BelagaviKarnataka

ಒಂದು ಕೆ.ಜಿಗೂ ಹೆಚ್ವು ಆಫೀಮು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಬೆಳಗಾವಿ ಪೊಲೀಸರು

ಬೆಳಗಾವಿ ; ಬೆಳಗಾವಿಯ ಹೊನಗಾ ಮತ್ತು ಚನ್ನಮ್ಮ ನಗರ ಪ್ರದೇಶಗಳಲ್ಲಿ ದಾಳಿ ಮಾಡಿ ಒಂದು ಕೆ.ಜಿಗೂ ಹೆಚ್ವು ಆಫೀಮು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ .

ಬೆಳಗಾವಿ ಡಿಸಿಪಿ ವಿಕ್ರಂ ಅಮ್ಟೆ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು . ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ಬಿ.ಆರ್‌.ಗಡ್ಡೇಕರನೇ ತ್ರತ್ವದ ತಂಡವು, ಖಚಿತ ಮಾಹಿತಿ ಆಧಾರದ ಮೇಲೆ ಹೊನಗಾ ಗ್ರಾಮದ ಪಕ್ಕದಲ್ಲಿರುವ ರಾಜಸ್ತಾನ ದಾಬಾದಲ್ಲಿ ಇರುವ ಪಾನಶಾಪ್‌ದಲ್ಲಿ ಹಾಗೂ ಬೆಳಗಾವಿ ಚನ್ನಮ್ಮ ನಗರ ದಲ್ಲಿ ದಾಳಿ ಮಾಡಿ ಆರೋಪಿತಗಳಾದ ಬರಕತ್‌ಖಾನ್ ತಂದೆ ಎಲ್ಲಾಖಾನ್ ವಯಸ್ಸು 30 ವರ್ಷ ವೃತ್ತಿ ಪಾನ್ ಶಾಪ್ ಹಾಲಿ ರಾಜಸ್ತಾನ ದಾಭಾ ಹತ್ತಿರ ಇರುವ ಜೋಗಾನಟ್ಟಿ ಗ್ರಾಮ್ ತಾ: ಬೆಳಗಾವಿ ಕಮಲೇಶ ಸುರಜನರಾಮ್ ಬೆನಿವಾಲಾ ವಯಸ್ಸು 25 ವರ್ಷ ಸಾ: ಗೋಕುಲ ರೋಡ ಮುರಾರ್ಜಿ ನಗರ ಹುಬ್ಬಳ್ಳಿ ಸರವನ್ @ ಸಾವರಾರಾಮ ತಂದೆ ಅಶುರಾಮ್ ಅಸನೊಣ ವಯಸ್ಸು 21 ವರ್ಷ ವೃತ್ತಿ ಸ್ಟೀಲ್ಶ್ರೀ ಶ್ರಿಲ್ (ಪ್ಯಾಕೇಶನ್) ಸಾ: ಹಾಲಿ ಚೆನ್ನಮ್ಮಾ ನಗರ ಇವರನ್ನು ಬಂಧಿಸಿ ಆರೋಪಿತರ ವಶದಲ್ಲಿಂದ ಒಟ್ಟು 1 ಕೆ.ಜಿ 15 ಗ್ರಾಂ ತೂಕದ ಅಫಿಮು ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು ಈ ಅಫೀಮು ಮಾದಕ ವಸ್ತುವಿನ ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಸುಮಾರು ರೂ 20,00,000/-( 20 ಲಕ್ಷ ರೂ) ಆಗುತ್ತದೆ.

ಈ ಕುರಿತು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
05/2021 ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಕಾರ್ಯಾಚರಣೆಯಲ್ಲಿ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್
ಇನ್ಸಪೆಕ್ಟರ್ ಬಿ.ಆರ್.ಗಡ್ಡೇಕರ ಮತ್ತು ಅವರ ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker