Entertainment

ಇರಾನ್ ಮಹಿಳೆಯ ಬಾಲಿವುಡ್​ ಪ್ರೇಮ..! ಶೋಲೆ ಸಿನಿಮಾದ ಹಾಡಿಗೆ ಮಸ್ತ್ ಸ್ಟೆಪ್ಸ್

ಇರಾನ್ ಮಹಿಳೆಯ ಬಾಲಿವುಡ್​ ಪ್ರೇಮ..! ಶೋಲೆ ಸಿನಿಮಾದ ಹಾಡಿಗೆ ಮಸ್ತ್ ಸ್ಟೆಪ್ಸ್

ಬಾಲಿವುಡ್​ ಸಿನಿಮಾದ ಹಾಡುಗಳಿಗೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿದೇಶಿಗರು ಹಿಂದಿ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕ್ತಿರುವ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತೀರಿ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶೆರಿ ಎಂಬ ಹೆಸರಿನ ಇರಾನಿ ಮಹಿಳೆ ಪಾರ್ಟಿಯೊಂದರಲ್ಲಿ ನೃತ್ಯ ಮಾಡ್ತಿರುವ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಹಸಿರು ಬಣ್ಣದ ಸೀರೆಯನ್ನ ಧರಿಸಿರುವ ಈಕೆ ಬಾಲಿವುಡ್​ನ ಪ್ರಸಿದ್ಧ ಸಿನಿಮಾ ‌ʼಶೋಲೆʼಯ ಜಬ್​ ತಕ್​ ಹೈ ಜಾನ್​ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಹಸಿರು ಸೀರೆ ಧರಿಸಿರುವ ಮಹಿಳೆ ಹೇಮಾ ಮಾಲಿನಿಯ ಬಸಂತಿ ಪಾತ್ರಕ್ಕೆ ಜೀವ ತುಂಬಲು ಯತ್ನಿಸಿದ್ದಾರೆ. ಬಸಂತಿ ಮಾತ್ರವಲ್ಲದೇ ಗಬ್ಬರ್​, ವೀರು ಹೀಗೆ ಒಬ್ಬೊಬ್ಬರು ಒಂದೊಂದು ಪಾತ್ರವನ್ನ ನಿಭಾಯಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಕಮೆಂಟ್​ ವಿಭಾಗದಲ್ಲೂ ದೇಶಿ ನೆಟ್ಟಿಗರು ವಿದೇಶಿ ಮಹಿಳೆಯ ಬಾಲಿವುಡ್​ ಪ್ರೇಮಕ್ಕೆ ಫಿದಾ ಆಗಿ ಪ್ರತಿಕ್ರಿಯೆಗಳನ್ನ ಹಂಚಿಕೊಂಡಿದ್ದಾರೆ.


Leave a Reply