vijayapur

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಇಂದು ಉದ್ಘಾಟನೆ

ಆದ್ಯತೆ ಮೇಲೆ ಕುಂದುಕೊರತೆ ಮನವಿಗಳ ಮೇಲೆ ಕ್ರಮ: ಜಿಲ್ಲಾಧಿಕಾರಿ

ವಿಜಯಪುರ; ಫೆ ೨೦ : ಜಿಲ್ಲೆಯ ದೇ.ಹಿಪ್ಪರಗಿ ತಾಲೂಕಿನ ಬೊಮ್ಮನಜೋಗಿ ಗ್ರಾಮಸ್ಥರಿಂದ ಬಂದಿರುವ ಕುಂದುಕೊರತೆ ಅರ್ಜಿಗಳ ಮೇಲೆ ತಕ್ಷಣಕ್ಕೆ ಕೆಲವು ಅರ್ಜಿಗಳ ವಿಲೇವಾರಿ ಜೊತೆಗೆ ಬಾಕಿ ಉಳಿದ ಅರ್ಜಿಗಳ ಬಗ್ಗೆ ಆದ್ಯತೆ ಮೇಲೆ ಪರಿಹಾರ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಹೇಳಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅಂಗವಾಗಿ ಗ್ರಾಮದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದ ನಂತರ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಗ್ರಾಮದ ಗ್ರಾಮಸ್ಥರು ಅದ್ದೂರಿಯಿಂದ ಸ್ವಾಗತ ಕೋರಿ ಗೌರವ ಮತ್ತು ಪ್ರೀತಿಯಿಂದ ಆದರ ಆತಿಥ್ಯ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು ಈ ಗ್ರಾಮದ ಮತ್ತು ಗ್ರಾಮಸ್ಥರ ಸಮಸ್ಯೆಗಳ ನಿವಾರಣೆಗೆ ಪ್ರಥಮ ಆದ್ಯತೆ ನೀಡಲಾಗುವುದು.
ಈಗಾಗಲೇ ಫೆ.೧೫ ರಂದು ಸುಮಾರು ೫೫ ಕುಂದುಕೊರತೆ ಅರ್ಜಿಗಳನ್ನು ವಿವಿಧ ಸಮಸ್ಯೆಗಳಿಗೆ ಸಂಬAಧಪಟ್ಟAತೆ ಸ್ವೀಕರಿಸಲಾಗಿದ್ದು, ಸರ್ಕಾರದ ನಿರ್ದೇಶನದನ್ವಯ ಸಂಬAಧಪಟ್ಟ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ, ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಈ ೫೫ ಅರ್ಜಿಗಳ ಪೈಕಿ ೧೯ ಕಂದಾಯ ಇಲಾಖೆಗೆ ಹಾಗೂ ಇತರೆ ಅರ್ಜಿಗಳು ವಿವಿಧ ಇಲಾಖೆಗಳಿಗೆ ಸಂಬAಧಿಸಿದ ಕುಂದುಕೊರತೆ ಅರ್ಜಿಗಳಾಗಿದ್ದು, ತಕ್ಷಣಕ್ಕೆ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಪ್ರಮಾಣ ಪತ್ರಗಳನ್ನು ನೀಡುವ ಕಾರ್ಯವನ್ನು ಅಧಿಕಾರಿಗಳು ಮಾಡಲಿದ್ದಾರೆ.
ಬಾಕಿ ಪರಿಹಾರ ಕ್ರಮಗಳ ಬಗ್ಗೆ ಉಪವಿಭಾಗಾಧಿಕಾರಿಗಳಿಂದ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಪಿಂಚಣಿ, ಖಾತಾ ಬದಲಾವಣೆ, ಮನೆ ಸೌಲಭ್ಯ, ವಾರಸಾ ಪ್ರಮಾಣ ಪತ್ರ, ನಿವೇಶನ ಪ್ರಮಾಣ ಪತ್ರ ಹೀಗೆ ವಿವಿಧ ಮನವಿಗಳನ್ನು ಸ್ವೀಕರಿಸಲಾಗಿದ್ದು, ಸೂಕ್ತ ಕ್ರಮಕೈಗೊಳ್ಳಲಾಗಿದೆ.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೨೦ ಮನೆಗಳ ಸೌಲಭ್ಯ ಕಲ್ಪಿಸಲು ವಸತಿ ಯೋಜನೆಯಡಿ ಅವಕಾಶವಿದ್ದು, ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಲಾಟರಿ ಅಥವಾ ಕಡುಬಡವರಿಗೆ ಮನೆ ನಿರ್ಮಿಸಿಕೊಡುವ ಬಗ್ಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಇಂದಿನ ಈ ಕಾರ್ಯಕ್ರಮದ ಅಂಗವಾಗಿ ಪಿಂಚಣಿ ಸಮಸ್ಯೆಗಳಿಗೆ ಸಂಬAಧಪಟ್ಟAತೆ ೩ ಕುಂದುಕೊರತೆ ಅರ್ಜಿಗಳು, ೮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೋರಿ,೧೦ ರೈತರಿಂದ ಸ್ಪ್ರಿಂಕ್ಲರ್, ೮ ಜನರ ಪಾವತಿ ಖಾತಾ ಸೇರಿದಂತೆ ವಿವಿಧ ಅರ್ಜಿಗಳನ್ನು ಸ್ವೀಕರಿಸಿದ್ದು, ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಿಸಲಾಗಿದ್ದು, ಇನ್ನು ೨ ದ್ವಿಚಕ್ರ ವಾಹನ ಒದಗಿಸಲಾಗುವುದೆಂದು ತಿಳಿಸಿದ ಅವರು ಗ್ರಾಮಸ್ಥರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು.
