vijayapur

ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಅವಕಾಶ


ವಿಜಯಪುರ ಏ. ೧೫ : ವಿಜಯಪುರ ಉಪವಿಭಾಗದಲ್ಲಿ ನಿಯಮಾನುಸಾರ ಕಾರ್ಯನಿರ್ವಹಿಸದೆ ಇರುವ ಈ ಕೆಳಗಿನ ಸಹಕಾರ ಸಂಘಗಳನ್ನು ಈ ಸಂಘಗಳ ಅಢಾವೆ ಪ್ರಕಾರ ಕೊಡತಕ್ಕ ಹಾಗೂ ಬರತಕ್ಕ ಬಾಬುಗಳು ನಿಖರವಾಗಿ ಹೇಳಲು ಸಾಧ್ಯವಾಗದೇ ಇರುವುದರಿಂದ ಸಂಘಗಳ ನೋಂದಣಿ ಕ್ರಮಾಂಕವನ್ನು ರದ್ದುಪಡಿಸುವುದು ಅವಶ್ಯಕವಾಗಿರುತ್ತದೆ ಎಂದು ವಿಜಯಪುರ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಸಮಾಪಾನಾಧಿಕಾರಿ ಹಾಗೂ ಪ್ರದಸ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಇವರು ತಿಳಿಸಿದ್ದಾರೆ
ಆದ್ದರಿಂದ ವಿಜಾಪೂರ ನ್ಯಾಯಾಂಗ ಇಲಾಖಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ವಿಜಯಪುರ ಈ ಸಹಕಾರ ಸಂಘಗಳ ಕುರಿತು ಯಾವುದಾದರೂ ಆಪೇಕ್ಷಣೆಗಳಿದ್ದರೆ ೭ ದಿನಗಳೊಳಗಾಗಿ ಕಚೇರಿಗೆ ಸಂಪರ್ಕಿಸಬಹುದು. ಇಲ್ಲವಾದಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ಪರಿಗಣಿಸಿ ನೋಂದಣಿ ಕ್ರಮಾಂಕವನ್ನು ರದ್ದುಪಡಿಸಿ ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply