BengaluruState

ಭಯದ ವಾತಾವರಣ ನಿರ್ಮಿಸುತ್ತಿದೆ ಕೋವಿಡ್ ಬುಲೆಟಿನ್


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರುದ್ರನರ್ತನ ಮಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ನಿನ್ನೆ ಬಿಡುಗಡೆಯಾದ ಬುಲೆಟಿನ್ ಭಯದ ವಾತಾವರಣ ಸೃಷ್ಟಿಸುವಂತಿದೆ.

ನಿನ್ನೆ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 10,497 ಸೇರಿದಂತೆ ರಾಜ್ಯಾಧ್ಯಂತ 14,738 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದರಿಂದ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿತ್ತು. ಇವರಲ್ಲಿ ಇಂದು 3,591 ಜನರು ಸೇರಿದಂತೆ ಇದುವರೆದೆ 9,99,958 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ರಾಜ್ಯದಲ್ಲಿ 96,561 ಸಕ್ರೀಯ ಸೋಂಕಿತರು ಇರುವುದಾಗಿ ಆರೋಗ್ಯ ಇಲಾಖೆಯು ಕೊರೋನಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿತ್ತು.

ಇನ್ನೂ ಬಳ್ಳಾರಿಯಲ್ಲಿ ಆರು ಸೋಂಕಿತರು, ಬೆಳಗಾವಿಯಲ್ಲಿ ಒಬ್ಬರು, ಬೆಂಗಳೂರು ನಗರದಲ್ಲಿ 30 ಸೋಂಕಿತರು, ಬೀದರ್ ನಲ್ಲಿ ಇಬ್ಬರು, ಧಾರವಾಡದಲ್ಲಿ ಮೂವರು, ಹಾಸನದಲ್ಲಿ ನಾಲ್ವರು, ಕಲಬುರ್ಗಿ, ಕೋಲಾರದಲ್ಲಿ ಓರ್ವ, ಮೈಸೂರಿನಲ್ಲಿ ಐವರು, ರಾಮನಗರ, ಶಿವಮೊಗ್ಗ ತಲಾ ಒಬ್ಬರು, ತುಮಕೂರು, ಉತ್ತರ ಕನ್ನಡದಲ್ಲಿ ತಲಾ ಇಬ್ಬರು ಮತ್ತು ವಿಜಯಪುರದಲ್ಲಿ ಒಬ್ಬರು ಸೇರಿದಂತೆ 66 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 13,112ಕ್ಕೆ ಏರಿಕೆಯಾಗಿತ್ತು.

 


Leave a Reply