BelagaviBengaluruState

ವಿಧಾನ ಸಭಾ ಉಪಸಭಾಧ್ಯಕ್ಷ ಆನಂದ ಮಾಮನಿಗೆ ಕೊರೊನಾ ಸೋಂಕು ದೃಢ


ಬೆಂಗಳೂರು: ವಿಧಾನಸಭಾ ಉಪಾಧಕ್ಷ ಆನಂದ್ ಮಾಮನಿಯವರಿಗೂ ಕೊರೊನಾ ಸೋಂಕು ತಗುಲಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ.

ಇಂದು ಬೆಳಿಗ್ಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ವೈದ್ಯರು 17 ದಿನ ಹೋಮ್ ಐಸೋಲೇಷನ್ ನಲ್ಲಿರಲು ಸೂಚಿಸಿದ್ದಾರೆ. ನನ್ನ ಸಂಪರ್ಕಕ್ಕೆ ಬಂದವರು ತಮ್ಮ ಆರೋಗ್ಯದ ಕಡೆ ನಿಗಾ ವಹಿಸಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು ಏಪ್ರಿಲ್ 17ರಂದು ನಾಳೆ ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ಸವದತ್ತಿ ತಾಲೂಕಿನ ಎಲ್ಲ ಜನತೆ 100% ಮತದಾನ ಮಾಡುವಂತೆ ವಿನಂತಿಸಿದ್ದಾರೆ.

“ಇಂದು ಬೆಳಗ್ಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು Antizen Test ನಲ್ಲಿ, ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದ್ದು, ವೈದ್ಯರು 17 ದಿನ ಹೋಮ ಐಸೋಲೇಷನಲ್ಲಿರಲು  ತಿಳಿಸಿರುತ್ತಾರೆ.  ನನ್ನ ಸಂಪರ್ಕಕ್ಕೆ ಬಂದವರು ತಮ್ಮ ಆರೋಗ್ಯದ ಕಡೆಗೆ ನಿಗಾವಹಿಸಿ ತಮ್ಮ ಸಮಿಪದ ಆರೋಗ್ಯ ಕೇಂದ್ರಕ್ಕೆ  ಬೇಟಿ  ನೀಡಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕಾಗಿ ವಿನಂತಿಸುತ್ತೇನೆ.  ಆದಷ್ಟು ಬೇಗ ಗುಣಮುಖನಾಗಿ ಎಂದಿನಂತೆ ತಮ್ಮ ಸೇವೆಯಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ”

-ಆನಂದ ಮಾಮನಿ


Leave a Reply