vijayapur

ಕೈಗಾರಿಕಾ ಸಂಸ್ಥೆಗಳಲ್ಲಿ ಕೆಲವೊಂದು ಮಧ್ಯವರ್ತಿಗಳಿಂದ ಅಕ್ರಮ : ಅಂತಹವರ ವಿರುದ್ಧ ದೂರು ದಾಖಲಿಸಿ ಕ್ರಮ


ವಿಜಯಪುರ ಏ. ೧೫ : ಜಿಲ್ಲೆಯ ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ಸಂಸ್ಥೆಗಳಲ್ಲಿ ಕೆಲವೊಂದು ಮಧ್ಯವರ್ತಿಗಳು ಎಸ್ ಸಿ ವಿ ಟಿ ಯಿಂದ ಎನ್ ಸಿ ವಿ ಟಿ ಸಂಯೋಜನೆಗೆ ಒಳಪಡಿಸಿ ಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಾ ಅಕ್ರಮವೆಸಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ ಎಂದು ವಿಜಯಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ಹಾಗೂ ನೋಡಲ್ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ ಸಿ ವಿ ಟಿ ಯಿಂದ ಎನ್ ಸಿ ವಿ ಟಿ ಗೆ ಯೋಜನೆ ಹೊಂದಲು ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಸಂಸ್ಥೆಗಳು ನಿಯಮಾನುಸಾರ ಆನ್ ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ, ಡಿಜಿಟಿ ನವದೆಹಲಿ ಯವರ ಸ್ಥಾಯಿ ಸಮಿತಿ ಶಿಫಾರಸ್ಸು ಮಾಡಿರುವ ಸಂಸ್ಥೆಗಳು ಮಾತ್ರ ಸಂಯೋಜನೆಯಾಗುತ್ತವೆ ಹಾಗೂ ವೃತ್ತಿ ಘಟಕಗಳಿಗೆ ತರಬೇತುದಾರರನ್ನು ಪ್ರವೇಶ ಮಾಡಿಕೊಳ್ಳಲು ಅವಕಾಶವಿರುತ್ತದೆ.
ಇದನ್ನು ಮೀರಿ ನಿಯಮಬಾಹಿರವಾಗಿ ಹಾಗೂ ಅಕ್ರಮಗಳು ನಡೆದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply