಾಜು ನಿರ್ವಹಣಾ ವೆಚ್ಚದ ವಿವರಗಳು
೧. ಸ್ವಚ್ಚ ಬೆಳಗಾವಿ
ಬೆಳಗಾವಿ ನಗರವನ್ನು ಸ್ವಚ್ಚ ಹಾಗೂ ನಿರ್ಮಲ ನಗರವನ್ನಾಗಿಸುವ ನಿಟ್ಟಿನಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ರೂ. ೨೫೦೦.೦೦ ಲಕ್ಷಗಳನ್ನು ನಿಗದಿ ಮಾಡಿದ್ದು, ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನೇರವಾಗಿ ಸ್ವಚ್ಚತಾ ಕಾರ್ಮಿಕರುಗಳ ಖಾತೆಗೆ ಜಮೆ ಮಾಡುವ ಕುರಿತು ರೂ. ೧೫೦೦.೦೦ ಲಕ್ಷಗಳಷ್ಟು ಹೊರಗುತ್ತಿಗೆ ಕಾರ್ಮಿಕರಿಗೆ ವ್ಯಯಿಸಲು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪ್ರಥಮ ಆದ್ಯತೆ ಮೇಲೆ ಈ ಕಾರ್ಯ ನಿರ್ವಹಿಸಲಾಗುವುದು.
ರೂ. ೫೦೦.೦೦ ಲಕ್ಷಗಳನ್ನು ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ ಮೀಸಲಿರಿಸಿದ್ದು, ಸ್ವಚ್ಚ ಭಾರತ ಮಿಶನ್ ಯೋಜನೆಗೆ ಹೆಚ್ಚಿನ ಮಹತ್ವವನ್ನು ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದ ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಬಂಧ ಸ್ಪರ್ದೆ, ಚಿತ್ರಕಲಾ ಸ್ಪರ್ದೆ ಜಾತಾಗಳನ್ನು ಏರ್ಪಡಿಸಿ ಜನರಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚಿನ ಅರಿವು ಮೂಡಲು ಪ್ರಯತ್ನಿಸಲಾಗುವುದು.
೨. ನಿರ್ವಹಣೆ
ಬೀದಿ ದೀಪಗಳ ನಿರ್ವಹಣೆಗಾಗಿ ರೂ. ೫೫೦.೦೦ ಲಕ್ಷಗಳನ್ನು ವ್ಯಯಿಸಲು ನಿರ್ಧರಿಸಲಾಗಿದೆ ಹಾಗೂ ನಗರದಾದ್ಯಂತೆ ಸ್ಮಾರ್ಟ ಸಿಟಿ ಸಹಯೋಗದೊಂದಿಗೆ ಎಲ್.ಇ.ಡಿ. ಯೋಜನೆ ಕೈಗೆತ್ತಿಕೊಳ್ಳಾಗಿದೆ.
ರಸ್ತೆಗಳ ನಿರ್ವಹಣೆಗಾಗಿ ರೂ. ೨೫೦.೦೦ ಲಕ್ಷ, ರೂ. ೧೦೦.೦೦ ಲಕ್ಷಗಳನ್ನು ಪಾದಾಚಾರಿಗಳ ನಿರ್ವಹಣೆಗಾಗಿ, ರೂ. ೩೦.೦೦ ಲಕ್ಷಗಳು ಚರಂಡಿಗಳ ಮತ್ತು ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಮತ್ತು ಪಥ ಸಂಕೇತಗಳನ್ನು ಅಳವಡಿಸಲು ರೂ. ೩೦.೦೦ ಲಕ್ಷಗಳನ್ನು ನಿಗಧಿಪಡಿಸಿದೆ.
