BallaryGadagState

ಜಿಲ್ಲಾ ಖನಿಜ ನಿಧಿ ಅಡಿಯ ಕ್ರಿಯಾಯೋಜನೆ, ಕಾಮಗಾರಿ ವಿವರಗಳು ಸೇರಿ ಅಗತ್ಯ ಮಾಹಿತಿ ಲಭ್ಯ ಬಳ್ಳಾರಿ ಡಿಎಂಎಫ್ ವೆಬ್‌ಸೈಟ್ ಲೋಕಾರ್ಪಣೆ


ಬಳ್ಳಾರಿ, ಜ.08 : ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನ ವೆಬ್‌ಸೈಟ್‌ : www.ballaridmf.org ಅನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಎಂ.ಎಸ್.ಶ್ರೀಕರ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ವೆಬ್‌ಸೈಟ್ ಅನಾವರಣಗೊಳಿಸಿ ವೆಬ್‌ಸೈಟ್ ನಲ್ಲಿರುವ ವಿವಿಧ ಮಾಹಿತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್ ಅವರು ಮಾತನಾಡಿ,ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ 6 ಕ್ರಿಯಾ ಯೋಜನೆಗಳಲ್ಲಿನ ಪ್ರಥಮ ಆಧ್ಯತಾ ವಲಯದ 8 ವಲಯಗಳ, ಇತರೆ ಆಧ್ಯತಾ ವಲಯದ 4 ವಲಯಗಳ ಒಟ್ಟು 12 ವಲಯಗಳ ಅನುಮೋದಿತ ಕ್ರಿಯಾ ಯೋಜನೆ, ಕಾಮಗಾರಿಗಳಿಗೆ ಸಂಬಂಧಿಸಿದ ಅಂದಾಜು ಪತ್ರಿಕೆಗಳು, ಕಾಮಗಾರಿಗಳ ಪ್ರಗತಿಯ ಛಾಯಚಿತ್ರಗಳು, 3ನೇ ವ್ಯಕ್ತಿ ತಪಾಸಣಾ ವರದಿ ಹಾಗೂ ಇತರೆ ಮುಖ್ಯ ಮಾಹಿತಿಗಳನ್ನು ಸಾರ್ವಜನಿಕರು ಸದರಿ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ ಎಂದರು.
ಇದರಿಂದಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಮಗಾರಿಗಳ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ವತಿಯಿಂದ ಹಮ್ಮಿಕೊಳ್ಳಲಾದ ಸಾಮಾಜಿಕ, ಶೈಕ್ಷಣಿಕ, ಕೌಶಲ್ಯ, ನೈರ್ಮಲ್ಯ ಮತ್ತು ಆರೋಗ್ಯ ಸಂಬಂಧಿ ಕಾರ್ಯಕ್ರಮಗಳ ವಿವರಗಳನ್ನು ಕಾಲ ಕಾಲಕ್ಕೆ ವೆಬ್‌ಸೈಟ್‌ನಲ್ಲಿ ಪ್ರಚುರಪಡಿಸಲಾಗುವುದು. ಈ ಬಗ್ಗೆ ಸಾರ್ವಜನಿಕರು ವೆಬ್‌ಸೈಟ್‌ನಲ್ಲಿ ಮಾಹಿತಿಗಳನ್ನು ಪಡೆದು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ವತಿಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಸದ್ಯಕ್ಕೆ ವೆಬ್ ಸೈಟ್ ನಲ್ಲಿ 350 ಕಾಮಗಾರಿಗಳ ವಿವರಗಳನ್ನು ಅಪ್ಲೋಡ್ ಮಾಡಲಾಗಿದ್ದು,ಉಳಿದವುಗಳನ್ನು ಅಪ್ಲೋಡ್ ಮಾಡಲಾಗುತ್ತಿ್ದೆದೆ ಎಂದರು.
ಈ ಸಂದರ್ಭದಲ್ಲಿ ಪ್ರೋಬೆಷನರಿ ಐಎಎಸ್‌ ಅಧಿಕಾರಿ ರಾಹುಲ್ ಸಂಕನೂರು,ಡಿಎಫ್ಒ ಸಿದ್ರಾಮಪ್ಪ ಚಳಕಾಪುರೆ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಡಿಎಂಎಫ್ ಅಧಿಕಾರಿ ರಮೇಶ, ಜಿಲ್ಲಾ ಎನ್ಐಸಿ ಅಧಿಕಾರಿ ಶಿವಪ್ರಸಾದ್ ವಸ್ತ್ರದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಡಿಎಂಎಫ್ ಮತ್ತು ಡಿಸಿ ಕಚೇರಿ ಸಿಬ್ಬಂದಿ ಇದ್ದರು.


Leave a Reply