Ballary

ನಾಯಕರ ವರ್ತನೆಗೆ ಬೇಸತ್ತು ಕಾಂಗ್ರೆಸ್ ಗೆ ಗುಡ್ ಬೈ


ಬಳ್ಳಾರಿ: ಮಹಾನಗರ ಪಾಲಿಕೆ‌ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ನ್ನು ಕುತಂತ್ರ‌ ಬುದ್ದಿಯಿಂದ ಕೈ ತಪ್ಪಿಸಿದ ಕಾಂಗ್ರೆಸ್ ನಾಯಕರ ವರ್ತನೆಗೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವೆ ಎಂದು ಡಿ.ನಾರಾಯಣಪ್ಪ .ತಾಳುರು ರಸ್ತೆ,ಮಹಾನಂದಿಕೊಟ್ಟಂ ಅವರು ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ‌ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದರು. 22ನೇ ವಾರ್ಡ್ ನ‌ ಮತದಾರರ ಆರ್ಶಿವಾದದಿಂದ ಪತ್ನಿ ಲಕ್ಷ್ಮೀ‌ ಅವರು ಗೆಲುವು ಸಾಧಿಸಿದ್ದರು. ಮಿಸಲಾತಿ ಹಿನ್ನೆಲೆ 5ನೇ ವಾರ್ಡ್ ಗೆ ಟಿಕೇಟ್ ನೀಡಲಾಗುವುದು ಎಂದು ಪಕ್ಷದ ವರೀಷ್ಠರೇ ಭರವಸೆ ನೀಡಿದ್ದರು. ಅದರಂತೆ ನಾನು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದೆ, ಕೆಪಿಸಿಸಿ ವರೀಷ್ಠರು ಬಿಡುಗಡೆಗೊಳಿಸಿದ ಪಟ್ಟಿಯಲ್ಲೂ ನಮ್ಮ‌ ಹೆಸರು ಅಂತಿಮಗೊಳಿಸಲಾಗಿತ್ತು. ನಂತರ  ನಾಟಕೀಯ ಬೆಳವಣಿಗೆಯಿಂದ  ಟಿಕೇಟ್ ಕೈತಪ್ಪಿದೆ. ಇದು‌ ನನಗೆ ಬೆಸರವನ್ನುಂಟು ಮಾಡಿದೆ. ಪಕ್ಷದ ವರೀಷ್ಠರು ಟಿಕೇಟ್ ನೀಡೊಲ್ಲ‌ ಎಂದಿದ್ದರೇ ನಾನು ಆಕಾಂಕ್ಷಿಯಾಗುತ್ತಿರಲಿಲ್ಲ. ಕಳೆದ 20ವರ್ಷಗಳಿಂದ ಪಕ್ಷಕ್ಕಾಗಿ ದುಡಿದ‌ ನನಗೆ ಬೆಳವಣಿಗೆ ಸಾಕಷ್ಟು‌ ನೋವು‌ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಾರ್ಡ್ ನಲ್ಲಿ ಮತದಾರರ‌ ಬೆಂಬಲ, ಆರ್ಶಿವಾದ ಗಮನಿಸಿ ಕಾಂಗ್ರೆಸ್ ನಾಯಕರು ಉದ್ದೇಶ ಪೂರ್ವಕವಾಗಿ ನನ್ನ ಟಿಕೇಟ್ ಕೈತಪ್ಪಿಸಿದ್ದಾರೆ. ಕಾಂಗ್ರೆಸ್ ನ ಎಮ್ಮೆಲ್ಸಿ ಕೆ.ಸಿ.