Koppal

ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸವಿತಾ ಮಹರ್ಷಿ ಜಯಂತಿ ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ, ಫೆ. : ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸವಿತಾ ಮಹರ್ಷಿ ಅವರ ಜಯಂತಿ ಅಂಗವಾಗಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಅವರು ಶಿವಾಜಿ ಮಹಾರಾಜ ಮತ್ತು ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶಿವಾಜಿ ಮಹಾರಾಜ ಮತ್ತು ಸವಿತಾ ಮಹರ್ಷಿ ಅವರ ಜಯಂತಿಯನ್ನು ಕೋವಿಡ್-೧೯ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಅಗ್ನಿ ಶಾಮಕ ಠಾಣಾಧಿಕಾರಿ ಜಿ. ಕೃಷ್ಣೋಜಿರಾವ್ ಹಾಗೂ ಕ್ಷತ್ರಿಯ ಸಮಾಜದ ಮುಖಂಡರಾದ ನಾಗೇಶ ಬಡಿಗೇರ, ಮಾರುತಿ ಕಾರಟಗಿ, ಸರೋಜಾ ಬಾಕಳೆ, ರಾಘವೇಂದ್ರ ಹುಯಿಲಗೋಳ, ನಾಮದೇವ ಜಕ್ಲಿ, ಉದಯ್ ಕಲಾಲ್, ಅಮರಸಿಂಗ್ ರಜಪೂತ್ ಮತ್ತು ಸವಿತಾ ಸಮಾಜದ ಮುಖಂಡರಾದ ರವಿಕುಮಾರ್ ಸೂಗೂರ, ಕಲ್ಲಪ್ಪ ಹೊನ್ನುಂಚಿ, ಯಲ್ಲಪ್ಪ, ನಾಗರಾಜ ಕಂಪ್ಲಿ, ಮಾರುತಿ ಸೂಗೂರ, ವಿಠ್ಠಲ್ ಕೊಪ್ಪಳ, ದೇವಪ್ಪ ಗೌರಿಅಂಗಳ, ಈಶಪ್ಪ ಚಿಕ್ಕ ಮಾದಿನಾಳ, ತುಕಾರಾಮ್, ಶ್ರೀನಿವಾಸ ಗೋಪಲದಿನ್ನಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker