Technology

ಬೈಕ್​ ಸವಾರರಿಗೆ ಗುಡ್​ ನ್ಯೂಸ್​: ಮಾರುಕಟ್ಟೆಗೆ ಬಂತು ಅತ್ಯುನ್ನತ ವಿನ್ಯಾಸದ ಸ್ಟಡ್ಸ್ ಹೆಲ್ಮೆಟ್​

ಬೈಕ್​ ಸವಾರರಿಗೆ ಗುಡ್​ ನ್ಯೂಸ್​: ಮಾರುಕಟ್ಟೆಗೆ ಬಂತು ಅತ್ಯುನ್ನತ ವಿನ್ಯಾಸದ ಸ್ಟಡ್ಸ್ ಹೆಲ್ಮೆಟ್​

ಸ್ಟಡ್ಸ್​ ಅನ್ನೋದು ವಿಶ್ವದಲ್ಲೇ ಅತ್ಯಂತ ದೊಡ್ಡ ಹೆಲ್ಮೆಟ್​ ತಯಾರಕ ಕಂಪನಿಯಾಗಿದೆ. ಈ ಕಂಪನಿಯು ಇತ್ತೀಚೆಗೆ ಅರ್ಬನ್​ ಸೂಪರ್​ ಡಿ 1 ಡೆಕೊರ್​ ಹೆಲ್ಮೆಟ್​ನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಇದರ ಬೆಲೆ 1220 ರೂಪಾಯಿ ಆಗಿದೆ. ಇದು ಅರ್ಧ ಮುಖವನ್ನ ಕವರ್​ ಮಾಡಬಲ್ಲ ಹೆಲ್ಮೆಟ್​ ಆಗಿದ್ದು ಸೂರ್ಯನ ಕಿರಣಗಳನ್ನ ತಡೆಯಬಲ್ಲ ಸಾಮರ್ಥ್ಯ ಹೊಂದಿದೆ.

ಅಲ್ಲದೇ ಈ ಹೆಲ್ಮೆಟ್​ ಎಲ್ಲಾ ಮಾದರಿಯ ದ್ವಿಚಕ್ರವಾಹನ ಸವಾರರಿಗೆ ಅನುಕೂಲವಾಗುವ ರೀತಿಯಲ್ಲೇ ವಿನ್ಯಾಸಗೊಂಡಿದೆ ಎಂದು ಸ್ಟಡ್ಸ್ ಹೇಳಿದೆ. ಈ ಹೆಲ್ಮೆಟ್​ 5 ವಿಧದ ಗಾತ್ರದಲ್ಲಿ ಲಭ್ಯವಿದೆ. ಸಣ್ಣ (540mm), ಮಧ್ಯಮ (570mm), ದೊಡ್ಡ (580mm), ಇನ್ನೂ ದೊಡ್ಡ (600mm) ಗಾತ್ರಗಳು ಲಭ್ಯ ಇದೆ. ಅಲ್ಲದೇ ಈ ಹೆಲ್ಮೆಟ್​ ಗ್ಲಾಸಿ ಹಾಗೂ ಮ್ಯಾಟ್​ ಎರಡೂ ವಿಧಗಳಲ್ಲೂ ಲಭ್ಯವಿದೆ.

ಹೆಲ್ಮೆಟ್​​ನ ಒಳಭಾಗದಲ್ಲಿ ಅತ್ಯುನ್ನತ ಗುಣಮಟ್ಟದ ಬಟ್ಟೆಯನ್ನ ಬಳಸಲಾಗಿದ್ದು, ಬೈಕ್​ ಸವಾರರು ಹೆಚ್ಚಿನ ಅವಧಿ ಹೆಲ್ಮೆಟ್​ ಧರಿಸಿಯೇ ಇರಬಹುದಾಗಿದೆ. ಅಲ್ಲದೇ ಈ ಬಟ್ಟೆಯಿಂದ ಯಾವುದೇ ಅಲರ್ಜಿ ಸಮಸ್ಯೆ ಉಂಟಾಗೋದಿಲ್ಲ ಎಂದೂ ಕಂಪನಿ ಹೇಳಿದೆ.

….


Leave a Reply