೩. ಕ್ರೀಡೆ / ಕ್ರೀಡಾ ಚಟುವಟಿಕೆಗಳಿಗಾಗಿü
ಪಾಲಿಕೆಯ ಆದಾಯದಲ್ಲಿ ಶೇ ೧% ರಷ್ಟು ಮೊತ್ತದಲ್ಲಿ ರೂ. ೧೭.೨೩ ಲಕ್ಷಗಳನ್ನು ಕ್ರೀಡೆಗಳಿಗಾಗಿ ಮೀಸಲಿರಿಸಲಾಗಿದೆ.
೪. ಅಧ್ಯಯನ ಪ್ರವಾಸ ಸರಕಾರದ ಅನುಮೋದನೆಯೊಂದಿಗೆ ಮತ್ತು ಮಾರ್ಗಸೂಚಿಗಳನ್ವಯ ಚುನಾಯಿತ ಜನಪ್ರತಿನಿಧಿಗಳು / ನಗರ ಸೇವಕರಿಗೆ ಬೇರೆ ರಾಜ್ಯದ ಸ್ಥಳೀಯ ಸಂಸ್ಥೆಗಳ ಕಾರ್ಯಕಲಾಪಗಳನ್ನು ಅಭ್ಯಸಿಸುವ ಸಲುವಾಗಿ ಅಧ್ಯಯನ ಪ್ರವಾಸಕ್ಕಾಗಿ ರೂ. ೧೫.೦೦ ಲಕ್ಷಗಳನ್ನು ನಿಗದಿಪಡಿಸಿದೆ.
೫. ಮಹಾನಗರ ಪಾಲಿಕೆಯ ಒಡೆತನದ ಕ್ರೀಡಾ ಚಟುವಟಿಕೆಗಳಿಗಾಗಿ ನಿರ್ಮಿಸಲಾದ, ಈಜುಕೊಳ, ಬ್ಯಾಡ್ಮಿಂಟನ್ ನಿರ್ವಹಣೆಗಾಗಿ ರೂ. ೫೧.೦೦ ಲಕ್ಷಗಳನ್ನು ಮೀಸಲಿಡಲಾಗಿದೆ.
೬. ಪಾಲಿಕೆಯ ಕಚೇರಿಯಲ್ಲಿ ಇಂಧನ ಪುನರಬಳಕೆ/ಸೋಲಾರ ವಿದ್ಯುತ್ ಉತ್ಪಾದನೆ ಅಳವಡಿಕೆಗಾಗಿ ರೂ. ೫.೦೦ ಲಕ್ಷಗಳು ಮೀಸಲಿರಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಖುಲ್ಲಾ ಜಾಗೆಗಳನ್ನು ಸಂರಕ್ಷಿಸಲು ರೂ. ೨೫.೦೦ ಲಕ್ಷಗಳನ್ನು ಮೀಸಲಿರಿಸಿದೆ.
೭. ಜಿಲ್ಲಾಡಳಿತ ಕಚೇರಿಗೆ ಮಳೆ ನೀರು ಕೋಯ್ಲು ಅಳವಡಿಸಲು ರೂ. ೨.೦೦ ಲಕ್ಷಗಳನ್ನು ಮೀಸಲಿರಿಸಲಾಗಿದೆ.
೮. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದೇಸಲ ಉಪಯೋಗಿಸುವಂತಹ ಪ್ಲಾö್ಯಸ್ಟಿಕ ಮುಕ್ತ ನಗರವನ್ನಾಗಿಸಲು ಸ್ವಸಹಾಯ ಸಂಘಗಳ ಮೂಲಕ ಪರ್ಯಾಯ ವಸ್ತುಗಳಾದ ಪೇಪರ ಬ್ಯಾಗ್, ಬಟ್ಟೆ ಬ್ಯಾಗ್‌ಗಳು ಹಾಗೂ ಇತರೆ ಬ್ಯಾಗಗಳ ತಯಾರಿಕೆಗೆ ರೂ. ೩.೦೦ ಲಕ್ಷಗಳನ್ನು ಮೀಸಲಿರಿಸಿದೆ.
