Belagavi

ಲೋಕಸಭಾ ಉಪಚುನಾವಣೆ-ಮತಗಟ್ಟೆ ಕಡೆಗೆ ತೆರಳಿದ ಚುನಾವಣಾ ಸಿಬ್ಬಂದಿ ಸುಗಮ ಚುನಾವಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್


ಬೆಳಗಾವಿ, ಏ.೧೬ :ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ೨,೫೬೬ ಮತಗಟ್ಟೆಗಳಲ್ಲಿ ಏ.೧೭ರಂದು ಉಪ ಚುನಾವಣೆ ಅಂಗವಾಗಿ ಮತದಾನ ನಡೆಯಲಿದೆ. ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
೦೨-ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ (ಏ.೧೭) ಬೆಳಿಗ್ಗೆ ೭ ಗಂಟೆಯಿAದ ಸಾಯಂಕಾಲ ೭ ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ಭಾನುವಾರ (ಮೇ.೨) ಮತದಾನದ ಎಣಿಕೆ ನಡೆಯಲಿದೆ. ಲೋಕಸಭಾ ಉಪ ಚುನಾವಣೆ ಕಣದಲ್ಲಿ ಒಟ್ಟು ೧೦ ಅಭ್ಯರ್ಥಿಗಳಿದ್ದಾರೆ.
ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ:
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಚುನಾವಣಾ ಸಿಬ್ಬಂದಿಗಳು ಆಯಾ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯ ಮಸ್ಟರಿಂಗ್ ಕೇಂದ್ರಗಳಿAದ ಇ.ವಿ.ಎಮ್., ವಿವಿಪ್ಯಾಟ್ ಹಾಗೂ ಇತರ ಚುನಾವಣಾ ಸಾಮಗ್ರಿಗಳೊಂದಿಗೆ ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ಶುಕ್ರವಾರ ಮಧ್ಯಾಹ್ನ ಸಾರಿಗೆ ಸಂಸ್ಥೆಯ ಬಸ್‌ಗಳ ಮೂಲಕ ತೆರಳಿದರು.
ಒಟ್ಟು ಮತದಾರರು ೧೮,೧೩,೫೬೭ :
ವಿವಿಧ ಕ್ಷೇತ್ರಗಳನ್ನೊಳಗೊಂಡAತೆ ಒಟ್ಟು ೧೮,೧೩,೫೬೭ ಮತದಾರರಿದ್ದು, ಅದರಲ್ಲಿ ೨೫,೩೨೭ ಯುವ ಮತದಾರರಿದ್ದಾರೆ. ೮,೦೪೭ ಸೇವಾ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಒಟ್ಟು ೧೨,೪೪೦ ವಿಶೇಷಚೇತನ ಮತದಾರರಿದ್ದಾರೆ.
ವಿಧಾನ ಸಭಾ ಮತಕ್ಷೇತçವಾದ ೦೮-ಅರಭಾವಿಯಲ್ಲಿ ೧,೨೦,೫೦೩ ಪುರುಷ ಮತದಾರರಿದ್ದು, ೧,೧೯,೫೦೦ ಮಹಿಳಾ ಮತದಾರರಿದ್ದಾರೆ. ಇತರ ಮತದಾರರ ಸಂಖ್ಯೆ ೯ ಆಗಿದ್ದು, ಈ ಮತಕ್ಷೇತçದಲ್ಲಿ ಒಟ್ಟು ೨,೪೦,೦೧೨ ಜನ ಮತದಾರರಿದ್ದಾರೆ.
೦೯-ಗೋಕಾಕ ವಿಧಾನ ಸಭಾ ಮತಕ್ಷೇತçದಲ್ಲಿ ೧,೨೩,೫೩೮ ಪುರುಷ ಮತದಾರರಿದ್ದರೆ, ೧,೨೬,೪೪೬ ಮಹಿಳಾ ಮತದಾರರಿದ್ದಾರೆ. ಇತರ ಮತದಾರರು ೧೪ ಹಾಗೂ ಒಟ್ಟು ೨,೪೯,೯೯೮ ಮತದಾರರಿದ್ದಾರೆ.
