BelagaviState

ನೀವು ಬೇಡಿಕೆಗೆ ಸ್ಪಂದಿಸಿಲ್ಲ ನಾವು ಮತದಾನ ಮಾಡಲ್ಲಾ, ಹಿರೇತಡಸಿ, ಚಿಕ್ಕತಡಸಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ


ರಾಮದುರ್ಗ: ಲೋಕಸಭಾ ಉಪಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಾಂತ ತ್ತಮ ರೀತಿಯಲ್ಲ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಆದರೆ ರಾಮದುರ್ಗದ ಹಿರೇತಡಸಿ, ಚಿಕ್ಕತಡಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.  ಇಂದು ಮತದಾನ ಬಹಿಷ್ಕಾರದ ಮೂಲಕ ಪ್ರವಾಹ ಪೀಡಿತ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಬೇಡಿಕೆ ಈಡೇರುವವರೆಗೆ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ನೆರೆ ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವ ಗ್ರಾಮಸ್ಥರು ಈ ಗ್ರಾಮಗಳನ್ನ ಸ್ಥಳಾಂತರ ಮಾಡಬೇಕೆಂದು ಹಲವು ದಿನಗಳಿಂದ ಒತ್ತಾಯಿಸುತ್ತಲೇ ಬಂದಿದ್ದರು. ನಿರ್ಲಕ್ಷ್ಯ ವಹಿಸಿದರೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಪ್ರವಾಹ ಪೀಡಿತ ಗ್ರಾಮಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ತಳೆದಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಲಕ್ಷ್ಯ ವಹಿಸಿಲ್ಲ. ಪ್ರವಾಹ ಪೀಡಿತ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕೆಂಬ ಬೇಡಿಕೆ ಈಡೇರುವವರೆಗೆ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

1980ರಲ್ಲಿ ಮಲಪ್ರಭಾ ಡ್ಯಾಂ ನಿರ್ಮಾಣವಾದ ಮೇಲೆ ಗ್ರಾಮಗಳು ಮುಳುಗಡೆಯಾಗುವುದು ನಡೆದೇ ಇದೆ. 2018 ಮತ್ತು 2019ರಲ್ಲಿ ಮಳೆಗಾಲದಲ್ಲಿ ಗ್ರಾಮಗಳು ಮುಳುಗಡೆಯಾಗಿ ಅಪಾರ ಹಾನಿಯಾಗಿತ್ತು. ಗ್ರಾಮಗಳನ್ನು ಸ್ಥಳಾಂತರಿಸಬೇಕೆಂದು 2006ರಿಂದಲೇ ಒತ್ತಾಯಿಸುತ್ತಿದ್ದೇವೆ. ಆದರೆ ಸರಕಾರ ಕಣ್ತೆರೆಯುತ್ತಿಲ್ಲ. ನಮ್ಮ ಕೂಗು ಜಿಲ್ಲಾಡಳಿತಕ್ಕೆ ಮುಟ್ಟುತ್ತಿಲ್ಲ. ಅನಿವಾರ್ಯವಾಗಿ ಚುನಾವಣೆ ಬಹಿಷ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರವಾಹಪೀಡಿತ ಗ್ರಾಮಗಳ ಸ್ಥಳಾಂತರ ಒತ್ತಾಯಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.‌ಎರಡು ಗ್ರಾಮಗಳ ಪೈಕಿ 2500ಕ್ಕೂ ಅಧಿಕ ಜನರಿಂದ ಮತದಾನ ಬಹಿಷ್ಕಾರ ಮಾಡಿದ್ದಾರೆ.

 

 


Leave a Reply