Featured-Article

ಕೆ.ಜಿ.ಗೆ 85 ಸಾವಿರ ರೂಪಾಯಿಯಂತೆ ಮಾರಾಟವಾಗುತ್ತೆ ಈ ತರಕಾರಿ

ಕೆ.ಜಿ.ಗೆ 85 ಸಾವಿರ ರೂಪಾಯಿಯಂತೆ ಮಾರಾಟವಾಗುತ್ತೆ ಈ ತರಕಾರಿ

ಕೃಷಿ ಕ್ಷೇತ್ರದಲ್ಲಿ ಲಾಭವನ್ನ ಪಡೆಯಬೇಕು ಅಂದರೆ ರೈತರು ಹೆಚ್ಚಿನ ರಿಸ್ಕ್​ ತೆಗೆದುಕೊಳ್ಳಲೇಬೇಕು. ಅದರಲ್ಲೂ ನಮ್ಮ ದೇಶದಲ್ಲಂತೂ ರೈತರು ಕೃಷಿ ಕ್ಷೇತ್ರದಲ್ಲಿ ಲಾಭವನ್ನ ಪಡೆಯಬೇಕು ಅಂದರೆ ದೊಡ್ಡ ಸಾಹಸವನ್ನೇ ಮಾಡಬೇಕು.

ಇದೇ ರೀತಿಯಲ್ಲಿ ಬಿಹಾರದ ರೈತನೊಬ್ಬ ವಿಶ್ವದ ದುಬಾರಿ ತರಕಾರಿಯನ್ನ ಬೆಳೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಬಿಹಾರದ ಔರಂಗಾಬಾದ್​​ ಜಿಲ್ಲೆಯ ಕರಮ್​ದಿಹ್​ ಗ್ರಾಮದ 38 ವರ್ಷದ ರೈತ ಅಮರೇಶ್​ ಸಿಂಗ್​ ಎಂಬವರು 2.5 ಲಕ್ಷ ರೂಪಾಯಿ ವ್ಯಯಿಸಿ ಹಾಪ್​ಶೂಟ್ಸ್​ ಬೆಳೆಗಳನ್ನ ಬೆಳೆದಿದ್ದಾರೆ. ಇದು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಣುವ ಬೆಳೆಯಾಗಿದೆ. ಅಮರೇಶ್​ ತಮ್ಮ 5 ಎಕರೆ ಜಾಗದಲ್ಲಿ ಯಾವುದೇ ರಾಸಾಯನಿಕಗಳನ್ನ ಬಳಕೆ ಮಾಡದೇ ಈ ಬೆಳೆಯನ್ನ ಬೆಳೆದಿದ್ದಾರೆ.

ಕೃಷಿ ವಿಜ್ಞಾನಿ ಡಾ. ಲಾಲ್​ ಮಾರ್ಗದರ್ಶನದಲ್ಲಿ ವಾರಣಾಸಿಯ ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆಯಲ್ಲಿ ಈ ಹಾಪ್​​ ಶೂಟ್ಸ್​ನ್ನು ಬೆಳೆದಿದ್ದಾರೆ.

ಇಲ್ಲಿಂದಲೇ ಬೀಜಗಳನ್ನ ತಂದು ಅಮರೇಶ್​​​ ಸಸಿಗಳನ್ನ ಬೆಳೆಸಿದ್ದಾರೆ ಎನ್ನಲಾಗಿದೆ. ಇದನ್ನ ಬಿಯರ್​ಗಳ ತಯಾರಿಕೆಯಲ್ಲಿ ಬಳಸಲಾಗುತ್ತೆ. ಹಾಗೂ ಸಸಿಯ ಕೊಂಬೆಯನ್ನ ಔಷಧಿ ಹಾಗೂ ಆಹಾರ ಪದಾರ್ಥವಾಗಿ ಬಳಕೆ ಮಾಡ್ತಾರೆ.

ಐಪಿಎಸ್ ಅಧಿಕಾರಿ ಸುಪ್ರಿಯಾ ಸಾಹು ಅಮರೇಶ್​ರ ಈ ಕತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಮಾತ್ರವಲ್ಲದೇ ಯುವ ಕೃಷಿಕನ ಈ ಅನ್ವೇಷಣೆಯನ್ನ ಕೊಂಡಾಡಿದ್ದಾರೆ.

….


Leave a Reply