Belagavi

ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆ ಮಾಡಲು ಸಾಧ್ಯ: ಶಿವಕುಮಾರ ಸ್ವಾಮೀಜಿ


ಬೈಲಹೊಂಗಲ ೧೫- ಉಚಿತ ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ಇಳಿಸುವದಲ್ಲದೇ ಸಾಲಕ್ಕೆ ಮೂಲವಾಗುವುದನ್ನು ತಪ್ಪಿಸುತ್ತವೆ ಎಂದು ದಾವಣಗೆರೆಯ ವಿದ್ವಾನ ಶಿವಕುಮಾರ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಪಟ್ಟಣದ ಮುರಗೋಡ ರಸ್ತೆಯ ಶ್ರೀ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ ೧೨ ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ಯ ೨ ನೇ ದಿನ ನಡೆದ ಕಾರ್ಯಕ್ರಮದಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿಸಿ ಮಾತನಾಡಿ, ಮದುವೆ ಮಾಡಿಕೊಂಡ ಮಾತ್ರಕ್ಕೆ ಸಂಸಾರ ಆಗಲು ಸಾಧ್ಯವಿಲ್ಲ. ಸಾಮೂಹಿಕ ವಿವಾಹಗಳು ಪ್ರೀತಿಯ ಜೊತೆಯಲ್ಲಿ ಆರ್ಥಿಕ ಮುಗ್ಗಟ್ಟು ಕಡಿಮೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ನಿಮ್ಮ ತಂದೆ ತಾಯಿಗಳಿಗೆ ಗೌರವ ನೀಡಿದರೆ ಶ್ರೇಯಸ್ಸು ಲಬ್ಯವಾಗವುದು ಎಂದರು.
ದೇವಸ್ಥಾನದ ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ರಿö್ತ ಆರಾದ್ರಿಮಠ ಮಾತನಾಡಿ, ಸಂಸಾರದಲ್ಲಿ ಆಗುವ ತೊಂದರೆ ತಾಪತ್ರಯಗಳನ್ನು ಮನಸ್ತಾಪಗಳನ್ನು ದೂರಿಟ್ಟು ಸಂಸಾರವನ್ನು ಸಾಗರದ ಹಾಗೇ ನಡೆಸಿಕೊಂಡು ಹೋಗುವ ಶಕ್ತಿಯನ್ನು ತಾಯಿ ದುರ್ಗಾಪರಮೇಶ್ವರಿಯು ನವಜೋಡಿಗೆ ಕರುಣಿಸಲಿ ಎಂದರು.
ಗೋಕಾಕದ ವಿಜಯ ಸ್ವಾಮೀಜಿ, ಮರಕುಂಬಿಯ ದುಂಡಯ್ಯ ಸ್ವಾಮೀಜಿ, ಆರ್‌ಟಿಓ ಇನ್ಸಪೆಕ್ಟರ್ ಮಠಪತಿ, ಅಡಿವೆಪ್ಪ ಕಾಜಗಾರ, ನಾಗಪ್ಪ ಮೇಟಿ, ಕುಮಾರ ರೇಶ್ಮಿ ನೂರಾರು ಪುರೋಹಿತರು ಹಾಜರಿದ್ದರು.


Leave a Reply