hallur

ಐಎಎಸ್,ಕೆಎಎಸ್ ಮತ್ತು ಬ್ಯಾಂಕಿಂಗ್ ತರಬೇತಿ:ಅಣುಕು ಪರೀಕ್ಷೆಯ ಫಲಿತಾಂಶ ಪ್ರಕಟ

0

ಬಳ್ಳಾರಿ,ಜ.8 : ಜಿಲ್ಲಾ ಖನಿಜ ನಿಧಿಯ ಅನುದಾನದಡಿ ಬಳ್ಳಾರಿ ಜಿಲ್ಲಾಡಳಿತವು ಈ ಭಾಗದ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಒದಗಿಸಲು ಕಳೆದ ಭಾನುವಾರ ನಡೆಸಿದ್ದ ಅಣುಕು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ದಾಖಲಾತಿಗಳ ಪರಿಶೀಲನೆ ಮತ್ತು ಕೌನ್ಸೆಲಿಂಗ್ ಜ.10ರಂದು ನಡೆಯಲಿದೆ.
ಬಳ್ಳಾರಿ ಜಿಲ್ಲಾಡಳಿತದ ವೆಬ್ ಸೈಟ್: www.ballari.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ವೆಬ್‌ಸೈಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ವಿವರ, ಅವರಿಗೆ ಸಲಹೆ-ಸೂಚನೆಗಳು ಮತ್ತು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಅಪ್ಲೋಡ್ ಮಾಡಲಾಗಿದೆ.
ಬಳ್ಳಾರಿ ಜಿಲ್ಲಾ ಕೇಂದ್ರ,ತಾಲೂಕು ಕೇಂದ್ರಗಳು ಸೇರಿದಂತೆ ವಿವಿಧೆಡೆ ಸ್ಥಾಪಿಸಲಾಗಿದ್ದ ಪರೀಕ್ಷಾ ಕೇಂದ್ರಗಳಲ್ಲಿ 4 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು;ಅವರ ಒಎಂಆರ್ ಮೌಲ್ಯಮಾಪನ ಮಾಡಲಾಗಿದ್ದು,ಫಲಿತಾಂಶ ಪ್ರಕಟಿಸಲಾಗಿದೆ.
ಪರೀಕ್ಷೆ ಬರೆಯಲು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿತ್ತು; ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಹಾಗೂ ಬಳ್ಳಾರಿ ಜಿಲ್ಲೆಯ ನಿವಾಸಿಗಳಿಗೆ
ಮಾತ್ರ ತರಬೇತಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆ ಮತ್ತು ಕೌನ್ಸೆಲಿಂಗ್ ಗೆ ಹಾಜರಾಗಲು ತಿಳಿಸಲಾಗುತ್ತದೆ. ದಾಖಲಾತಿ ಪರಿಶೀಲನೆ ಮತ್ತು ಕೌನ್ಸೆಲಿಂಗ್ ಜ.10ರಂದು ನಗರದ ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು,
ಆಯ್ಕೆಯಾದ ಅಭ್ಯರ್ಥಿಗಳು ಪದವಿ ಪ್ರಮಾಣಪತ್ರ ಹಾಗೂ ಪದವಿ ಪಾಸಿಂಗ್ ಸರ್ಟಿಫಿಕೇಟ್ ಹಾಗೂ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್,ಎಫಿಕ್ ಕಾರ್ಡ್,ರೇಶನ್ ಕಾರ್ಡ್,ಪಾಸ್ ಪೋರ್ಟ್ ಗಳನ್ನು ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಪ್ರಸ್ತುತಪಡಿಸಬೇಕಿದೆ.
ಆಯ್ಕೆಯಾದ 150 ಅಭ್ಯರ್ಥಿಗಳಲ್ಲಿ 75 ಅಭ್ಯರ್ಥಿಗಳಿಗೆ ಐಎಎಸ್‌/ಕೆಎಎಸ್ ಹಾಗೂ 75ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ತರಬೇತಿಯನ್ನು ರಾಜ್ಯದ ಪ್ರಸಿದ್ಧ ಐಎಎಸ್‌ ತರಬೇತಿ ಸಂಸ್ಥೆಯಾಗಿರುವ ಇನ್ ಸೈಟ್ಸ್ ನೀಡಲಿದೆ. ತರಬೇತಿ ಬಳ್ಳಾರಿಯಲ್ಲಿಯೇ ನಡೆಯಲಿದ್ದು, ಐಎಎಸ್‌/ಕೆಎಎಸ್ ತರಬೇತಿಯನ್ನು ಬೆಳಗ್ಗೆ 9ರಿಂದ 12 ಮತ್ತು ಮಧ್ಯಾಹ್ನ 3ರಿಂದ 6ರವರೆಗೆ ಹಾಗೂ ಬ್ಯಾಂಕಿಂಗ್ ತರಬೇತಿಯನ್ನು ಮಧ್ಯಾಹ್ನ 12ರಿಂದ 3ರವರೆಗೆ ನೀಡಲಾಗುತ್ತದೆ. ತರಬೇತಿ ಸಂಸ್ಥೆ ಯೋಜನಾ ವೇಳಾಪಟ್ಟಿ ಅನುಸಾರ ಕೊನೆಯ ಹಂತದಲ್ಲಿ ವೇಳಾಪಟ್ಟಿ ಬದಲಾಗಬಹುದು.

- Advertisement -

- Advertisement -

Leave A Reply

Your email address will not be published.