BelagaviState

ಬಹಿರಂಗ ಪ್ರಚಾರಕ್ಕೆ ಇಂದೇ ಕೊನೆಯ ದಿನ ಬ್ರೆಕ್ ಬೀಳಲು ಕ್ಷಣಗಣನೆ


ಬೆಳಗಾವಿ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆದಿನವಾಗಿದೆ.  ಸಾಯಂಕಾಲ 7 ಗಂಟೆಗೆ ಎರಡೂ ಪಕ್ಷಗಳ ಪ್ರಚಾರದ ಕಸರತ್ತಿಗೆ  ತೆರೆಬೀಳಲಿದೆ.

ಎರಡೂ ಪಕ್ಷದ ರಾಜ್ಯದ ಘಟಾನು ಘಟಿ ನಾಯಕರು ಬೆಳಗಾವಿಗೆ ಬೇಟಿ ಕೊಟ್ಟು ಪ್ರಚಾರ ನಡೆಸಿದ್ದಾರೆ ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಅವರು ಸ್ಪರ್ಧೆಗೆ ಇಳದಿದ್ದು ಪ್ರಚಾರಕ್ಕೆ ಡಿ.ಕೆ ಶಿವಕುಮಾರ, ಸಿದ್ದರಾಮಯ್ಯಾ ಸೇರಿದಂತೆ ಹಲವು ನಾಯಕರು ಬೆಳಗಾವಿಗೆ ಆಗಮಿಸಿ ಪ್ರಚಾರ ಮಾಡಿದ್ದಾರೆ. ಇನ್ನು ಬಿಜೆಪಿಯಿಂದ ಮಂಗಳಾ ಅಂಗಡಿ ಕಣದಲ್ಲಿದ್ದು ಅವರ ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪಾ ಎರಡು ಬಾರಿ ಬೆಳಗಾವಿಗೆ ಆಗಮಿಸಿ ಮತಬೇಟೆಯಾಡಲು ಮುಂದಾದರೆ. ಕೆ.ಎಸ್ ಈಶ್ವರಪ್ಪಾ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ಇಲ್ಲಿಯೇ ಬೀಡು ಬಿಟ್ಟು ಪ್ರಚಾರ ಕಾರ್ಯ ನಡೆಸಿದ್ದಾರೆ.

ಎರಡು ಪಕ್ಷಗಳು ಬಿರುಸಿನ ಪ್ರಚಾರ ಮಾಡುತ್ತಿದ್ದು ಇಂದು ಕೊನೆಯ ದಿನವಾಗಿದ್ದರಿಂದ ದಿನದ ಅಂತ್ಯದ ವರೆಗೂ ಪ್ರಚಾರ ನಡೆಸಲಿವೆ. ಇನ್ನು ಏಪ್ರಿಲ್​ 17ರಂದು ಬೆಳಗಾವಿ ಲೋಕಸಭಾ ಚುನಾವಣೆ ನಡೆಯಲಿದ್ದು, ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಈ ಬಾರಿ ಚುನಾವಣೆ ನಡೆಯಲಿದೆ.

 


Leave a Reply