೧೧-ಬೆಳಗಾವಿ ಉತ್ತರ ವಿಧಾನ ಸಭಾ ಮತಕ್ಷೇತçದಲ್ಲಿ ೧,೨೦,೫೦೨ ಪುರುಷ ಮತದಾರರು ಹಾಗೂ ೧,೨೨,೧೦೫ ಮಹಿಳಾ ಮತದಾರರಿದ್ದಾರೆ. ಇತರ ಮತದಾರರ ಸಂಖ್ಯೆ ೧೧ ಆಗಿದ್ದು, ಒಟ್ಟು ೨,೪೨,೬೧೮ ಮತದಾರರು ಈ ಕ್ಷೇತçದಿಂದ ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಅಂತೆಯೇ, ೧೨-ಬೆಳಗಾವಿ ದಕ್ಷಿಣ ಮತಕ್ಷೇತçದಲ್ಲಿ ೧,೨೨,೭೦೫ ಪುರುಷ ಮತದಾರರು ಹಾಗೂ ೧,೨೦,೩೧೬ ಮಹಿಳಾ ಮತದಾರರಿದ್ದಾರೆ. ೬ ಜನ ಇತರ ಮತದಾರರಿದ್ದಾರೆ. ೨,೪೩,೦೨೭ ಜನ ಒಟ್ಟು ಮತದಾರರಿದ್ದಾರೆ.
೧೩-ಬೆಳಗಾವಿ ಗಾçಮೀಣ ಮತಕ್ಷೇತçದಲ್ಲಿ ೧,೨೪,೧೫೮ ಪುರುಷ ಮತದಾರರು ಹಾಗೂ ೧,೧೯,೯೨೨ ಮಹಿಳಾ ಮತದಾರರಿದ್ದಾರೆ. ೪ ಇತರ ಮತದಾರರಿದ್ದು, ಒಟ್ಟು ೨,೪೪,೦೮೪ ಮತದಾರರು ಈ ಮತಕ್ಷೇತçದಲ್ಲಿದ್ದಾರೆ.
ಇನ್ನು, ೧೬-ಬೈಲಹೊಂಗಲ ಮತಕ್ಷೇತçವು ೯೫,೪೭೨ ಪುರುಷ ಮತದಾರರನ್ನು ಮತ್ತು ೯೪,೩೮೩ ಮಹಿಳಾ ಮತದಾರರನ್ನು ಹೊಂದಿದೆ. ಈ ಮತಕ್ಷೇತçವು ೩ ಇತರ ಮತದಾರರನ್ನು ಹೊಂದಿದ್ದು, ಒಟ್ಟು ೧,೮೯,೮೫೮ ಮತದಾರರಿದ್ದಾರೆ.
೧೭-ಸವದತ್ತಿ ಯಲ್ಲಮ್ಮ ವಿಧಾನ ಸಭಾ ಮತಕ್ಷೇತçವು ೯೯,೧೪೫ ಪುರುಷ ಹಾಗೂ ೯೮,೨೩೯ ಮಹಿಳಾ ಮತದಾರರನ್ನು ಹೊಂದಿದೆ. ಈ ಕ್ಷೇತçವು ಯಾವುದೇ ಇತರ ಮತದಾರರನ್ನು ಹೊಂದಿರುವುದಿಲ್ಲ. ಒಟ್ಟು ೧,೯೭,೩೮೪ ಮತದಾರರು ಈ ಕ್ಷೇತçದಲ್ಲಿದ್ದಾರೆ.
ಉಳಿದಂತೆ, ೧೮-ರಾಮದುರ್ಗ ಮತಕ್ಷೇತçದಲ್ಲಿ ೧,೦೫,೦೧೦ ಪುರುಷ ಮತದಾರರು ಮತ್ತು ೧,೦೧,೫೬೫ ಮಹಿಳಾ ಮತದಾರರಿದ್ದಾರೆ. ಇತರ ಮತದಾರರ ಸಂಖ್ಯೆ ೧೧ ಅಗಿದ್ದು, ಒಟ್ಟು ಮತದಾರರ ಸಂಖ್ಯೆ ೨,೦೬,೫೮೬ ಆಗಿದೆ.