ಕೊಂಡಯ್ಯ ಹಾಗೂ ಎಮ್ಮೆಲ್ಸಿ ಅಲ್ಲಂ ವೀರಭದ್ರಪ್ಪ ಅವರು ಸೇರಿದಂತೆ ಇತರರು ಬಿಜೆಪಿ  ಗೆಲ್ಲಿಸಲು ಈ ರೀತಿ ಮಾಡಿದ್ದಾರೆ ಎಂದು ದೂರಿದರು . ಈ‌ ಬೆಳವಣಿಗೆ ಇಬ್ಬರೂ‌ ನಾಯಕರಿಗೂ ಶೋಭೆ ತರುವಂತಹದ್ದಲ್ಲ, ಈ ಕುರಿತು ಅಲ್ಲಂ ವೀರಭದ್ರಪ್ಪ ಅವರ ನಿವಾಸಕ್ಕೆ ತೆರಳಿ ಟಿಕೇಟ್ ಕುರಿತು‌ ಪ್ರಶ್ನಿಸಿದರೇ ನಿನಗೇ ಟಿಕೇಟ್ ಎಂದು ಹೇಳಿ ಭರವಸೆ ನೀಡಿದರು. ನಂತರ ಕೆ.ಸಿ.ಕೊಂಡಯ್ಯ ಹಾಗೂ ಅಲ್ಲಂ ವೀರಭದ್ರಪ್ಪ ಅವರು ಉದ್ದೇಶ ಪೂರ್ವಕವಾಗಿ ಟಿಕೇಟ್‌ ಕೈತಪ್ಪಿಸಿ ನನ್ನನ್ನು ಅವಮಾನಿಸಿದರು, ಪಕ್ಷದಲ್ಲೆ ಇರದ ವ್ಯಕ್ತಿ ಬಾಲರಾಜು ಎನ್ನುವವರಿಗೆ ಕಾಂಗ್ರೆಸ್ ನಾಯಕರು ಟಿಕೇಟ್ ನೀಡಿ ನಮ್ಮನ್ನು ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯಕ್ಕೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗೋಲ್ಲ, ಕೆಲ ದಿನಗಳಕಾಲ ರಾಜಕೀಯದಿಂದ ದೂರ ಉಳಿಯುವೆ. ಏ.16ರಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀಕ್ ಅವರಿಗೆ‌ ರಾಜೀನಾಮೆ ಸಲ್ಲಿಸುವೆ ಎಂದರು.
ಮಹಿಳಾ‌ ಮುಖಂಡರಾದ ಜ್ಯೋತಿ ಅವರು ಮಾತನಾಡಿ ಎಮ್ಮೆಲ್ಸಿ ಗಳಾದ ಕೆ.ಸಿ.ಕೊಂಡಯ್ಯ ಹಾಗೂ ಅಲ್ಲಂ ವೀರಭದ್ರಪ್ಪ ಅವರು ಪಕ್ಷದಲ್ಲಿ ಇರೋವರೆಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಉದ್ಧಾರವಾಗೋಲ್ಲ, ಉದ್ದೇಶ ಪೂರ್ವಕವಾಗಿ ತಂದೆಯವರ ಟಿಕೇಟ್ ತಪ್ಪಿಸಿ ಕುತ್ತಿಗೆ‌ ಕೊಯ್ದಿದ್ದಾರೆ, ಇದು ಮರೆಯಲಾಗದ ಕ್ಷಣ, ಕೆಪಿಸಿಸಿ‌ ಅವರು ಅಂತಿಮಗೊಳಿಸಿದ ಪಟ್ಟಿಯನ್ನೇ ಬದಲಾಯಿಸಿ ಟಿಕೇಟ್ ನ್ನು‌ ಬೇರೆಯವರಿಗೆ  ನೀಡಿದರೆ ಪಕ್ಷದಲ್ಲಿರುವ ನಮ್ಮಂತಹ ಪ್ರಾಮಾಣಿಕರ ರಾಜಕೀಯ ಭವಿಷ್ಯ ಮುಂದೆನು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಣಿ, ಇ.ನಾರಾಯಣಸ್ವಾಮೀ, ಡಿ.ಲಕ್ಷ್ಮೀ, ರಾಧಿಕಾ, ವೆಂಕಟೇಶ, ನರಸಯ್ಯ ಇತರರಿದ್ದರು.


Leave a Reply