೯. ಪಾಲಿಕೆ ವ್ಯಾಪ್ತಿಯ ಜೀವ ವೈವಿದ್ಯತೆ ಸಂರಕ್ಷಣೆಗೆ ರೂ. ೨.೦೦ ಲಕ್ಷ ನಿಗಧಿಪಡಿಸಲಾಗಿದೆ.
೧೦. ಪತ್ರಕರ್ತರ ಕ್ಷೇಮನಿಧಿ ಸಲುವಾಗಿ ರೂ. ೨೫.೦೦ ಲಕ್ಷಗಳನ್ನು ನಿಗಧಿಪಡಿಸಲಾಗಿದೆ.
೧೧. ವೈಯಕ್ತಿಕ ಹಾಗೂ ಪಿಂಕ್ ಶೌಚಾಲಯಗಳಿಗೆ ರೂ. ೧೦.೦೦ ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
೧೨. ಮಹಿಳೆಯರಿಗೆ ವಿಶೇಷ ಉತ್ತೇಜನಕ್ಕಾಗಿ ವೈಯಕ್ತಿಕ ಅಓಉ ಅಟೋ ಒದಗಿಸಲು ರೂ. ೧೦.೦೦ ಲಕ್ಷ ನಿಗಧಿಪಸಿಸಲಾಗಿದೆ.
೧೩. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವೆಚ್ಚ ೨೦೨೧-೨೨ ನೇ ಸಾಲಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ರೂ. ೩೯೧೩.೦೦ ಲಕ್ಷ ವೆಚ್ಚ ಭರಿಸಲು ಕಾಯ್ದಿರಿಸಲಾಗಿದೆ.ಕೆ.ಯು.ಐ.ಡಿ.ಎಫ್.ಸಿ ೧೦ ವಾರ್ಡ ಗಳ ನಿರಂತರ ನೀರು ಸರಬರಾಜು (೨೪/೭) ಡೆಮೋ ಝೋನ್‌ಗಳಿಂದ ನೀರಿನ ನಿರ್ವಹಣೆ ವೆಚ್ಚ ರೂ. ೩೬೨.೨೫ ಲಕ್ಷಗಳನ್ನು ಮೀಸಲಿರಿಸಲಾಗಿದೆ.
ಬಂಡವಾಳ ವೆಚ್ಚ :
ಅಭಿವೃದ್ಧಿ ಕಾಮಗಾರಿಗಳು
೧.೧೫ ನೇ ಹಣಕಾಸು ಯೋಜನೆ
೧೫ನೇ ಹಣಕಾಸು ಯೋಜನೆಯ ೨೦೨೧-೨೨ ನೇ ಸಾಲಿನ ಅನುದಾನದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಹಂಚಿಕೆಯಾಗುವ ರೂ. ೨೩೨೪.೦೦ ಲಕ್ಷಗಳ ಅನುದಾನದಲ್ಲಿ ಸರ್ಕಾರದ ಶೇಕಡಾವಾರು ನಿಗಧಿಪಡಿಸುವ ಕುಡಿಯುವ ನೀರಿಗಾಗಿ, ಸಮುದಾಯ ಶೌಚಾಲಯಕ್ಕಾಗಿ, ಒಳಚರಂಡಿ ಮತ್ತು ಮಳೆ ನೀರು ಚರಂಡಿ ವ್ಯವಸ್ಥೆಗಾಗಿ, ಉದ್ಯಾನ ಮತ್ತು ಸಮುದಾಯ ಆಸ್ತಿ ನಿರ್ವಹಣೆಗಾಗಿ, ರಸ್ತೆ ಮತ್ತು ಪಾದಚಾರಿಗಳ ನಿರ್ವಹಣೆಗಾಗಿ, ಸ್ಮಶಾನ ಮತ್ತು ರುದ್ರಭೂಮಿಗಳಿಗಾಗಿ ಹಾಗೂ ಆಡಳಿತ ವ್ಯವಸ್ಥೆ ಸುಧಾರಣೆಗಾಗಿ ಮೀಸಲಿರಿಸುವದು, ಬಾಕಿ ಉಳಿದ ಅನುದಾನವನ್ನು ಅಮೃತ್ ಯೋಜನೆಗೆ ಸ್ಥಳೀಯ ಸಂಸ್ಥೆಯ ವಂತಿಕೆಯಾಗಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ವ್ಯಯಿಸಲು ಕ್ರಮ ಜರುಗಿಸಲಾಗುವುದು.