ಹೀಗೆ ಒಟ್ಟು ೮ ಬೆಳಗಾವಿ ವಿಧಾನ ಸಭಾ ಮತಕ್ಷೇತçಗಳಲ್ಲಿ, ಒಟ್ಟು ೯,೧೧,೦೩೩ ಪುರುಷ ಮತದಾರರು ಹಾಗೂ ಒಟ್ಟು ೯,೦೨,೪೭೬ ಮಹಿಳಾ ಮತದಾರರಿದ್ದಾರೆ. ಒಟ್ಟು ೫೮ ಇತರ ಮತದಾರರನ್ನು ಒಳಗೊಂಡAತೆ, ೧೮,೧೩,೫೬೭ ಒಟ್ಟು ಮತದಾರರು ವಿವಿಧ ವಿಧಾನ ಸಭಾ ಮತಕ್ಷೇತçಗಳಿಂದ ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
೮,೦೪೭ ಒಟ್ಟು ಸೇವಾ ಮತದಾರರ ಸಂಖ್ಯೆ :
ಇನ್ನು ಸೇವಾ ಮತದಾರರ ವಿವರಗಳನ್ನು ಗಮನಿಸುವುದಾದರೆ, ಮೊದಲನೆಯದಾಗಿ ೦೮-ಅರಭಾವಿ ವಿಧಾನ ಸಭಾ ಮತಕ್ಷೇತçವು ೯೩೩ ಪುರುಷ ಹಾಗೂ ೨೧ ಮಹಿಳಾ ಮತದಾರರನ್ನು ಹೊಂದಿದ್ದು, ಒಟ್ಟು ೯೫೪ ಸೇವಾ ಮತದಾರರನ್ನು ಹೊಂದಿದೆ.
ಅದೇ ರೀತಿಯಾಗಿ, ೦೯-ಗೋಕಾಕ ಮತಕ್ಷೇತçವು ೧,೭೬೯ ಪುರುಷ ಸೇವಾ ಮತದಾರರನ್ನು, ೨೭ ಮಹಿಳಾ ಮತದಾರರನ್ನು ಹೊಂದಿದೆ. ಒಟ್ಟು ೧,೭೯೬ ಸೇವಾ ಮತದಾರರು ಈ ಕ್ಷೇತçದಲ್ಲಿದ್ದಾರೆ.
೧೧-ಬೆಳಗಾವಿ ಉತ್ತರ ಮತಕ್ಷೇತçದಲ್ಲಿ ೩೧೨ ಪುರುಷ ಮತ್ತು ೨೩ ಮಹಿಳಾ ಸೇವಾ ಮತದಾರರಿದ್ದಾರೆ. ಈ ಕ್ಷೇತçವು ಒಟ್ಟು ೩೩೫ ಸೇವಾ ಮತದಾರರನ್ನು ಹೊಂದಿದೆ.
ಮತ್ತೊAದು ಮತಕ್ಷೇತçವಾದ ೧೨-ಬೆಳಗಾವಿ ದಕ್ಷಿಣ ಭಾಗದಲ್ಲಿ ೫೪೨ ಪುರುಷ ಸೇವಾ ಮತದಾರರು ಹಾಗೂ ೩೭ ಮಹಿಳಾ ಸೇವಾ ಮತದಾರರು ಸೇರಿದಂತೆ ಒಟ್ಟು ೫೭೯ ಸೇವಾ ಮತದಾರರಿದ್ದಾರೆ.
೧೩-ಬೆಳಗಾವಿ ಗಾçಮೀಣ ಭಾಗದಲ್ಲಿ ೨,೧೯೮ ಪುರುಷ ಮತ್ತು ೧೦೨ ಮಹಿಳಾ ಸೇವಾ ಮತದಾರರಿದ್ದು, ೨,೩೦೦ ಒಟ್ಟು ಸೇವಾ ಮತದಾರರಿದ್ದಾರೆ.
೧೬-ಬೈಲಹೊಂಗಲ ಮತಕ್ಷೇತçವು ೯೫೨ ಪುರುಷ ಮತ್ತು ೧೪ ಮಹಿಳಾ ಸೇವಾ ಮತದಾರರನ್ನು ಹೊಂದಿದ್ದು, ೯೬೬ ಒಟ್ಟು ಸೇವಾ ಮತದಾರರನ್ನು ಒಳಗೊಂಡಿದೆ.
