International

ರೋಹಿಂಗ್ಯಾ ಶಿಬಿರದಲ್ಲಿ ಬೆಂಕಿ, ಮೂವರ ಆಹುತಿ

ರೋಹಿಂಗ್ಯಾ ಶಿಬಿರದಲ್ಲಿ ಬೆಂಕಿ, ಮೂವರ ಆಹುತಿ

ಕಾಕ್ಸ್‍ಬಜಾರ್, ಏ.2-ಬಾಂಗ್ಲಾ ದೇಶದ ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅನಾಹುತದಲ್ಲಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದಾರೆ. ಕುಟುಪಾಲಾಂಗ್‍ನಲ್ಲಿರುವ ಮ್ಯಾನ್ಮಾರ್‍ನ ರೋಹಿಂಗ್ಯಾ ನಿರಾಶ್ರಿತ ಶಿಬಿರದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂರು ಮಂದಿ ಬಲಿಯಾಗಿ, 20ಕ್ಕೂ ಹೆಚ್ಚು ಮಳಿಗೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಹಮದ್ ಸಂಜೂರ್ ಮೊರ್ಷಾದ್ ತಿಳಿಸಿದ್ದಾರೆ.

ಶಿಬಿರದಲ್ಲಿದ್ದ ನಿರಾಶ್ರಿತರು ನಿದ್ರೆ ಮಾಡುತ್ತಿದ್ದಾಗ ನಸುಕಿನ ವೇಳೆ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಎಚ್ಚೆತ್ತವರು ಮನೆಯಿಂದ ಹೊರ ಬಂದು ಪ್ರಾಣ ಉಳಿಸಿಕೊಂಡರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ಆದರೂ ಘಟನೆಯಲ್ಲಿ ಮೂರು ಮಂದಿ ರೋಹಿಂಗ್ಯಾಗಳು ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ತಿಂಗಳು ನಡೆದಿದ್ದ ಅಗ್ನಿ ಅನಾಹುತದಲ್ಲಿ 15 ಮಂದಿ ಮೃತಪಟ್ಟು 560ಕ್ಕೂ ಹೆಚ್ಚು ಮಂದಿಗೆ ಗಾಯವಾಗಿತ್ತು. ಸುಮಾರು 45.000 ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು.


Leave a Reply