೨. ಮಾಹಿತಿ ತಂತ್ರಜ್ಞಾನ
ರೂ. ೫೦.೦೦ ಲಕ್ಷಗಳನ್ನು ಹೊಸದಾಗಿ ಗಣಕೀಕರಣ ಸಲುವಾಗಿ ಯಂತ್ರೋಪಕರಣಗಳನ್ನು ಖರೀದಿಸಲು ನಿಗಧಿಪಡಿಸಿದೆ.
೩. ಲೋಕೋಪಯೋಗಿ ಶಾಖೆ (ಅಭಿವೃಧ್ದಿ)
ಹೊಸ ರಸ್ತೆ ನಿರ್ಮಾಣಕ್ಕಾಗಿ ರೂ. ೨೦೦.೦೦ ಲಕ್ಷಗಳು, ಚರಂಡಿ ಹಾಗೂ ಅಡಿಗಲ್ಲು ನಿರ್ಮಾಣಕ್ಕಾಗಿ ರೂ. ೨೦೦.೦೦ ಲಕ್ಷಗಳಷ್ಟು ಪಾಲಿಕೆಯ ಖುಲ್ಲಾ ಜಾಗೆಗಳನ್ನು ಸಂರಕ್ಷಿಸಲು ರೂ. ೨೫.೦೦ ಲಕ್ಷಗಳಷ್ಟು, ನಗರ ಸೇವಕರುಗಳು ತುರ್ತು ಪರಿಸ್ಥಿತಿಯಲ್ಲಿರುವ ನಗರದ ವಿವಿಧ ಅವಶ್ಯಕ ಮೂಲಭೂತ ಸೌಕರ್ಯಕ್ಕಾಗಿ ರೂ. ೧೫೦.೦೦ ಲಕ್ಷಗಳಷ್ಟು ನಿಗಧಿಪಡಿಸಿದೆ.
೪. ಸ್ಮಶಾನಗಳ ಅಭಿವೃದ್ಧಿ.
ನಗರದಲ್ಲಿರುವ ವಿವಿಧ ಸ್ಮಶಾನಗಳ ಅಭಿವೃಧ್ದಿ ಹಾಗೂ ಹೊಸ ಸ್ಮಶಾನಗಳ ನಿರ್ಮಾಣಕ್ಕಾಗಿ, ಶಾಸಕರುಗಳ ಹಾಗೂ ಸಾರ್ವಜನಿಕರ ಸಲಹೆಯಂತೆ ಪರಿಸರ ಸ್ನೇಹಿ (ಕುಳ್ಳು)ಗಳಿಂದ ದಹನ ಕ್ರಿಯೆ ನಡೆಸಲು ರೂ. ೫೦.೦೦ ಲಕ್ಷಗಳಷ್ಷು ನಿಗಧಿಪಡಿಸಲಾಗಿದೆ.
೫. ಒಳಚರಂಡಿಗಳ ನಿರ್ಮಾಣ.
ನಗರದಲ್ಲಿರುವ ವಿವಿಧ ಒಳಚರಂಡಿ ದುರಸ್ತಿ ಮತ್ತು ಹೊಸ ಒಳಚರಂಡಿ ನಿರ್ಮಾಣಕ್ಕಾಗಿ ಹಾಗೂ ಸಮುದಾಯ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ರೂ. ೨೦೦.೦೦ ಲಕ್ಷಗಳಷ್ಷು ನಿಗಧಿಪಡಿಸಲಾಗಿದೆ.
