BelagaviState

ನಾಳೆ ಚುನಾವಣೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ


ಬೆಳಗಾವಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಚುನಾವಣಾ ಸಿದ್ದತೆಯನ್ನು ಮಾಡಲಾಗಿದ್ದು ಇಂದು ಸಿಬ್ಬಂದಿಗಳಿಗೆ ಮತಪಟ್ಟಿಗಳ ಹಂಚಿಕೆ ಮಾಡಲಾಯಿತು.

300 ಸಾರಿಗೆ ಬಸ್ ಮತ್ತು ಖಾಸಗಿ ಬಸ್ ಹಾಗೂ ಟೆಂಪೋ ಟ್ರಾವೆಲ್, ಟ್ರ್ಯಾಕ್ಸನಲ್ಲಿ ಪೊಲೀಸ್ ಭದ್ರತೆಯೊಂದಿಗೆ ಚುನಾವಣಾ ಸಿಬ್ಬಂದಿ ತೆರಳಿದ್ದಾರೆ. ಬೆಳಗಾವಿ ಲೋಕಸಭೆಯ 2566 ಮತಗಟ್ಟೆ ಕೇಂದ್ರ ಕ್ಕೆ ಇಂದು ಸಂಜೆ ವೇಳೆಗೆ ಸಿಬ್ಬಂದಿ ತಲುಪಲಿದ್ದಾರೆ.

ಈಗಾಗಲೆ ಜಿಲ್ಲಾಡಳಿತ ಬೆಳಗಾವಿ ಲೋಕಸಭಾ ಉಪಚುನಾವಣೆ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದೆ.‌ ನಾಳೆ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ವರೆಗೆ ಮತದಾನ ಪ್ರಕ್ರಿಯೆ‌ ಪ್ರಾರಂಬನ ಆಗಲಿದ್ದು, ಕ್ಷೇತ್ರದಲ್ಲಿ 2566 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.ಮತದಾನ ಪ್ರಕ್ರಿಯೆಗೆ 11,290 ಜನ ಸಿಬ್ಬಂದಿ ಬಳಕೆ ಮಾಡಲಾಗಿದೆ.‌

12290 ವಿಕಲಚೇತನ ಹಾಗೂ 80 ವರ್ಷಕ್ಕಿಂತ ಮೇಲ್ಪಟವರಿಗೆ 41,535 ಜನ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 7925 ಜನ ಸೇವಾ ಮತದಾರರಿಗೆ ಕೂಡಾ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ.‌

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿ ತಾಲೂಕಿನ ಮತಗಟ್ಟೆಗಳಿಗೆ  ಮತದಾನದ  ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಾಯಿತು.


Leave a Reply