ಸತೀಶ ಜಾರಕಿಹೊಳಿಯವರ ಶೈಕ್ಷಣಿಕ ಕಾರ್ಯ ಶ್ಲಾಘ£Ãಯ : ರಾಚೋಟಿ ಮಹಾಸ್ವಾಮಿಗಳು

ಯಮಕನಮರಡಿ:- ಜನರ ಸಮಸ್ಯೆಗಳನ್ನು ಆಲಿಸಲು ಫಲಾಯನ ಮಾಡುವ ಶಾಸಕರು ಬಹಳಷ್ಟಿದ್ದಾರೆ. ಆದರೆ ಸಮಸ್ಯೆಗಳನ್ನು ಹುಡುಕಿಕೊಂಡು ಹೋಗಿ ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಏಕೈಕ ಶಾಸಕರೆಂದರೆ ಸತೀಶ ಜಾರಕಿಹೊಳಿಯವರು ಮಾತ್ರ ಎಂದು ಯಮಕನಮರಡಿ ಹುಣಸಿಕೊಳ್ಳಮಠದ ಶ್ರೀ ರಾಚೋಟಿ ಮಹಾಸ್ವಾಮಿಗಳು ಹೇಳಿದರು.
ಅವರು ಶ£ವಾರ ದಿ. ೨೦ ರಂದು ಯಮಕನಮರಡಿ ಎಸ್.ಆರ್.ಎಮ್. ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕ ಪಂಚಾಯತ ಸದಸ್ಯರ ಅನುದಾನದಲ್ಲಿ ಮಂಜೂರಾದ ನೂತನ ಬಯಲು ರಂಗಮAದಿರ ಉದ್ಘಾಟನಾ ಸಮಾರಂಭದ ಸಾ£ಧ್ಯ ವಹಿಸಿ ಮಾತನಾಡಿದರು. ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಶಾಸಕರ ಸತೀಶ ಜಾರಕಿಹೊಳಿಯವರು ವಿಶೇಷ ಕಾಳಜಿ ವಹಿಸಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ಮಕ್ಕಳಲ್ಲಿ ಹುದಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಂಸ್ಕೃತಿಕ ವೇದಿಕೆಯನ್ನು ಕಲ್ಪಿಸಿಕೊಡುವ ಕಾರ್ಯ ಮಾಡಿದ್ದಾರೆ. ಅವರು £ಜಕ್ಕೂ ಸಾಂಸ್ಕೃತಿಕ ರಾಯಬಾರಿ ಎ£ಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸತೀಶ ಜಾರಕಿಹೊಳಿ ವಹಿಸಿದ್ದರು. ವಿದ್ಯಾರ್ಥಿ£ ಪ್ರೇಮಾ ವಾಘನ್ನವರ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಜಿ.ಪಂ. ಸದಸ್ಯ ಫಕೀರವ್ವಾ ಹಂಚಿನಮ£, ಹುಕ್ಕೇರಿ ತಾ.ಪಂ. ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ತಾ.ಪಂ ಸದಸ್ಯ ಸು£Ãತಾ ವೀರಣ್ಣಾ ಬಿಸಿರೊಟ್ಟಿ, ಯಮಕನಮರಡಿ ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ವೀರಣ್ಣಾ ಬಿಸಿರೊಟ್ಟಿ, ಕುಮಾರ ಪೋತದಾರ, ಸಿದ್ರಾಮ ಕಟ್ಟಿಮ£, ಶರೀಪ ಬೇಪಾರಿ, ಎಮ್.ಎಸ್. ಫಕಾಲಿ, ಪ್ರಾಚಾರ್ಯರಾದ ಎಸ್.ಎ. ರಾಮನಕಟ್ಟಿ, ಎಮ್.ಜಿ. ತಾವದಾರೆ, ಉಪನ್ಯಾಸಕ ಸಿ.ಜಿ. ಮಠಪತಿ, ಮತ್ತು ಯುವ ಕಾಂಗ್ರೇಸ್ ದುರೀಣ ರವೀಂದ್ರ ಜಿಂಡ್ರಾಳಿ, ಕಿರಣಸಿಂಗ ರಜಪೂತ, ಯಮಕನಮರಡಿ ಗ್ರಾ.ಪಂ. ಉಪಾಧ್ಯಕ್ಷ ಜಾವೇದ ಜಕಾತಿ, ಓಂಕಾರ ತುಬಚಿ, ರಾಜು ಮಾರಿಹಾಳಿ, ಸಿದ್ದಪ್ಪ ಸಿಳ್ಳಿ, ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ಆರ್. ತಬರಿ ಸತ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಸಿ.ಜಿ. ಮಠಪತಿ ಕಾರ್ಯಕ್ರಮ £ರೂಪಿಸಿದರು. ಅಖೀಲ ಕಿವಂಡಾ ವಂದಿಸಿದರು.