೧೭-ಸವದತ್ತಿ ಯಲ್ಲಮ್ಮ ಮತಕ್ಷೇತçದಲ್ಲಿ ೫೪೮ ಪುರುಷ ಸೇವಾ ಮತದಾರರು ಹಾಗೂ ೧೧ ಮಹಿಳಾ ಸೇವಾ ಮತದಾರರು ಸೇರಿದಂತೆ ಒಟ್ಟು ೫೫೯ ಸೇವಾ ಮತದಾರರು ಈ ಮತ ಕ್ಷೇತçದಲ್ಲಿದ್ದಾರೆ.
ಉಳಿದಂತೆ, ೧೮-ರಾಮದುರ್ಗ ಮತಕ್ಷೇತçದಲ್ಲಿ ೫೪೬ ಪುರುಷ ಹಾಗೂ ೧೨ ಮಹಿಳಾ ಸೇವಾ ಮತದಾರರಿದ್ದು, ೫೫೮ ಒಟ್ಟು ಸೇವಾ ಮತದಾರರಿದ್ದಾರೆ.
ಹೀಗೆ ಒಟ್ಟು ೮ ವಿಧಾನ ಸಭಾ ಮತಕ್ಷೇತçಗಳಲ್ಲಿ ಒಟ್ಟು ಪುರುಷ ಸೇವಾ ಮತದಾರರ ಸಂಖ್ಯೆ ೭,೮೦೦ ಹಾಗೂ ಮಹಿಳಾ ಸೇವಾ ಮತದಾರರ ಸಂಖ್ಯೆ ೨೪೭ ಆಗಿದ್ದು, ಒಟ್ಟು ಸೇವಾ ಮತದಾರರ ಸಂಖ್ಯೆ ೮,೦೪೭ ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
೨೫,೩೨೭ ಒಟ್ಟು ಯುವ ಮತದಾರರ ಸಂಖ್ಯೆ :
ಇನ್ನು ಯುವ ಮತದಾರರ ವಿವರಗಳನ್ನು ಗಮನಿಸುವುದಾದರೆ, ಮೊದಲನೆಯದಾಗಿ ೦೮-ಅರಭಾವಿ ವಿಧಾನ ಸಭಾ ಮತಕ್ಷೇತçವು ೨,೨೮೮ ಪುರುಷ ಹಾಗೂ ೧,೨೮೭ ಮಹಿಳಾ ಮತದಾರರನ್ನು ಹೊಂದಿದ್ದು, ಒಟ್ಟು ೩,೫೭೫ ಯುವ ಮತದಾರರನ್ನು ಹೊಂದಿದೆ.
ಅದೇ ರೀತಿಯಾಗಿ, ೦೯-ಗೋಕಾಕ ಮತಕ್ಷೇತçವು ೨,೩೧೭ ಪುರುಷ ಯುವ ಮತದಾರರನ್ನು, ೧,೫೧೮ ಮಹಿಳಾ ಮತದಾರರನ್ನು ಹೊಂದಿದೆ. ಒಟ್ಟು ೩,೮೩೬ ಯುವ ಮತದಾರರು ಈ ಕ್ಷೇತçದಲ್ಲಿದ್ದಾರೆ.
೧೧-ಬೆಳಗಾವಿ ಉತ್ತರ ಮತಕ್ಷೇತçದಲ್ಲಿ ೧,೧೭೩ ಪುರುಷ ಮತ್ತು ೧,೨೦೪ ಮಹಿಳಾ ಯುವ ಮತದಾರರಿದ್ದಾರೆ. ಈ ಕ್ಷೇತçವು ಒಟ್ಟು ೨,೩೭೭ ಯುವ ಮತದಾರರನ್ನು ಹೊಂದಿದೆ.
ಮತ್ತೊAದು ಮತಕ್ಷೇತçವಾದ ೧೨-ಬೆಳಗಾವಿ ದಕ್ಷಿಣ ಭಾಗದಲ್ಲಿ ೧,೦೨೪ ಪುರುಷ ಯುವ ಮತದಾರರು ಹಾಗೂ ೭೮೨ ಮಹಿಳಾ ಯುವ ಮತದಾರರು ಸೇರಿದಂತೆ ಒಟ್ಟು ೧,೮೦೬ ಯುವ ಮತದಾರರಿದ್ದಾರೆ.
೧೩-ಬೆಳಗಾವಿ ಗಾçಮೀಣ ಭಾಗದಲ್ಲಿ ೧,೮೮೯ ಪುರುಷ ಮತ್ತು ೧,೧೫೫ ಮಹಿಳಾ ಯುವ ಮತದಾರರಿದ್ದು, ೩,೦೪೫ ಒಟ್ಟು ಯುವ ಮತದಾರರಿದ್ದಾರೆ.
