Belagavi

ಷಟಸ್ಥಲ ದ್ವಜಾರೋಹಣದೊಂದಿಗೆ ಕರೆಮ್ಮದೇವಿ ಜಾತ್ರೆ ಆರಂಭ.


ಬೈಲಹೊಂಗಲ ೧೫:- ಪಟ್ಟಣದ ಪತ್ರಿ ಬಸವ ನಗರದಲ್ಲಿ ಶ್ರೀ ಕರೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವನ್ನು ಷಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ £Ãಡಲಾಯಿತು.
ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಜಾತ್ರೆಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಗುರುವಾರ ಬೆಳಿಗ್ಗೆ ೮ ಗಂಟೆಗೆ ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು, ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ದೇವಿಯ ಪೂಜೆ ಅಭಿಷೇಕ ಜರುಗಿದ ನಂತರ ೮ ಗಂಟೆಗೆ ದೇವಿಯ ಭಾವಚಿತ್ರದ ಮೆರವಣಿಗೆ ಜರುಗಿದ ನಂತರ ಹತ್ತು ಗಂಟೆಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ.
ಇಂದು ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಶಿವಾನಂದ ಮಡಿವಾಳರ ಅಧ್ಯಕ್ಷತೆಯಲ್ಲಿ ಚನ್ನಯ್ಯ ಹಿರೇಮಠ ಅವರು ಷಟಸ್ಥಲ ಧ್ವಜಾರೋಹಣ ಮಾಡಿದರು.
ಹಿರಿಯರಾದ ಬಿ, ಎಸ್ ಬೂದಿಹಾಳ, ಸುರೇಶ ಬಾಗಿ, ಬಿ, ಎಸ್ ಹರಕುಣಿ, ಎಸ್, ಎಲ್, ಪಾಟೀಲ, ವಿ, ವಿ ಮಠದ, ಸೋಮು ಮಡಿವಾಳರ, ಎಸ್ ಎ ಗಾಣಿಗೇರ, ಈರಪ್ಪ ಬೆಳಗಾವಿ, ಮಲ್ಲಪ್ಪ ಶಿಂತ್ರಿ, ವಿ ಎಲ್ ತಾಪಸಿ, ಸುರೇಶ ತೋರಗಲ್ಲ, ಎಸ್ ಕೆ ಸಂಪಗಾAವಿ, ಶ್ರೀರಾಮ ಕುಲಕರ್ಣಿ ಸೇರಿದಂತೆ ಪತ್ರಿ ಬಸವ ನಗರ ೩ನೇ ಕ್ರಾಸ್ ಹಾಗೂ ವಿನಾಯಕ ನಗರದ ಗಣ್ಯರು ಹಾಜರಿದ್ದರು.

 


Leave a Reply