ಆರ್.ಟಿ.ಓ. ವೃತ್ತದ ರಸ್ತೆ ದುರಸ್ಥಿ ಹಾಗೂ ಗಾಟಾರು ನಿರ್ಮಾಣ ಕಾಮಗಾರಿ ಆರಂಭ

ಬೆಳಗಾವಿ ೨೨: ಬೆಳಗಾವಿ ಆರ್.ಟಿ.ಓ. ವೃತ್ತದ ಬಳಿಯ ರಸ್ತೆ ದುಸ್ಥಿತಿ ಮತ್ತು ಸ್ಮಾರ್ಟ ಸಿಟಿ ಕಾಮಗಾರಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ದೂರಿಗೆ ಸ್ಪಂದಿಸಿ ರಸ್ತೆ ದುರಸ್ತಿ ಹಾಗೂ ಎರಡು ಬದಿಗೆ ಗಟಾರು ನಿರ್ಮಾಣ ಕೈಗೊಳ್ಳುವಂತೆ ಸ್ಮಾರ್ಟ ಸಿಟಿ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಎರಡು ದಿನಗಳ ಹಿಂದೆ ಆರ್.ಟಿ.ಓ ವೃತ್ತದ ರಸ್ತೆ ದುರಸ್ಥಿ ಮತ್ತು ಗಟಾರು ನಿರ್ಮಾಣ ಕುರಿತು ಮಾದ್ಯಮಗಳಲ್ಲಿ ಪ್ರಸಾರವಾಗಿದ್ದರ ಹಿನ್ನೆಲೆಯಲ್ಲಿ ಇಂದು ಸ್ಮಾರ್ಟ ಸಿಟಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಲಾಗಿದೆ. ಮಳೆಗಾಲದಲ್ಲಿ ಶಿವಾಜಿ ನಗರ, ವೀರಭದ್ರ ನಗರ ಸೇರಿ ಇಲ್ಲಿನ ತಗ್ಗು ಪ್ರದೇಶಗಳಲ್ಲಿ ನೀರು ಸೇರಿ ಸಮಸ್ಯೆಗಳು ಎದುರಾಗುತ್ತಿರುವುದು ತಿಳಿದ ಸಂಗತಿಯಾಗಿದ್ದು, ನಾಗರಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮನಗಂಡು ಇಂದು ಎರಡು ಬದಿಗೆ ಗಟಾರು ನಿರ್ಮಿಸುವ ಕೆಲಸ ಮತ್ತು ರಸ್ತೆ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಮಳೆಗಾಲದಲ್ಲಿ ರಸ್ತೆ ಮೇಲೆ ಹರಿದು ಶಿವಾಜಿ ನಗರ, ವೀರಭದ್ರ ನಗರಕ್ಕೆ ನೀರು ಹರಿದು ಹೋಗುವುದು ನಿಲ್ಲುವುದರಿಂದ ರಸ್ತೆ ದುರಸ್ಥಿ ಹಾಗೂ ಗಟಾರು ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸ್ಮಾರ್ಟ ಸಿಟಿ ಅಧಿಕಾರಿಗಳಿಗೆ ಸೂಚಿಲಾಗಿದೆ ಎಂದರು. ನಂತರದಲ್ಲಿ ಆರ.ಟಿ.ಓ ಬಳಿಯ ನಿವಾಸಿಗಳು ಸ್ಥಳೀಯ ಸಮಸ್ಯೆಗಳ ಬಗ್ಗೆ ಶಾಸಕರೊಂದಿಗೆ ಚರ್ಚಿಸಿದರು.
ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ಶಾಸಕರ ಮತ್ತು ಅಧಿಕಾರಿಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಆರ್.ಟಿ.ಓ ವೃತ್ತದಲ್ಲಿನ ಸ್ಮಾರ್ಟ ಸಿಟಿ ಕಾಮಗಾರಿಗಳು ಪ್ರಾರಂಭವಾಗಿದ್ದರಿAದ ಅಲ್ಲಿನ ನಾಗರಿಕರು ರಹವಾಸಿಗಳು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಅವರೊಂದಿಗೆ ಸ್ಮಾರ್ಟ ಸಿಟಿ ಅಧಿಕಾರಿಗಳು, ಆರ್.ಟಿ.ಓ ಸರ್ಕಲ, ಶಿವಾಜಿ ನಗರ, ವಿರಭದ್ರ ನಗರ ಸೇರಿದಂತೆ ಸುತ್ತಮುತ್ತಲಿನ ರಹವಾಸಿಗಳು ಉಪಸ್ಥಿತರಿದ್ದರು.