೧೬-ಬೈಲಹೊಂಗಲ ಮತಕ್ಷೇತçವು ೧,೮೯೨ ಪುರುಷ ಮತ್ತು ೧,೨೧೯ ಮಹಿಳಾ ಯುವ ಮತದಾರರನ್ನು ಹೊಂದಿದ್ದು, ೩,೧೧೧ ಒಟ್ಟು ಯುವ ಮತದಾರರನ್ನು ಒಳಗೊಂಡಿದೆ.
೧೭-ಸವದತ್ತಿ ಯಲ್ಲಮ್ಮ ಮತಕ್ಷೇತçದಲ್ಲಿ ೨,೩೦೧ ಪುರುಷ ಯುವ ಮತದಾರರು ಹಾಗೂ ೧,೪೧೯ ಮಹಿಳಾ ಯುವ ಮತದಾರರು ಸೇರಿದಂತೆ ಒಟ್ಟು ೩,೭೨೦ ಯುವ ಮತದಾರರು ಈ ಮತ ಕ್ಷೇತçದಲ್ಲಿದ್ದಾರೆ.
ಉಳಿದಂತೆ, ೧೮-ರಾಮದುರ್ಗ ಮತಕ್ಷೇತçದಲ್ಲಿ ೨,೪೦೮ ಪುರುಷ ಹಾಗೂ ೧,೪೪೮ ಮಹಿಳಾ ಯುವ ಮತದಾರರಿದ್ದು, ೩,೮೫೭ ಯುವ ಒಟ್ಟು ಯುವ ಮತದಾರರಿದ್ದಾರೆ.
ಹೀಗೆ ಒಟ್ಟು ೮ ವಿಧಾನ ಸಭಾ ಮತಕ್ಷೇತçಗಳಲ್ಲಿ ಒಟ್ಟು ಪುರುಷ ಯುವ ಮತದಾರರ ಸಂಖ್ಯೆ ೧೫,೨೯೨ ಹಾಗೂ ಮಹಿಳಾ ಯುವ ಮತದಾರರ ಸಂಖ್ಯೆ ೧೦,೦೩೨ ಆಗಿದ್ದು, ಒಟ್ಟು ಯುವ ಮತದಾರರ ಸಂಖ್ಯೆ ೨೫,೩೨೭ ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಒಟ್ಟು ೨,೫೬೬ ಮತಗಟ್ಟೆಗಳು:
ಇನ್ನು, ಒಟ್ಟು ೨,೫೬೬ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ೨,೦೬೪ ಮುಖ್ಯ ಮತಗಟ್ಟೆಗಳಾದರೆ, ೫೦೨ ಉಪ ಮತಗಟ್ಟೆಗಳಾಗಿವೆ. ಇವುಗಳಲ್ಲಿ ೫೮೭ ಸೂಕ್ಷö್ಮ ಹಾಗೂ ೧೧೮ (ವಲ್ನರೇಬಲ್) ದುರ್ಬಲ ಮತಗಟ್ಟೆಗಳಿವೆ. ೨,೫೬೬ ಮತಗಟ್ಟೆಗಳ ಪೈಕಿ ೧,೨೮೩ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ ಹಾಗೂ ೧೫೯ ಮತಗಟ್ಟೆಗಳು ವಿಡಿಯೋಗ್ರಾಫಿ ವ್ಯವಸ್ಥೆಯನ್ನು ಹೊಂದಿವೆ.
ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ೧೬ ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.ಲೋಕಸಭಾ ಉಪ ಚುನಾವಣಾ ಮತಗಟ್ಟೆಗಳಲ್ಲಿ ರ‍್ಯಾಂಪ್, ವ್ಹೀಲ್ ಚೇರ್, ಮ್ಯಾಗ್ನಿಫಾಯಿಂಗ್ ಗ್ಲಾಸ್, ಶೆಡ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ತಿಳಕವಾಡಿಯ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು, ೧೭ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಸುಗಮ ಮತದಾನ ಹಾಗೂ ಮತ ಎಣಿಕೆಗೆ ಸಂಬAಧಿಸಿದAತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾರರು ಯಾವುದೇ ಆತಂಕವಿಲ್ಲದೇ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಮತದಾನ ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ.ಹರೀಶ್‌ಕುಮಾರ ಅವರು ತಿಳಿಸಿದ್ದಾರೆ.
