Ballary

ಪೋಲಿಸರ ಮೇಲೆ ಸಚಿವ ಬಿ ಸಿ ಪಾಟೀಲ್ ಗರಂ


ಕೊಪ್ಪಳ : ಪೋಲಿಸರ  ಈ ಕ್ರಮದ ಮೇಲೆ ಸಚಿವ ಬಿ ಸಿ ಪಾಟೀಲ್ ಗರಂ ಘಟನೆ ಕೆಡಿಪಿ ಸಭೆಯಲ್ಲಿ ನಡೆದಿದೆ .

ನಾಗೇಶನಹಳ್ಳಿ ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ನಾಗೇಶನಹಳ್ಳಿಯಲ್ಲಿರುವ ರಾಘವೇಂದ್ರ ಕ್ರಷರ್ ಮೇಲೆ ಗಂಗಾವತಿ ಗ್ರಾಮೀಣ ಸಿಪಿಐ ದಾಳಿ ಮಾಡಿದ್ದೇಕೆ? ಆನಂತರ ವ್ಯವಹಾರ ಮಾತನಾಡಿದ್ದೇಕೆ? ಆಮೇಲೆ ಕ್ರಷರ್ನ ಎಲ್ಲ ಪಾಲುದಾರರು ಠಾಣೆಗೆ ಬರಬೇಕು ಎಂದು ಪಟ್ಟು ಹಿಡಿದಿದ್ದೇಕೆ? ಮುನಿರಾಬಾದ್ ವ್ಯಾಪ್ತಿಯಲ್ಲಿ ಗಂಗಾವತಿ ಸಿಪಿಐನದ್ದೇನು ಕೆಲಸ? ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ

ಇದಕ್ಕೆ ಉತ್ತರಿಸಿದ ಎಸ್.ಪಿ ಟಿ.ಶ್ರೀಧರ್ ಅವರು, ಬಳ್ಳಾರಿ ಐಜಿಯವರು ನೇರವಾಗಿ ಗಂಗಾವತಿ ಗ್ರಾಮೀಣ ಸಿಪಿಐಗೆ ತನಿಖೆ ಮಾಡುವಂತೆ ಸೂಚಿಸಿದ್ದರಿಂದ ಅವರು ಅಲ್ಲಿಗೆ ತೆರಳಿದ್ದಾರೆ ಎಂದು ಸಮಜಾಯಿಷಿ ನೀಡಿದಾಗ, ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು, ಹಾಗಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂದಂಗಾಯ್ತು ಎಂದರು.ಅಗ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದು ಎಸ್ಪಿ ಉತ್ತರಿಸಿದರು..

ಹನುಮೇಶ್ ಬಟಾರಿ


Leave a Reply