Belagavi

ಕರೆಮ್ಮದೇವಿ ಜಾತ್ರೆ ಸಂಪನ್ನ: ಗಣ್ಯರಿಗೆ ಸತ್ಕಾರ


ಬೈಲಹೊಂಗಲ ೧೭:- ಪಟ್ಟಣದ ಪತ್ರಿ ಬಸವನಗರ ಮೂರನೇ ಅಡ್ಡರಸ್ತೆ ಯಲ್ಲಿರುವ ಶ್ರೀ ಕರೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಶುಕ್ರವಾರ ಸರಳವಾಗಿ ಜರುಗಿತು.
ಕೊರೋನಾ ಹಿನ್ನೆಲೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಜಾತ್ರೆಯನ್ನು ಆಚರಿಸಲಾಯಿತು. ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ಶ್ರೀ ಕರೆಮ್ಮ ದೇವಿಯ ಮೂರ್ತಿಗೆ ರುದ್ರಾಭಿಷೇಕ ವಿಶೇಷ ಪೂಜೆ ಜರುಗಿದ ನಂತರ ಹತ್ತು ಗಂಟೆಗೆ ಕರೆಮ್ಮ ದೇವಿಯ ಭಾವಚಿತ್ರದ ಮೆರವಣಿಗೆ ನಡೆದ ನಂತರ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಸಾಯಂಕಾಲ ಜಾತ್ರೆಯ ಅಂಗವಾಗಿ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಜರಗಿತು, ಪುರಸಭೆಗೆ ನೂತನವಾಗಿ ಆಯ್ಕೆಯಾದ ಶ್ರೀದೇವಿ ದೇವಲಾಪುರ, ಹಿರಿಯರಾದ ಬಿ ಎಸ್ ಬೂದಿಹಾಳ ಹಾಗೂ ಪ್ರಸಾದ ಸೇವೆ ಸಲ್ಲಿಸಿದ ಎಸ್ ಬಿ ಹೊನ್ನಾವರ ಅವರನ್ನು ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಶಿವಾನಂದ ಮಡಿವಾಳರ ಹಾಗೂ ಸರ್ವ ಸದಸ್ಯರು ಸನ್ಮಾ£ಸಿದರು. ದೇವಸ್ಥಾನ ಕಮಿಟಿ ಸದಸ್ಯರು, ಪತ್ರಿ ಬಸವ ನಗರ, ವಿನಾಯಕ ನಗರದ ಗಣ್ಯರು ಉಪಸ್ಥಿತರಿದ್ದರು.


Leave a Reply