BengaluruState

ಸಿಎಂ ಯಡಿಯೂರಪ್ಪ ಅವರಿಗೆ ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವ್ರಿಗೆ 2ನೇ ಬಾರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕಳೆದ ಎರಡು ದಿಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಔರು 2 ದಿನಗಳ ಹಿಂದೆಯಷ್ಟೇ ಕೊರೊನಾ ಪರೀಕ್ಷೆಗೆ ಒಳಗಾಗಿದ್ರು. ಆದ್ರೆ, ಪರೀಕ್ಷೆ ವರದಿ ನೆಗೆಟಿವ್‌ ಬಂದಿತ್ತು. ಆದ್ರೆ, ಸುಸ್ತು, ಬಳಲಿಕೆ ಇರುವ ಕಾರಣ ಇಂದು ಅವ್ರನ್ನ ಎಂ.ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಿಸಿಲಾಗಿತ್ತು. ಕೊರೊನಾ ಲಕ್ಷಣಗಳಿರುವ ಕಾರಣ ಇಂದು ಮತ್ತೊಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. 2ನೇ ಬಾರಿಯ ಟೆಸ್ಟ್‌ʼನಲ್ಲಿ ಸಿಎಂ ಬಿಎಸ್‌ವೈಗೆ ಕೊರೊನಾ ಸೋಂಕು ಧೃಢಪಟ್ಟಿದೆ.

ಕೊರೊನಾ ಸೋಂಕು ತಗುಲಿರುವ ಸಿಎಂ ಅರನ್ನ ಸಧ್ಯ ಎಂ.ಎಸ್‌ ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗ್ತಿದೆ. ಇದಕ್ಕೂ ಮುನ್ನವೇ ಕೊರೊನಾ ಸೋಂಕು ತಗುಲಿದ್ದು, ಈಗ 2ನೇ ಬಾರಿಗೆ ಸೋಂಕಿಗೆ ಒಳಗಾಗಿದ್ದಾರೆ.  ಸಿಎಂ ಕೊರೊನಾ ಲಸಿಕೆಯ ಮೊದಲು ಡೋಸ್‌ ಪಡೆದಿದ್ದು, 2ನೇ ಡೋಸ್‌ ಪಡೆಯುವುದು ಬಾಕಿ ಇತ್ತು.

 


Leave a Reply