ಸಿಬ್ಬಂದಿಗಳ ನಿಯೋಜನೆ:
ಒಟ್ಟು ೨,೫೬೬ ಮತಗಟ್ಟೆಗಳಲ್ಲಿ ೨೦೦ ಜನ ಸೂಕ್ಷö್ಮ ವೀಕ್ಷಕರ (ಒiಛಿಡಿo ಔbseಡಿveಡಿ) ನೇಮಕ ಮಾಡಲಾಗಿದೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಒಟ್ಟು ೭೨ ಸಿ.ಆಯ್.ಎಸ್.ಎಫ್. ಸಿಬ್ಬಂದಿ ೧೩೨ ಎ.ಎಸ್.ಆಯ್. ಸಿಬ್ಬಂದಿಗಳ ಆಯೋಜನೆ ಮಾಡಲಾಗಿದೆ. ಒಟ್ಟು ೯೭೭ ಹೆಡ್ ಕಾನ್ಸಟೇಬಲ್ ಹಾಗೂ ೧೪೦೬ ಪೊಲೀಸ್ ಕಾನ್ಸಟೇಬಲ್‌ಗಳು ಮತ್ತು ೯೦೫ ಹೋಮ್ ಗಾರ್ಡ್ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ವಿಶೇಷಚೇತನ ಮತದಾರರÀ ಸಹಾಯಕ್ಕಾಗಿ ೧,೪೯೭ ಸ್ವಯಂಸೇವಕರ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ಹರೀಶ್‌ಕುಮಾರ ಅವರು ಮಾಹಿತಿ ನೀಡಿದ್ದಾರೆ.
ಇಗಿಒ-ಗಿಗಿPಂಖಿ ಗಳ ವ್ಯವಸ್ಥೆ:
ಚುನಾವಣೆಯಲ್ಲಿ ಮತ ಚಲಾಯಿಸಲು ಇಗಿಒ-ಗಿಗಿPಂಖಿಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು ೨,೫೬೬ ಮತಗಟ್ಟೆಗಳಲ್ಲಿ ೫,೦೬೭ ಗಿಗಿPಂಖಿ ಗಳನ್ನು ಪೂರೈಸಲಾಗುತ್ತದೆ.
ಇPIಅ ಹಂಚಿಕೆ:
೦೨-ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೫,೩೨೭ ಚುನಾವಣಾ ಫೋಟೋ ಗುರುತಿನ ಚೀಟಿಗಳ ಹಂಚಿಕೆ ಮಾಡಲಾಗಿದೆ.ಅಲ್ಲದೇ, ಮತದಾರರ ಮಾಹಿತಿ ಸ್ಲೀಪ್‌ಗಳು ಮತದಾರರನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
ಎಪಿಕ್ ಕಾರ್ಡ್ ಇಲ್ಲದವರಿಗೆ ಮತದಾನಕ್ಕಾಗಿ ಪರ್ಯಾಯ ವ್ಯವಸ್ಥೆ:
ಎಪಿಕ್ ಕಾರ್ಡ್ ಹೊಂದಿಲ್ಲದ ಮತದಾರರು ಮತ ಚಲಾಯಿಸಲು ಪಾಸ್ಪೋರ್ಟ್(ರಹದಾರಿ ಪರವಾನಗೆ), ಚಾಲನೆ ಪರವಾನಗಿ(ಡ್ರೆöÊವಿಂಗ್ ಲೈಸೆನ್ಸ್), ಕೇಂದ್ರ/ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ ಸೇವಾ ಸಂಸ್ಥೆಗಳು, ಸಾರ್ವಜನಿಕ ಸೀಮಿತ ಸಂಸ್ಥೆಗಳು ಉದ್ಯೋಗಿಗಳಿಗೆ ನೀಡಿರುವ ಭಾವ ಚಿತ್ರದೊಂದಿಗಿನ ಸೇವಾ ಗುರುತಿನ ಚೀಟಿಗಳು, ಬ್ಯಾಂಕ್ ಅಥವಾ ಅಂಚೆ ಕಛೇರಿಯ ಭಾವಚಿತ್ರದೊಂದಿಗಿನ ಪಾಸ್‌ಬುಕ್‌ಗಳು, ಪಾನ್‌ಕಾರ್ಡ್, ಆಧಾರಕಾರ್ಡ್, ನರೇಗಾ ಉದ್ಯೋಗ ಕಾರ್ಡ್, ಚುನಾವಣಾ ಆಯೋಗವು ನೀಡಿರುವ ಅಧೀಕೃತ ವೋಟರ್ ಸ್ಲೀಪ್‌ಗಳನ್ನು ಬಳಸಿ ಮತ ಚಲಾವಣೆ ಮಾಡಲು ಅವಕಾಶ ಒದಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ನಗದು ಹಾಗೂ ಮದ್ಯ ವಶ:
