BelagaviState

ಮುಂದುವರೆದ ಸಾರಿಗೆ ನೌಕರರ ಮುಷ್ಕರ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ  


ಬೆಳಗಾವಿ:  ರಾಜ್ಯಾದ್ಯಂತ  ಏಪ್ರಿಲ್ 7 ರಂದು ಸಾರಿಗೆ ನೌಕರರು ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಅನಿರ್ಧಿಷ್ಠಾವದಿ ಮುಷ್ಕರ ಮಾಡುತ್ತಿದ್ದು. ಇವತ್ತು ಬೆಳಗಾವಿಯಲ್ಲಿ ಸಾರಿಗೆ ನೌಕರರು ಮೇಣದ ಬತ್ತಿ ಹಚ್ಚುವ ಮೂಲಕ ಪ್ರತಿಭಟಿಸಿದರು.

ಮೆನದ ಬತ್ತಿ ಹಚ್ಚೀ ಸಾರಿಗೆ ನೌಕರರ ಜೀವನ್ ಕತ್ತಲೆ ಯಿಂದ ಬೆಳಕಿನ ಕಡೆ ಸಾಗಲಿ ಎನ್ನುವ ಸಂದೇಶವನ್ನು ಸಾರುತ್ತಾ ಈ ವಿಭಿನ್ನ ಚಳುವಳಿ ಇಡಿ ರಾಜ್ಯಾದ್ಯಂತ ಮಾಡಲಾಗುತ್ತಿದೆ. ಇದರಿಂದ ಸಾರಿಗೆ ಸಚಿವರು ಸಹ ಪ್ರತಿಭಟನೆಗೆ ಸ್ಪಂದಿಸದೆ ಇರುವ ಕಾರಣ ರಾಜ್ಯಾದ್ಯಂತ ಸಾರಿಗೆ ನೌಕರರು ಇನ್ನಷ್ಟು ಹೆಚ್ಚಿನ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಆದರೆ ಸಾರಿಗೆ ನೌಕರರ ಕಷ್ಟಗಳನ್ನು ಕೇಳುವವರು ಯಾರು ಇಲ್ಲದಂತೆ ಆಗಿದೆ ಎಂದು ನೋವನ್ನು ಹೊರಹಾಕಿದರು ಇದರಿಂದ ಸರಕಾರ ಆದಷ್ಟು ಬೇಗನೆ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬೆಳಗಾವಿಯಲ್ಲಿ ಸಾರಿಗೆ ಸಿಬ್ಬಂದಿಗಳು ತಮ್ಮ ಕುಟುಂಬದ ಸಮೇತ ಬೆಳಗಾವಿಯಲ್ಲಿ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಹೇಶ್ ಶಿಗೀಹಳ್ಳಿ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರು, ರವಿ ವನ್ನೂರ  ಟಿ.ಎಚ್.ಸನದಿ,ಬಸವರಾಜ ಬಿರಾದಾರ,ಬಿ.ಎಚ್.ಚಿಕ್ಕೊಡಿ ಸೇರಿದಂತೆ ಇನ್ನು ಸಾರಿಗೆ ನೌಕರರು ಕುಟುಂಬಗಳು ಭಾಗಿ ಆಗಿದ್ದರು.


Leave a Reply