Health & Fitness

ಎಂದಾದರೂ ಬೆಣ್ಣೆ ಹಾಕಿದ ಕಾಫಿಯನ್ನ ಸವಿದಿದ್ದೀರಾ…..?

ಎಂದಾದರೂ ಬೆಣ್ಣೆ ಹಾಕಿದ ಕಾಫಿಯನ್ನ ಸವಿದಿದ್ದೀರಾ…..?

ವಿಭಿನ್ನ ವಿಧಾನದಲ್ಲಿ ಖಾದ್ಯಗಳನ್ನ ತಯಾರು ಮಾಡೋದು ಹೊಸದೇನಲ್ಲ. ಆದರೆ ಈ ವಿಭಿನ್ನ ಪ್ರಯತ್ನಗಳು ಪ್ರತಿಬಾರಿಯೂ ಒಳ್ಳೆಯ ಫಲಿತಾಂಶವನ್ನ ನೀಡೋದಿಲ್ಲ. ಕೆಲವೊಮ್ಮೆ ಕೆಟ್ಟ ರುಚಿಗೂ ಕಾರಣವಾಗಿಬಿಡುತ್ತೆ. ಇಂತಹದ್ದೇ ಒಂದು ಸಾಲಿಗೆ ಬೆಣ್ಣೆ ಕಾಫಿ ಸೇರಿದೆ.

ನೀವು ಹಾಟ್​, ಕೋಲ್ಡ್ ಕಾಫಿಗಳನ್ನ ಕ್ರೀಮ್​ಗಳ ಜೊತೆಯಲ್ಲಿ ಸೇವಿಸಿರಬಹುದು. ಆದರೆ ಎಂದಿಗೂ ವಿಚಿತ್ರ ಫ್ಲೇವರ್​ನಿಂದ ತಯಾರಿಸಲಾದ ಬೆಣ್ಣೆ ಕಾಫಿಯನ್ನ ಸವಿದಿರೋಕೆ ಸಾಧ್ಯಾನೇ ಇಲ್ಲ.

ಆಹಾರ ತಜ್ಞ ಅಮರ್​ ಸಿರೋಹಿ ಎಂಬವರು ಕೆಲ ದಿನಗಳ ಹಿಂದಷ್ಟೇ ದೆಹಲಿಗೆ ತೆರಳಿದ್ದರು. ಅಲ್ಲಿನ ಜಾಮಾ ಮಸೀದಿ ಸಮೀಪದಲ್ಲಿ ಒಂದು ಪುಟ್ಟ ಟೀ ಸ್ಟಾಲ್​ನ್ನು ಕಂಡಿದ್ದಾರೆ. ಇಲ್ಲಿ ಚಹ ವ್ಯಾಪಾರಿ ಬೆಣ್ಣೆ ಕಾಫಿ ಹಾಗೂ ಬೆಣ್ಣೆ ಚಹ ಮಾಡುತ್ತಿರೋದು ಅವರ ಕಣ್ಣಿಗೆ ಬಿದ್ದಿದೆ.

ಅಮುಲ್​ ಬಟರ್​ ಕಾಫಿ ಎಂಬ ಹೆಸರಿನಲ್ಲಿ ಚಹ ವ್ಯಾಪಾರಿ ಕಳೆದ 20 ವರ್ಷಗಳಿಂದ ಈ ಕಾಫಿಯನ್ನ ಮಾರಾಟ ಮಾಡ್ತಿದ್ದಾರೆ. ಅಮರ್​ ಕೂಡ ಈ ಕಾಫಿಯನ್ನ ಆರ್ಡರ್​ ಮಾಡಿದ್ದರು. ಹಾಲು, ಬೆಣ್ಣೆಯನ್ನ ಹಾಕಿ ಕುದಿಸಲಾಗುತ್ತೆ, ಬಳಿಕ ಇದಕ್ಕೆ ಕಾಫಿ ಪೌಡರ್​​ ಹಾಕಿ ಮಷಿನ್​ನಲ್ಲಿ ಬ್ಲೆಂಡ್​ ಮಾಡಲಾಗುತ್ತೆ . ಈ ಕಾಫಿಯನ್ನ ಕಪ್​ಗೆ ಹಾಕಿ ಮೇಲಿಂದ ಕೋಕಾ ಪೌಡರ್​ ಹಾಕಲಾಗುತ್ತೆ. ಆದರೆ ಅಮರ್​ರ ಇನ್​ಸ್ಟಾಗ್ರಾಂ ಪೋಸ್ಟ್ ನೋಡುತ್ತಿದ್ದರೆ ಅವರಿಗೆ ಬಟರ್​ ಕಾಫಿ ಅಷ್ಟೊಂದು ಇಷ್ಟವಾದಂತೆ ಕಂಡುಬಂದಿಲ್ಲ.

….


Leave a Reply