Koppal

ಇಷ್ಟಲಿಂಗವೆಂಬುದು ಜಗತ್ತಿಗೆ ಮಹಾಗುರು ಬಸವಣ್ಣನವರು ನೀಡಿದ ವಿಶಿಷ್ಟವಾದ ಕೊಡುಗೆ

ಕುಷ್ಟಗಿ: ಇಷ್ಟಲಿಂಗವೆಂಬುದು ಜಗತ್ತಿಗೆ ಮಹಾಗುರು ಬಸವಣ್ಣನವರು ನೀಡಿದ ವಿಶಿಷ್ಟವಾದ ಕೊಡುಗೆ. ಅದು ದೃಷ್ಟಿಯೋಗದ ಸಾಧನ, ಸಮಾನತೆಯ ದ್ಯೋತಕ. ವಿಶ್ವಾತ್ಮನ ಕುರುಹು ಆಗಿದೆ ಎಂದು ಇಲಕಲ್ಲಿನ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.

ಇಲ್ಲಿನ ಬಸವ ಭವನದಲ್ಲಿ ಬಸವ ಸಮಿತಿ ಹಮ್ಮಿಕೊಂಡಿದ್ದ ‘ವಚನ ಚಿಂತನ’ ಸಾಪ್ತಾಹಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿ,
ವೈಜ್ಞಾನಿಕ ಹಿನ್ನೆಲೆಯಲ್ಲಿ ಶೋಧಿಸಲ್ಪಟ್ಟ ಇಷ್ಟಲಿಂಗವನ್ನು ಅರ್ಥ ಮಾಡಿಕೊಳ್ಳದೆ ಜಾತಿಯ ಕುರುಹು ಎಂದು ಭಾವಿಸುವುದು ಬಸವಣ್ಣನವರಿಗೆ ಮಾಡಿದ ಅಪಚಾರ. ಬಸವಣ್ಣನವರೇ ಇಷ್ಟಲಿಂಗದ ಧಾತ್ರು ಎಂಬುದನ್ನು ಮಹಾಯೋಗಿ ಶೂನ್ಯ ಪೀಠದ ಪ್ರಥಮಾಧ್ಯಕ್ಷ ಅಲ್ಲಮ ಪ್ರಭುಗಳು ಹೇಳಿದ್ದಾರೆ ಎಂದರು.ಅಲ್ಲಮಪ್ರಭುವಿನ ವಚನಗಳನ್ನು ವಿಶ್ಲೇಷಿಸಿದ ಗುರುಮಹಾಂತ ಶ್ರೀಗಳು, ಅಲ್ಲಮ ಪ್ರಭುವಿನ ಅನೇಕ ವಚನಗಳಲ್ಲಿ ನಾವು ಆಧುನಿಕ ಖಗೋಳವಿಜ್ಞಾನದ ಸಂಶೋಧನಾ ಅಂಶಗಳನ್ನು ಕಾಣಬಹುದು ಎಂದರು.ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಶಾಸಕ ಕೆ.ಶರಣಪ್ಪ ಅಧ್ಯಕ್ಷತೆವಹಿಸಿದ್ದ ಬಸವ ಸಮಿತಿ ಶಂಕರಗೌಡ ಪಾಟೀಲ್ ಹಾಗೂ ಆಧ್ಯಾತ್ಮಿಕ ಚಿಂತಕಿ ಭಾರತೀ ನಿರಗೇರಿ ಮಾತನಾಡಿದರು. ಇದೇವೇಳೆ ರಾಜ್ಯ ಮಟ್ಟದ ಸಂಯಮ ಪ್ರಶಸ್ತಿ ಪುರಸ್ಕೃತರಾದ ಗುರುಮಹಾಂತ ಶ್ರೀಗಳಿಗೆ ಬಸವ ಸಮಿತಿಯಿಂದ ಗೌರವಿಸಲಾಯಿತು.
ರಾಘವೇಂದ್ರ ವೈ.ಡಿ.ಧರ್ಮ ಗ್ರಂಥ ಪಠಿಸಿದರು. ಶರಣಬಸಪ್ಪ ಸುಂಕದ ವಚನ ಮಂಗಲ ಮಾಡಿದರು. ಬಸವ ಸಮಿತಿಯ ಶಿವಸಂಗಪ್ಪ ಬಿಜಕಲ್, ಎಂ.ಎಸ್. ಗೋನಾಳ, ರಾಮನಗೌಡ ಪಾಟೀಲ್, ಮಲ್ಲಪ್ಪ ಶಂಕರಗೌಡ ಇತರರು ಉಪಸ್ಥಿತರಿದ್ದರು. ಬಸವ ಸಮಿತಿಯ ಕಾರ್ಯದರ್ಶಿ ಮಹೇಶ ಎಚ್. ಕಾರ್ಯಕ್ರಮ ನಿರೂಪಿಸಿದರು.ಕುಷ್ಟಗಿಯಲ್ಲಿ ರಾಜ್ಯ ಮಟ್ಟದ ಸಂಯಮ ಪ್ರಶಸ್ತಿ ಪುರಸ್ಕೃತರಾದ ಗುರುಮಹಾಂತ ಶ್ರೀಗಳಿಗೆ ಬಸವ ಸಮಿತಿಯಿಂದ ಗೌರವಿಸಲಾಯಿತು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker