Belagavi

ಅಗ್ನಿಶಾಮಕ ಸೇವಾ ಸಪ್ತಾಹ: ಜಾಗೃತಿ ಕಾರ್ಯಕ್ರಮ


ಸವದತ್ತಿ: ಅಗ್ನಿಶಾಮಕ ಸೇವಾ ಸಪ್ತಾಹದ ಅಂಗ ವಾಗಿ ಪಟ್ಟಣದ ನಾನಾ ಬಡಾವಣೆ , ರಸ್ತೆಗಳಲ್ಲಿ ಇಲಾಖೆ ಅಧಿಕಾರಿ ಮತ್ತು ನೌಕರ ವಂದ ಜಾಗತಿ ಜಾಥಾ ನಡೆಸಿತು.

ಸವದತ್ತಿ  ಅಗ್ನಿಶಾಮಕ ಠಾಣೆ ವತಿಯಿಂದ ಆಯೋಜಿಸಿದ್ದ ಕಾರ‌್ಯಕ್ರಮ ದಲ್ಲಿ ಧ್ವನಿ ವರ್ಧಕದ ಮೂಲಕ ಅಗ್ನಿ ಅವಘಡ ಸಂಭವಿಸಿದಾಗ ಯಾವ ದೂರವಾಣಿ ನಂಬರ್ ಅನ್ನು ಸಂಪರ್ಕಿಸಬೇಕು, ಪ್ರಥಮ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು, ಅಗ್ನಿಯಿಂದ ಸುರಕ್ಷರಾಗುವ ಬಗೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಠಾಣಾಧಿಕಾರಿ ಎಮ್ ಕೆ ಕಲಾದಗಿ ಇದೇ ಏ. 14ರಿಂದ 20ರವರಗೆ ಅಗ್ನಿಶಾಮಕ ಸೇವಾ ಸಪ್ತಾಹ ಆಚರಣೆ ಮಾಡಲಾ ಗುತ್ತಿದೆ. ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮಡಿದವರಿಗೆ ಗೌರವ ಸಲ್ಲಿಸುವುವುದು.

ಸಾರ್ವಜನಿಕರಲ್ಲಿ ಅಗ್ನಿ ಅವಘಡಗಳ ಬಗ್ಗೆ ಮತ್ತು ಅದರ ಸುರಕ್ಷತೆ ಬಗ್ಗೆ ಜಾಗತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಜಾಗೃತಿ ಕಾರ‌್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಹಾಜರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply