BelagaviState

ಮತದಾನದ ನಿಯಮ ಉಲ್ಲಂಘಿಸಿದ ಎಂಇಎಸ್, ಮತದಾನದ ವಿಡಿಯೋ ಹರಿಬಿಟ್ಟ ಪುಂಡರು


ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಮಾಡುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾನದಲ್ಲಿ ಹರಿ ಬಿಡುವುದರ ಮೂಲಕ  ಎಂಇಎಸ್ ಪುಂಡರು ಮತಗಟ್ಟೆಯಲ್ಲೂ ಉದ್ದಟತನ ಪ್ರದರ್ಶಿಸಿದ್ದಾರೆ.

ಖ್ಯಾತೆ ತೆಗೆಯಲು ಮತ್ತು ಉದ್ದಟತನ ಮೆರೆಯುವುದನ್ನೆ ಸಾಹಸ ಮಾಡಿಕೊಂಡಿದ್ದ ಎಂಇಎಸ್ ಇದೀಗ ಮತ ಚಲಾಯಿಸುವಲ್ಲಿಯೂ ಹುಚ್ಚತನ ಪ್ರದರ್ಶನ ಮಾಡಿದೆ. ಶಿವಸೇನೆಯಿಂದ ಪಚುನಾವಣೆಗೆ ಸ್ಪರ್ದಿಸಿದ ಶುಭಂ ಶೆಳಕೆ ಅವರಿಗೆ ಮತ ಚಲಾವಣೆ ಮಾಡಿದ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಮತದಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

“ನನ್ನ ಮತ ಎಂಇಎಸ್” ಗೆ ಎಂಬ ವಾಕ್ಯದೊಂದಿಗೆ ವಿಡಿಯೋ ಮತ್ತು ಪೋಟೊಗಳನ್ನು ಹರಿಬಿಟ್ಟಿದ್ದು ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ. ಮತದಾನದ ದಿನವು ಎಂಇಎಸ್ ಉದ್ದಟತನ ಮುಂದುವರೆದಿದ್ದು ತನ್ನ ಹಳೆ ಚಾಲಿಯನ್ನು ಮುಂದುವರೆಸಿದೆ.


Leave a Reply