BelagaviState

ಶಾಂತಿಯುತ ಮತದಾನ ಮಾಡುವಂತೆ ಜಿಲ್ಲಾಧಿಕಾರಿಗಳ ಕರೆ


ಬೆಳಗಾವಿ: ಕೋವಿಡ್ ಆತಂಕದಲ್ಲಿಯೇ ಚುನಾವಣೆ ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ, ಮತದಾರರೂ ಕೂಡ ತಂಕದಲ್ಲಿದ್ದು ನಿರ್ಭೀತಿಯಿಂದ ಮತದಾನ ಮಾಡುವಂತೆ ಮತದಾರರಲ್ಲಿ ಧೈರ್ಯ ತುಂಬಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದ್ದಾರೆ.

ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕೊರೊನಾ ಆತಂಕವಿದ್ದರೂ ಸುಕ್ಷಿತ ಮತದಾನಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣಾ ಆಯೋಗ ಮತ್ತು ಆರೋಗ್ಯ ಇಲಾಖೆ ಸೂಚನೆಯಂತೆ ಎಲ್ಲ ಮತಗಟ್ಟೆಗಳಲ್ಲಿ ನಿಯಮಗಳ ಪಾಲನೆಗೆ ಸೂಚಿಸಲಾಗಿದೆ. ಸ್ಯಾನಿಟೈಸರ್, ಮಾಸ್ಕ್ ಬಳಕೆ ಮತ್ತು ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯವೂ ನಡೆದಿದೆ ಎಂದರು.

ಎಲ್ಲ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಮತದಾರರು ಮತ ಚಲಾಯಿಸುವ ಮೊದಲು ಮತ್ತು ಚಲಾವಣೆಯ ಬಳಿಕವೂ ಸ್ಯಾನಿಟೈಸ್ ಮಾಡಲಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಇದ್ದವರಿಗೆ ರ್ಯಾಪಿಡ್ ಟೆಸ್ಟ್ ಮಾಡಿಸುತ್ತೇವೆ ಒಂದು ವೇಳೆ ಸೋಂಕು ದೃಡಪಟ್ಟಲ್ಲಿ ಕೊನೆಯ ದು ಘಂಟೆಯ ಅವದಿಯಲ್ಲಿ ಅವರಿಗೆ ಪಿಪಿಟಿ ಕಿಟ್ ಹಾಕಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಪಾರದರ್ಶಕ ಮತಪ್ರಕ್ರಿಯೇ ನಡೆಸಲು ಶೇ.50% ಪ್ರತಿಶತದಷ್ಟು ಮತಗಟ್ಟೆಗಳಲ್ಲಿ ಕ್ಯಮರಾಅಳವಡಿಕೆ ಮಾಡಲಾಗಿದ್ದು ಇನ್ನುಳಿದ ಮತಗಟ್ಟೆಗಳಲ್ಲಿ ಕೇಂದ್ರಸರಕಾರಿ ಅಧಿಕಾರಿಗಳು ವೀಕ್ಷಣೆ ಮಾಡಿದರೆ ಇನ್ನು ಹಲವೆಡೆ ವಿಡಿಯೋ ಗ್ರಾಪಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದ ಪ್ರತಿಶತ 100% ರಷ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

.5ಕ್ಕಿಂತ ಹೆಚ್ಚು ಮತಗಟ್ಟೆಗಳು ಒಂದೆಡೆ ಇದ್ದಲ್ಲಿ ಸಿಆರ್‍ಪಿಎಫ್ ಭದ್ರತೆ ಒದಗಿಸಲಾಗಿದೆ. ಚುನಾವಣೆ ಕರ್ತವ್ಯ ನಿರತರಿಗೆ ಅನುಕೂಲ ಕಲ್ಪಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ. 30 ಖಾಸಗಿ ಬಸ್‍ಗಳನ್ನು ಪಡೆಯಲಾಗಿದೆ. ಮತದಾನ ಶಾಂತಿಯುತವಾಗಿ, ನಡೆಯುವಂತೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


Leave a Reply