೬. ಶೂನ್ಯ ತ್ಯಾಜ್ಯ ಘಟಕ ನಿರ್ಮಾಣ,
ಘನತ್ಯಾಜ್ಯ ವಿಲೇವಾರಿ ಸಂಬAಧ ಪುನರ ಬಳಕೆ ವಸ್ತುಗಳನ್ನು ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಈ ಘಟಕಕ್ಕೆ ರೂ. ೧೦.೦೦ ಲಕ್ಷಗಳನ್ನು ಮೀಸಲಿರಿಸಿದೆ.
೭. ವೃತ್ತಗಳ ಅಭಿವೃದ್ದಿಗಾಗಿ ರೂ. ೫೦.೦೦ ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
೮. ವಾಣಿಜ್ಯ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಮಾರ್ಗಸೂಚನೆಗಳನ್ವಯ ಖಿತಿiಟಿ ಆusಣbiಟಿ ಅಳವಡಿಸಲು ರೂ. ೧೦.೦೦ ಲಕ್ಷಗಳನ್ನು ಮೀಸಲಿರಿಸಲಾಗಿದೆ.
೯. ಉದ್ಯಾನವನ ಅಭಿವೃದ್ಧಿಗಾಗಿ
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನ ಸೌಂದರೀಕರಣ, ತಂತಿ ಬೇಲಿ ಅಳವಡಿಸುವದು ಹಾಗೂ ಚಿನ್ನರ ಉದ್ಯಾನ, ನಾನಾ ನಾನಿ ಪಾರ್ಕ ಅಭಿವೃದ್ಧಿಗೆ ರೂ. ೫೦.೦೦ ಲಕ್ಷಗಳನ್ನು ನಿಗಧಿಪಡಿಸಿದೆ.
೧೦. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ದಿಗಾಗಿ
ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಿಂದ ಶೇ.೨೯.೦೦% ರ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ವರ್ಗದ ಜನರು ವಾಸಿಸುತ್ತಿರುವ ಪ್ರದೇಶದಲ್ಲಿ ರಸ್ತೆ ಅಭಿವೃದ್ದಿ, ಡಾಂಬರೀಕರಣ, ಚರಂಡಿಗಳ ನಿರ್ಮಾಣ. ಉದ್ಯಾನವನಗಳ ಅಭಿವೃದ್ದಿ ಮತ್ತು ಬೀದಿ ದೀಪಗಳ ಅಳವಡಿಕೆ ಸೇರಿದಂತೆ, ಅಲ್ಲದೇ ಶಿಕ್ಷಣ, ಆರೋಗ್ಯ, ವೈಯಕ್ತಿಕ ಸೌಲಭ್ಯ, ಉದ್ಯೋಗ ಇತ್ಯಾದಿಗಳಿಗಾಗಿ ಒಟ್ಟಾರೆ ಇಡೀ ಪ್ರದೇಶದಲ್ಲಿ ಸರ್ವಾಂಗೀಣ ಅಭಿವೃದ್ದಿಗಾಗಿ ೨೦೨೧-೨೨ ರ ಆಯವ್ಯಯದಲ್ಲಿ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಡಿಯಲ್ಲಿ ನಿಗಧಿಪಡಿಸುವ ರೂ. ೧೮೧.೦೦ ಲಕ್ಷಗಳನ್ನು ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ.