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ೨೭ ಫ್ಲೆöÊಯಿಂಗ್ ಸ್ಕಾ÷್ವಡ್(ಈಟಥಿiಟಿg Squಚಿಜs), ೨೭ SSಖಿಗಳು ಕಾರ್ಯನಿರತವಾಗಿದ್ದು, ಇಲ್ಲಿಯವರೆಗೆ ೫೦೯ ಗೋಡೆಬರಹಗಳು, ೯೬೭ ಪೋಸ್ಟರ್, ೧೨೩೨ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ.
ಇಲ್ಲಿಯವರೆಗೆ ರೂ.೬೨,೫೫,೫೧೦ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ, ರೂ.೧೧,೯೭,೬೨೮.೭೦ ಮೌಲ್ಯದ ೪೩೨೭.೭೪ ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ದೂರುಗಳು:
೧೦ ಸಿವಿಜಿಲ್ ದೂರುಗಳು, ಎನ್.ಜಿ.ಆರ್.ಎಸ್.ಅಡಿ ದಾಖಲಾದ ೬೩ ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ. ಪತ್ರ ಹಾಗೂ ಇ-ಮೇಲ್‌ಗಳ ಮೂಲಕ ೫೨ ಪ್ರಕರಣಗಳು ದಾಖಲಾಗಿದ್ದು, ೪೪ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದರ ಕುರಿತು ೪೫ ಪ್ರಕರಣಗಳು ದಾಖಲಾಗಿವೆ.
ಸುವಿಧಾ:
ವಿವಿಧ ಕಾರ್ಯಚಟುವಟಿಕೆಗಳಿಗೆ ಸಂಬAಧಿಸಿದAತೆ ಅನುಮತಿ ಪಡೆಯಲು ಸುವಿಧಾ ಅಡಿಯಲ್ಲಿ ೩೧೯ ಮನವಿಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ಧ್ವನಿ ವರ್ಧಕ ಬಳಸಿ ಸÀಭೆಗಳನ್ನು ನಡೆಸುವ ಕುರಿತು ೯೦, ಧ್ವನಿ ವರ್ಧಕ ಬಳಸದೆಯೇ ಸÀಭೆಗಳನ್ನು ನಡೆಸುವ ಕುರಿತು ೫೦ ಮನವಿಗಳು ಸಲ್ಲಿಕೆಯಾಗಿವೆ. ೨ ಹೆಲಿಕಾಪ್ಟರ್‌ಗಳಿಗೆ ಅನುಮತಿ ನೀಡಲಾಗಿದೆ.
ಕೋವಿಡ್ ನಿಯಮಾವಳಿಗಳು:
ಕೋವಿಡ್ ನಿಯಮಾವಳಿಯಂತೆ ಎಲ್ಲ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಲ್ಲ ಎ.ಆರ್.ಒ.ಗಳಿಗೆ ನಿರ್ದೇಶನ ನೀಡಲಾಗಿದೆ. ಚುನಾವಣಾ ಸಿಬ್ಬಂದಿಗೆ ಥರ್ಮಲ್ ಸ್ಸಾö್ಯನರ್, ಗ್ಲೌಸ್, ಮಾಸ್ಕ್,ಸಾನಿಟೈಜರ್‌ಗಳನ್ನು ಪೂರೈಸಲಾಗುತ್ತದೆ. ಎಲ್ಲ ತರಬೇತಿ ಹಾಗೂ ಮತದಾನ ಕೊಠಡಿಗಳನ್ನು ಸಾನಿಟೈಜ್ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.


Leave a Reply