ಗ್ರಾಮದಲ್ಲಿ ಸಂಚರಿಸಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು : ಜಿಲ್ಲಾಧಿಕಾರಿಗಳು ಬೊಮ್ಮನಜೋಗಿ ಗ್ರಾಮದಲ್ಲಿ ಸಂಚರಿಸಿ ಅಂಗನವಾಡಿ ಕೇಂದ್ರ, ಮರಗಮ್ಮಾ ದೇವಸ್ಥಾನ, ವಸತಿ ಯೋಜನೆಯಡಿ ಮನೆ ಸೌಲಭ್ಯ, ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಕಂಪೌAಡ್‌ಗಾಗಿ ಸ್ಥಳ ಪರಿಶೀಲನೆ, ಪ್ರಾಥಮಿಕ ಶಾಲೆಯ ಹೊಸ ಕಟ್ಟಡ ಕಾಮಗಾರಿಗಳ ಬಗ್ಗೆ ಖುದ್ದಾಗಿ ನಡೆದುಕೊಂಡು ಹೋಗಿ ಪರಿಶೀಲಿಸಿ, ಗ್ರಾಮಸ್ಥರ ಕುಂದುಕೊರೆತಗಳನ್ನು ಆಲಿಸಿದರು.
ಮರಗಮ್ಮಾ ದೇವಸ್ಥಾನ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ಶಾಲಾ ಹೊಸ ಕಟ್ಟಡ ಗುಣಮಟ್ಟದಲ್ಲಿ ಆಗಬೇಕು. ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಕಂಪೌAಡ್ ಸಮಸ್ಯೆ ನಿವಾರಣೆಗೆ ಸ್ಥಳದ ಸರ್ವೇ ಕಾರ್ಯ ಮತ್ತು ರೈತರ ಒಪ್ಪಿಗೆ ಬಗ್ಗೆ ಪರಿಶೀಲನೆ ನಡೆಸಿದರು.
ಅದರಂತೆ ಆರಂಭಿಕವಾಗಿ ಮರುಳಾರಾಧ್ಯ ಶಿವಾರಾಧ್ಯ ಮಠದಲ್ಲಿ ನಡೆಯುತ್ತಿರುವ ವಿದ್ಯಾಗಮನ ವರ್ಗಗಳಿಗೆ ಭೇಟಿ ನೀಡಿ, ೬ ಮತ್ತು ೭ ನೇ ತರಗತಿಯ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಪ್ರಶ್ನೆಗಳ ಮೂಲಕ, ಸಂವಾದದ ಮೂಲಕ ಪರೀಕ್ಷಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಅಂತರ್ಜಲ ಸಂಗ್ರಹ, ನೀರಿನ ಮಿತಬಳಕೆ ಮತ್ತು ಸಂರಕ್ಷಣೆ, ಕೆರೆಗಳ ಸಂರಕ್ಷಣೆ, ಮಳೆ ನೀರಿನ ಸಂರಕ್ಷಣೆ, ಜಾಗತಿಕ ತಾಪಮಾನ ಏರಿಕೆಯಿಂದ ಆಗುವ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳು ಪರಿಸರ ಮತ್ತು ವಾತಾವರಣ ಶುಚಿಯಾಗಿಡಲು ವಿಶೇಷ ಗಮನ ನೀಡಬೇಕು. ಪರಿಸರ ಸಂರಕ್ಷಣ ಬಗ್ಗೆ ಪಾಲಕರಲ್ಲಿಯೂ ಅರಿವು ಮೂಡಿಸಬೇಕು. ಜಲ, ನೆಲ ಮತ್ತು ವಾತಾವರಣ ಸಂರಕ್ಷಣೆಗೆ ಆದ್ಯತೆ ನೀಡಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಜೀವನದಲ್ಲಿ ಉನ್ನತ ಹುದ್ದೆಗೆ ಏರಲು ತಮ್ಮ ನಿರಂತರ ಅಭ್ಯಾಸ, ಅಧ್ಯಯನ ಪ್ರವೃತ್ತಿ ಮುಂದುವರೆಸುವAತೆ ಅವರು ಕಿವಿಮಾತು ಹೇಳಿದರು.
ಗ್ರಾಮದ ಬಾಣಂತಿ ವಿಟಾಬಾಯಿ ಹೊರಕನಳ್ಳಿ ಅಂಗನವಾಡಿ ಕೇಂದ್ರದಿAದ ಹಾಲಿನ ಪೌಡರ್ ಪಾಕೇಟ್,ಮೊಟ್ಟೆ ವಿತರಣೆ ಬಗ್ಗೆ, ವಿಚಾರಿಸಿದರು. ಪಾರ್ವತಮ್ಮ ಬಿರಾದಾರ್ ಸಂತ್ರಸ್ತೆಗೆ ಮನೆ ಸೌಲಭ್ಯ, ಬೀರೇಶ್ವರ ದೇವಸ್ಥಾನ ಪೂಜಾರಿ ಅವರಿಂದ ಮನವಿ ಸ್ವೀಕರಿಸಿದರು.
ತಾಂಡಾ ಎಲ್.ಟಿ ಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವಿಧ ಕುಂದುಕೊರತೆ ಅರ್ಜಿಗಳ ಬಗ್ಗೆ ಪರಿಶೀಲಿಸಿದ ಅವರು ಖುದ್ದಾಗಿ ನಾಗರೀಕರ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸುವ ಮೂಲಕ ವಿಚಾರಿಸಿದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಿಂಧೆ, ತಹಶೀಲ್ದಾರ್ ಕಟಕಬಾವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ್ ಯರಗಲ್ ಸೇರಿದಂತೆ ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker