Belagavi
ರಾಮತೀರ್ಥನಗರದ ಅವ್ಯವಸ್ಥೆ ಸೂಕ್ತ ಕ್ರಮಕ್ಕೆ ಸ್ನೇಹ ಸಮಾಜ ಸೇವಾ ಸಂಘದಿಂದ ಜಿಲ್ಲಾಧಿಕಾರಿ ಗಳಿಗೆ ಮನವಿ.

ಬೆಳಗಾವಿ:- ರಾಮತೀರ್ಥನಗರದಲ್ಲಿ ಅವ್ಯವಸ್ಥೆ,ಗೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಜನರು ಹಲವಾರು ಸಮಸ್ಯೆ ಎದುರಿಸುವಂತಾಗಿದ್ದು, ವ್ಯವಸ್ಥೆ ಸರಿಪಡಿಸುವಂತೆ ಕೋರಿ ಇಲ್ಲಿಯ ಸ್ನೇಹ ಸಮಾಜ ಸೇವಾ ಸಂಘದಿಂದ. ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಅರ್ಪಿಸಿದರು.
. ಕಳೆದ ಒಂದು ವರ್ಷದಿಂದ ಬಡಾವಣೆಯಲ್ಲಿಯ ಗಟಾರುಗಳ ಸ್ವಚ್ಛತೆ ಕಾರ್ಯ ಕೈಗೊಂಡಿಲ್ಲ. ಮನೆ ಕಟ್ಟದ ಖಾಲಿ ನಿವೇಶನಗಳು ಕಸದ ತಿಪ್ಪೆಗಳಂತಾಗಿವೆಯಲ್ಲದೆ, ಹಾವು,ಚೇಳುಗಳ ಮನೆಗಳಾಗಿವೆ. ಹಂದಿಗಳ ಕಾಟ ಹೇಳತೀರದಾಗಿದೆ. ಇಲ್ಲಿ ತುಂಬಿ ನಿಂತ ಗಟಾರುಗಳ ಕೊಳಚೆ ರಸ್ತೆಗಳ ಮೇಲೆ ಹರಿಯುತ್ತಿದ್ದು ಕೊಳಚೆಗಳಿಂದಾಗಿ ಜನ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ.
ರಾಮತೀರ್ಥನಗರದ ಮೊದಲ ಹಂತದಲ್ಲಿ ಬೂಡಾದಿಂದ ಕಟ್ಟಿದ ಅನುಪಯುಕ್ತ ತಂಗುದಾಣವು ಅನೈತಿಕ ಮತ್ತು ಆಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ. ಸೂಕ್ತ ನಿರ್ವಹಣೆ ಇಲ್ಲದ ವಿದ್ಯುತ್ ಕಂಭಗಳು. ಇವುಗಳತ್ತ ಅಧಿಕಾರಿಗಳ ಕಿಂಚಿತ್ತೂ ಕಾಳಜಿ ಇಲ್ಲ. ಬೂಡಾ ಮತ್ತು ನಗರಪಾಲಿಕೆಗಳ ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಇಲ್ಲಿ ಸ್ವಚ್ಛತೆ ಕುರಿತ ಯಾವುದೇ ಕ್ರಮ ಕೈಗೊಂಡಿಲ್ಲ.ಡಾಂಬಾರು ಕಾಣದ ಒಳ ರಸ್ತೆಗಳು, ಒಳ ಚರಂಡಿ ಇಲ್ಲದೆ ವಿಪರೀತ ಸೊಳ್ಳೆಗಳು ಇವುಗಳಿಂದ ಜನ ಬೇಸತ್ತು ಹೋಗಿದ್ದಾರೆ. ಕಳೆದ ೯ ವರ್ಷಗಳಿಂದ ರಸ್ತೆಗಳು ಡಾಂಬಾರ ಕಂಡಿಲ್ಲ. ಮನೆ ಕಾಣದ ದೊಡ್ಡ,ದೊಡ್ಡ ನಿವೇಶನಗಳಲ್ಲಿಯ ಗಿಡ,ಗಂಟಿಗಳು ಗುಡ್ಡಗಳಂತಾಗಿವೆ . ಎಂದು ದೂರಿದರು. ಪರಸ್ತಿತಿ ಅಧೋಗತಿಯಾಗಿದ್ದು ಮಾನ್ಯ ಜಿಲ್ಲಾಧಿಕಾರಿಗಳಾದ ತಾವು ಖುದ್ದಾಗಿ ರಾಮತೀರ್ಥನಗರದ ಲ್ಲಿ ಈ ಕುರಿತಂತೆ ಸೂಕ್ತ ಕ್ರಮ ಜರುಗಿಸಿ ಬಡಾವಣೆಯ ಅವ್ಯವಸ್ಥೆ ಸರಿಪಡಿಸಬೇಕು ಎಂದು ಕೋರಿದರು.
ಮನವಿಗೆ ಸ್ಪಂದಿಸಿದ ಡಿ.ಸಿ.ಅವರು ಶೀಘ್ತ ಕ್ರಮ ಜರುಗಿಸುವದಾಗಿ ಹೇಳಿದರು.
ರಾಮತೀರ್ಥನಗರದ ರಹವಾಸಿಗಳ ಸಂಘದ ಅಧ್ಯಕ್ಷ, ಮಾಜಿ ಮೇಯರ ಎನ್.ಬಿ.ನಿರ್ವಾಣಿ ಸ್ನೇಹ ಸಮಾಜ ಸೇವಾ ಸಂಘದ .ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಕಾರ್ಯದರ್ಶಿ ಶಿವನಪ್ಪಾ ಕಮತ, ಉಪಾಧ್ಯಕ್ಷ, ಎಸ್.ಜಿ.ಕಲ್ಯಾಣಿ, ರಾಜೇಂದ್ರ ರತನ್, ಖಂಜಾಂಚಿ, ಡಿ.ಎಮ್.ಟೊಣ್ಣೆ,ನಿರ್ದೇಶಕರಾದ. ಸುರೇಶ ಮುಳಕೂರಿ, ಈರಣ್ಣಾ ಕಟ್ಟಾವಿ, ಎನ್.ಬಿ.ಹನ್ನಿಕೇರಿ, ನ್ಯಾಯವಾದಿ ರಾಜೇಂದ್ರ ಗೌಡಪ್ಪಗೋಳ, ಡಿ.ಬಿ.ಉಳ್ಳೇಗಡ್ಡಿ, ಮಹೇಶ ಚಿಟಗಿ, ಮಹೇಶ ಬಾಗೇವಾಡಿ, ಎ.ಕೆ.ಪಾಟೀಲ, ಸಿ.ಎಸ್.ಖನಗಣ್ಣಿ, ಸೇರಿದಂತೆ ರಹವಾಸಿಗಳು ಉಪಸ್ತಿತರಿದ್ದರು.