Technology

ಬಿಗ್ ಬಜಾರ್ ನೀಡ್ತಿದೆ ಭರ್ಜರಿ ಆಫರ್: 2 ಗಂಟೆಯೊಳಗೆ ಮನೆ ಸೇರಲಿದೆ ವಸ್ತು

ಬಿಗ್ ಬಜಾರ್ ನೀಡ್ತಿದೆ ಭರ್ಜರಿ ಆಫರ್: 2 ಗಂಟೆಯೊಳಗೆ ಮನೆ ಸೇರಲಿದೆ ವಸ್ತು

ಇನ್ಮುಂದೆ ಬಿಗ್ ಬಜಾರ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಬಿಲ್ ಪಾವತಿ ಮಾಡ್ಬೇಕಾಗಿಲ್ಲ. ಮನೆಯಲ್ಲೇ ಕುಳಿತು ಬಿಗ್ ಬಜಾರ್ ನಲ್ಲಿರುವ ವಸ್ತುಗಳನ್ನು ಮನೆಗೆ ಡಿಲೆವರಿ ಮಾಡಿಸಿಕೊಳ್ಳಬಹುದು. ಕೇವಲ ಎರಡು ಗಂಟೆಯಲ್ಲಿ ಬಿಗ್ ಬಜಾರ್ ವಸ್ತುಗಳು ನಿಮ್ಮ ಮನೆಗೆ ಬರಲಿವೆ.

ಬಿಗ್ ಬಜಾರ್ ಮೊಬೈಲ್ ಅಪ್ಲಿಕೇಷನ್ ಹಾಗೂ ಪೋರ್ಟಲ್ ಮೂಲಕ ವಸ್ತುಗಳನ್ನು ಆರ್ಡರ್ ಮಾಡಬಹುದು. ಹತ್ತಿರದ ಚಿಲ್ಲರೆ ವ್ಯಾಪಾರಿಗಳ ಮೂಲಕ ಎರಡು ಗಂಟೆಯಲ್ಲಿ ವಸ್ತುಗಳು ನಿಮ್ಮ ಮನೆಯಲ್ಲಿರಲಿವೆ. ಬಿಗ್ ಬಜಾರ್ ದೆಹಲಿ-ಎನ್‌ಸಿಆರ್, ಮುಂಬೈ ಮತ್ತು ಬೆಂಗಳೂರಿನಲ್ಲಿ ಎರಡು ಗಂಟೆ ವಿತರಣಾ ಸೇವೆಯನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ಈ ಕಂಪನಿಯು ಈ ಸೇವೆಯನ್ನು ಇತರ ನಗರಗಳಿಗೆ ವಿಸ್ತರಿಸಲಿದೆ.

ಈ ಚಿಲ್ಲರೆ ಸರಪಳಿಯಿಂದ ಗ್ರಾಹಕರು ಬಟ್ಟೆ, ಆಹಾರ ವಸ್ತುಗಳು, ಎಫ್‌ಎಂಸಿಜಿ ಉತ್ಪನ್ನಗಳು ಮತ್ತು ಮನೆಯ ವಸ್ತುಗಳನ್ನು ಖರೀದಿಸಬಹುದು. ಗ್ರಾಹಕರು ಕನಿಷ್ಠ 500 ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಬೇಕಾಗುತ್ತದೆ. ಸಾವಿರ ರೂಪಾಯಿ ಮೌಲ್ಯದ ವಸ್ತುಗಳ ಡಿಲೆವರಿಗೆ 49 ರೂಪಾಯಿ ವಿತರಣಾ ಶುಲ್ಕ ನೀಡಬೇಕಾಗುತ್ತದೆ. ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಡಿಲೆವರಿಗೆ ಯಾವುದೇ ವಿತರಣಾ ಶುಲ್ಕವಿರುವುದಿಲ್ಲ.


Leave a Reply