ಅಲ್ಲದೇ ಪಾಲಿಕೆಯಿಂದ ನಿವ್ವಳವಾಗಿ ಸ್ವೀಕೃತವಾಗುವ ಕಂದಾಯ ವಸೂಲಾತಿಯ ಮೇಲೆ ಸರ್ಕಾರದ ಸುತ್ತೋಲೆಯ ಮಾರ್ಗಸೂಚಿಗಳ ಪ್ರಕಾರ ಉಳಿತಾಯವಾಗುವ ಅಂದಾಜು ಮೊತ್ತದ ಮೇಲೆ ಶೇ. ೨೪.೧೦% ರಷ್ಟು ಮೊತ್ತವನ್ನು ಪಾಲಿಕೆ ಅನುದಾನದಿಂದ ರೂ.೪೨೨.೦೦ ಲಕ್ಷಗಳನ್ನು ಕಾಯ್ದಿರಿಸಲು ಕ್ರಮ ಜರುಗಿಸಲಾಗುವುದು.
೧೧. ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆ ನಿಧಿಯಡಿಯಲ್ಲಿ ಅಂದಾಜು ರೂ. ೧೨೭.೦೪ ಲಕ್ಷಗಳನ್ನು ಬಳಸಲಾಗುತ್ತದೆ.
೧೨. ಶೇ ೫% ವಿಕಲಚೇತನರ ಕಲ್ಯಾಣ ಅಭಿವೃದ್ಧಿ :
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿಕಲಚೇತನರ ಕಲ್ಯಾಣ ಅಭಿವೃದ್ಧಿಗೆ ಪಾಲಿಕೆ ಅನುದಾನದಡಿಯಲ್ಲಿ ರೂ. ೮೭.೬೧ ಲಕ್ಷಗಳನ್ನು ಮೀಸಲಿರಿಸಲಾಗುವದು. ಒಟ್ಟಾರೆಯಾಗಿ ರೂ. ೪೧,೧೧೪.೮೧ ಲಕ್ಷಗಳಷ್ಟು ಅಂದಾಜು ವೆಚ್ಚ ಭರಿಸಲು ನಿರೀಕ್ಷಿಸಲಾಗಿದೆ.
ಅಂದಾಜು ಉಳಿತಾಯ ೨೦೨೧-೨೨ ಸಾಲಿನಲ್ಲಿ ಅಂದಾಜು ರೂ. ೧೩.೫೧ ಲಕ್ಷಗಳಷ್ಟು ಉಳಿತಾಯ ನಿರೀಕ್ಷಿಸಲಾಗಿದೆ.
ಹೀಗೆ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ೫೮ ವಾರ್ಡುಗಳ ಸರ್ವತೋಮುಖ ಅಭಿವೃದ್ಧಿ ಸೃಜಿಸಿ ಕಾಪಾಡುವದು ಹಾಗೂ ಸಮಸ್ತ ನಾಗರೀಕರಿಗೆ ಉತ್ಕೃಷ್ಟವಾದ ಸೇವೆ ಒದಗಿಸಲು ಮಹಾನಗರ ಪಾಲಿಕೆ ಸದಾ ಶ್ರಮಿಸುತ್ತಿದೆ. ಆಯವ್ಯಯದಲ್ಲಿ ಅಳವಡಿಸಿದ ಎಲ್ಲ ಕಾರ್ಯಕ್ರಮಗಳು ನಿಗಧಿತ ವೇಳೆಯಲ್ಲಿ ಅನುಷ್ಠಾನಗೊಳಿಸಲಾ ಗುವುದೆಂಬ ಆಶಾಭಾವನೆ ಹೊಂದಿದ್ದು, ೨೦೨೧-೨೨ ನೇ ಸಾಲಿನಲ್ಲಿ ಬೆಳಗಾವಿ ನಗರದ ಸಮಗ್ರ ಮೂಲಭೂತ ಸೌಕರ್ಯಗಳನ್ನು ಹಾಗೂ ನಾಗರೀಕರ ನಿರೀಕ್ಷೆಯನ್ನು ತಲುಪಲು ಮತ್ತು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಮನಪಾ ಆಡಳಿತಾಧಿಕಾರಿಗಳೂ ಆಗಿರುವ ಎಂ.ಜಿ.ಹಿರೇಮಠ ತಿಳಿಸಿದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker