Entertainment

ಬಾಲಿವುಡ್​ ಹಿರಿಯ ನಟ ಕದೇರ್​ ಖಾನ್​​ ಪುತ್ರ ಅಬ್ದುಲ್​ ಖುದ್ದೂಸ್​ ನಿಧನ

ಬಾಲಿವುಡ್​ ಹಿರಿಯ ನಟ ಕದೇರ್​ ಖಾನ್​​ ಪುತ್ರ ಅಬ್ದುಲ್​ ಖುದ್ದೂಸ್​ ನಿಧನ

ಹಿರಿಯ ನಟ ದಿವಂಗತ ಕದೇರ್​ ಖಾನ್​ ಹಿರಿಯ ಪುತ್ರ ಅಬ್ದುಲ್​ ಖುದ್ದೂಸ್​​ ಕೆನಡಾದಲ್ಲಿ ನಿಧನರಾಗಿದ್ದಾರೆ.

ಇವರು ಕದೇರ್​ ಖಾನ್​ರ ಮೊದಲ ಪತ್ನಿಗೆ ಜನಿಸಿದ ಮಗನಾಗಿದ್ದರು. ಅಬ್ದುಲ್​ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸಿನಿರಂಗದಿಂದ ದೂರವೇ ಇದ್ದ ಅಬ್ದುಲ್​ ಖುದ್ದೂಸ್​​ ಕೆನಡಾದ ಏರ್​ಪೋರ್ಟ್​ನಲ್ಲಿ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಈ ಹಿಂದೆ ಸಂದರ್ಶನವೊಂದರಲ್ಲಿ ಕದೇರ್​ ತನ್ನ ಹಿರಿಯ ಪುತ್ರ ಅಬ್ದುಲ್​ ಕಾರಣಕ್ಕೆ ನಾನು ಖಳನಾಯಕನ ಪಾತ್ರ ಮಾಡೋದನ್ನ ನಿಲ್ಲಿಸಿದ್ದೆ ಎಂದು ಹೇಳಿದ್ದರು. ನನ್ನ ಹಿರಿಯ ಪುತ್ರ ಅಬ್ದುಲ್​​ ಖಳನಾಯಕರಂತೆ ಬಟ್ಟೆಗಳನ್ನ ಹರಿದುಕೊಂಡು ಮನೆಗೆ ಬರ್ತಿದ್ದ. ಸಿನಿಮಾಗಳಲ್ಲಿ ನಾನು ಕೊನೆಯಲ್ಲಿ ಹೊಡೆತ ತಿನ್ನುತ್ತಿದ್ದೆ. ಇದನ್ನ ಆತನ ಸ್ನೇಹಿತರು ಆಡಿಕೊಳ್ಳುತ್ತಿದ್ದರು. ಕೋಪಗೊಳ್ತಿದ್ದ ಅಬ್ದುಲ್​​ ಸ್ನೇಹಿತರೊಂದಿಗೆ ಜಗಳ ಮಾಡಿಕೊಂಡು ಹೊಡೆತ ತಿನ್ನುತ್ತಿದ್ದ. ಅಂದಿಗೆ ನಾನು ಖಳನಾಯಕನ ಪಾತ್ರವನ್ನ ಮಾಡಬಾರದು ಎಂದು ನಿರ್ಧರಿಸಿದೆ. ಅಂದಿನಿಂದ ನಾನು ವಿದೂಷಕನ ಪಾತ್ರ ಮಾಡಲು ಪ್ರಾರಂಭಿಸಿದೆ ಎಂದು ಹೇಳಿದ್ದರು.

ಕದೇರ್​ ಖಾನ್​ರ ಪುತ್ರ ಸರ್ಫರಾಜ್​​ ತೆರೆ ನಾಮ್​, ಮೈನೆ ದಿಲ್​ ತುಜ್​ ಕೋ ದಿಯಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕದೇರ್​ರ ಕಿರಿಯ ಪುತ್ರ ಶಾ ನವಾಜ್​​ ಕೆನಡಾದಲ್ಲಿ ತನ್ನ ಶಿಕ್ಷಣವನ್ನ ಪೂರ್ಣಗೊಳಿಸಿ ಮಿಲೆಂಗೆ ಮಿಲೆಂಗೆ, ವಾದಾ, ಹಾಗೂ ಹಮ್​ ಕೋ ತುಮ್​ ಸೇ ಪ್ಯಾರ್​​ ಹೈ ಸಿನಿಮಾದಲ್ಲಿ ಅಸಿಸ್ಟಂಟ್​ ಆಗಿ ಕೆಲಸ ಮಾಡಿದ್ದಾರೆ.

ಕದೇರ್​ ಖಾನ್​​ 2018ರ ಡಿಸೆಂಬರ್​ 31ರಂದು ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನರಾಗಿದ್ದರು. ಈ ವೇಳೆ ಅವರಿಗೆ 81 ವರ್ಷ ವಯಸ್ಸಾಗಿತ್ತು.

….


Leave a Reply