BelagaviState

ಬೆಳಗಾವಿ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಿದ ಜನಪ್ರತಿನಿಧಿಗಳು


ಬೆಳಗಾವಿ: ಲೋಕಸಭಾ ಉಪಚುನಾವಣೆ ಮತದಾನ ಪ್ರಕ್ರಿಯೆ ರಂಗೇರಿದ್ದು ಬೆಳಿಗ್ಗೆಯಿಂದ ಎಲ್ಲ ಮತದಾರರು ಮತಗಟ್ಟಿಗಳಿಗೆ ತೆರಳಿ ಮತಚಲಾಯಿಸುತ್ತಿದ್ದು ಜನಪ್ರತಿನಿಧಿಗಳು ಕೂಡ ಕುಟುಂಬ ಸದಸ್ಯರೊಂದಿಗೆ ಮತ್ತು ಕಾರ್ಯಕರ್ತರೊಂದುಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಹೊಸೂರ ಬಸವಣ ಗಲ್ಲಿಯಲ್ಲಿರುವ ಮರಾಠಿ ಶಾಲೆಯ ಮತಗಟ್ಟೆ ಸಂಖ್ಯೆ 214ಕ್ಕೆ ಮುಂಜಾನೆ 7 ಗಂಟೆಗೆ ಮತವನ್ನು ಚಲಾಯಿಸಿದರು. ಅಭಯ ಪಾಟೀಲ್ ಅವರು, ತನ್ಮ ಧರ್ಮ ಪತ್ನಿ ಪ್ರೀತಿ ಪಾಟೀಲ ಜೋತೆಗೆ ಬಂದು ಸರದಿ ಸಾಲಿನಲ್ಲಿ ಬಂದು ಮತದನಾ ಮಾಡಿದ್ದಾರೆ.‌

ಈ ವೇಳೆ ಶಾಸಕರು ಬೂತದಲ್ಲಿರುವ ಟೆಬಲಗಳನ್ನು ವಿಕ್ಷಿಸಿವುದರೊಂದಿಗೆ ಮತದಾರರಿಗೆ ಮತದಾನವನ್ನು ಮಾಡಲು ಅನಕೂಲವಾಗುವ ದೃಷ್ಟಿಯಿಂದ,  ಶಾಸಕರೆ ಟೆಬಲ ಮೇಲೆ ಕುಳಿತು ಮತದಾರರ ಕ್ರಮ ಸಂಖ್ಯೆ, ಕೊಠಡಿ ಸಂಖ್ಯೆ ಸ್ಲಿಪಗಳನ್ನು  ನೀಡಿ, ಮತದಾರರಿಗೆ ಮತದಾನ ಮಾಡುವಂತೆ ಕೋರಿದರು.

ಇತ್ತಕಡೆ  ಉತ್ತರ ಬಾಗದ ಶಾಸಲ ಅನಿಲ ಬೆನಕೆ ಅವರು ಮತದಾನ ಪ್ರಕ್ರಿಯೆ‌ ಪ್ರಾರಂಭ ಆಗುತ್ತಿದಂತೆ  ತಮ್ಮ ಕಾರ್ಯಕರ್ತರೊಂದಿಗೆ ಬಂದು ಬೆಳಗಾವಿಯ ಆಂಜನಯ ನಗರದಲ್ಲಿ ಇರುವ ಸರಕಾರಿ ಶಾಲೆಯಲ್ಲಿ  ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ಬನಗರದ ಎಲ್ಲ ಮತಗಟ್ಟೆಗಳಿಗೆ ಬೆಳಿಗ್ಗೆಯಿಂದ ಮತದಾರರು ಆಗಮಿಸಿ ಮತ ಚಲಾಯಿಸುತ್ತದ್ದು ಉತ್ತಮ ರೀತಿಯ ಪ್ರತಿಕ್ರಿಯೆ ಬರುತ್ತಿದೆ.


Leave a Reply