BelagaviState

ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತರ ಬೃಹತ ಸಮಾವೇಶ


ಗೋಕಾಕ: ನಗರದಲ್ಲಿ ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತರ ಬೃಹತ ಸಮಾವೇಶವನ್ನು ಏರ್ಪಡಿಸಲಾಯಿತು.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಅಲ್ಪಸಂಖ್ಯಾತರ ಮೋರ್ಚಾ  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾವಲಸಾಬ ಚಪ್ಟಿ ಮಾತನಾಡಿ ಗೋಕಾಕ ಮತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನಮ್ಮ ಅಲ್ಪಸಂಖ್ಯಾತರಿಗಾಗಿ ರಮೇಶ ಜಾರಕಿಹೋಳಿ ಅವರು ಮಾಡಿದ್ದಾರೆ. ತಾಲೂಕಿನಲ್ಲಿ ಮಸೀದಿ, ದರ್ಗಾ, ಕಪೌಂಡ ಇತ್ಯಾದಿ ಕೆಲಸಗಳನ್ನು ಅವರು ಮಾಡಿಸಿದ್ದಾರೆ.  ತೆರನಾಗಿ ಅಲ್ಪಸಂಖ್ಯಾತರ ಸಮುದಾಯದಲ್ಲಿ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರು ಬೆನ್ನೆಲುಬಾಗಿ ನಿಂತಿದ್ದಾರೆ ಅವರಿಗೆ ನಾನು ಅಲ್ಪಸಂಖ್ಯಾತರ ಮೋರ್ಚಾ ವತಿಯಿಂದ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ ಎಂದರು.

ಸವದತ್ತಿ ಯಲ್ಲಮ್ಮ ಮತ ಕ್ಷೇತ್ರದಲ್ಲಿ ಕರ್ನಾಟಕ ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ಅಲ್ಪಸಂಖ್ಯಾತರ ಬಂಧುಗಳಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುನವಳ್ಳಿ ಶಾದಿಮಹಲ,ಮುನವಳ್ಳಿ ಉರ್ದು ಹೈಸ್ಕೂಲ್ ಅಪ್ರೊವಲ್ ಮಾಡಿಕೋಟ್ಟಿದ್ದು,ಯರಗಟ್ಟಿ ಶಾದಿಮಹಲ, ಕಬರಸ್ತಾನ ಕಪೌಂಡ ವ್ಯವಸ್ಥೆ, ಮಜೀದಗಳಲ್ಲಿ ಬೋರಿನ ಮೂಲಕ ನೀರಿನ ವ್ಯವಸ್ಥೆ ಹಾಗೂ ಅಲ್ಪಸಂಖ್ಯಾತ ರೈತರಿಗೆ ಬೋರವೆಲ್ ಹಾಕಿಸುವ ಇನ್ನು ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ನಮ್ಮ ಆನಂದ ಮಾಮನಿ ಮಾಡಿರುತ್ತಾರೆ.

ಕ್ಷೇತ್ರದ ಅಲ್ಪಸಂಖ್ಯಾತ ಬಂಧುಗಳಲ್ಲಿ ಕೈ ಮುಗಿದು ಕೇಳಿಕೊಳ್ಳುವುದೆನೆಂದರೆ ನಮ್ಮ ಸಮಾಜಕ್ಕೆ ಇಷ್ಟು ಅಭಿವೃದ್ಧಿ ಕೆಲಸಗಳನ್ನು ನಮ್ಮ ಕ್ಷೇತ್ರದಲ್ಲಿ ಬೇರೆ ಯಾರು ಮಾಡಿಲ್ಲಾ ಮಾಡಲು ಆಗುವುದು ಇಲ್ಲ ತಾವುಗಳೆಲ್ಲ ಸರಾಸರಿ ವಿಚಾರ ಮಾಡಿ ಆನಂದ ಮಾಮನಿ ಅವರ ಕೈ ಬಲಪಡಿಸುವಗೋಸ್ಕರ ಹಾಗೂ ಅವರ ಋಣ ತೀರಿಸುವಗೋಸ್ಕರ ಆನಂದ ಮಾಮನಿ ನೇತೃತ್ವದಲ್ಲಿ ಹಾಗೂ ರಮೇಶಣ್ಣ ಜಾರಕಿಹೋಳಿ ಅವರ ನೇತೃತ್ವದಲ್ಲಿ ಗೋಕಾಕ ಮತ್ತು ಸವದತ್ತಿ ಮತ ಕ್ಷೇತ್ರದ ನನ್ನ ಎಲ್ಲಾ ಮುಸಲ್ಮಾನ ಬಾಂಧವರಲ್ಲಿ ಬರುವ ದಿನಾಂಕ:17/04/2021 ರಂದು ಬಿಜೆಪಿಗೆ ಮತ ಹಾಕಿ ಇಬ್ಬರು ಸಾಹುಕಾರರ ಪ್ರೀತಿಗೆ ಪಾತ್ರರಾಗಿ ಎಂದು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೆನೆ ಎಂದು ಪ್ರಾಸ್ತಾವಿಕವಾಗಿ ದಾವಲಸಾಬ ಚಪ್ಟಿ ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಶಫೀಲ್ ಜಮಾದಾರ, ಉದ್ಘಾಟಕರಾಗೆ ಅಂಬಿರಾವ ಪಾಟೀಲ, ಮತ್ತು ಉಮೇಶ್ ಕತ್ತಿ, ಈರಣ್ಣಾ ಕಡಾಡಿ, ಮುಖ್ತಾರ ಪಠಾಣ, ಜಾವೇದ್ ಗೋಕಾಕ, ಶಕೀಲ ಧಾರವಾಡ, ಅಬ್ಬಾಸ್ಅಲಿ ದೇಸಾಯಿ, ಮಲ್ಲಿಕ ತಳವಾರ, ಮೊಹಸಿನ್ ಖೊಜಾ, ಭೀಮಶಿ ಭರಮಗೌಡಾ, ರಾಜೇಂದ್ರ ಗೌಡಪ್ಪಗೋಳ ಹಾಗೂ ಇತರರು ಉಪಸ್ಥಿತರಿದ್ದರು.


Leave a Reply