bagalkotState

ನನ್ನ ಹೆಸರು ಕೂಡ ಸಿಎಂ ಲಿಸ್ಟ್ ನಲ್ಲಿದೆ: ಬಸನಗೌಡ ಯತ್ನಾಳ


ಬಾಗಲಕೋಟೆ: ಮುಂಬರುವ ದಿನದಲ್ಲಿ ಸಿಎಂ ಬದಲಾವಣೆಯಾಗುವುದು ಖಂಡಿತ ನಾನು ಕೂಡ ಸಿಎಂ ಲಿಸ್ಟ್ ನಲ್ಲಿ ಇದ್ದೇನೆ ಎಂದು ಬಸವನ ಗೌಡ ಯತ್ನಾಳ್ ಹೇಳಿದರು. ಅವರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯಡಿಯೂರಪ್ಪನವರಿಗೆ ಸರಿಯಾಗಿ ಕಿವಿ ಕೇಳುತ್ತಿಲ್ಲ, ಅಕ್ಕಪಕ್ಕದವರು ಇರುವರು ಸರಿಯಾಗಿ ಅವರಿಗೆ ಸರಿಯಾದ ಮಾಹಿತಿ ನೀಡದೆ ತಪ್ಪು ಸಂದೇಶ ಹೇಳುತ್ತಿದ್ದಾರೆ. ಇದರಿಂದ ಸಿಎಂ ಯಡಿಯೂರಪ್ಪನವರು ಸಿಎಂ ಸ್ಥಾನ ಬಿಟ್ಟರೆ ನಾವು ಕೂಡ ಸಿಎಂ ಆಗಬಹುದು, ಹಾಗೂ ಲಿಸ್ಟ್ ನಲ್ಲಿ ಕೂಡ ಇದ್ದೇವೆ ಎಂದು ಬಸವನಗೌಡ ಯತ್ನಾಳ್ ಹೆಳುತ್ತಾ ಸಿಎಂ ವಿರುದ್ಧ ಮತ್ತೆ ಕೆಂಡಕಾರಿದರು.

ನಮ್ಮ ಸಮಾಜದಲ್ಲಿ ನಾಟಕ ಕಂಪನಿ  ಸಚಿವರಿದ್ದಾರೆ. ಸಮಾಜವನ್ನು ತಪ್ಪು ದಾರಿಗೆ ತರುವುದಕ್ಕೆ ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಅವರಿಗೆ ಸಮಾಜದ ತಕ್ಕ ಪಾಠ ಕಲಿಸುತ್ತದೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ಅವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದರು ಬಿಲ್ ಕೊಡುವ ಯೋಗ್ಯತೆ ಇಲ್ಲ, ಸುಮ್ನೆ ಸಮಾಜದ ದಾರಿತಪ್ಪಿಸುವ ಕುತಂತ್ರಕ್ಕೆ ಕೈ ಹಾಕುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತೇನೆಂದು ಮುಖ್ಯಮಂತ್ರಿ ಸದನದಲ್ಲಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಮೇಲೆ ಸಂಪೂರ್ಣವಾದ ಭರವಸೆ ಇದೆ. ಒಂದು ವೇಳೆ ತಪ್ಪಿದರೆ 20ಲಕ್ಷ ಪಂಚಮಸಾಲಿಗಳು ಸಮಾಜದ ಜನರೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದೆ ಸಂದರ್ಭದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಜಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜದ ೨ಎ ಮೀಸಲಾತಿ ಪಡೆಯಲು ೭೦೯ ಕಿಲೋಮೀಟರ್ ಪಾದ ಯಾತ್ರೆ ನಡೆಸುವ ಸಂದರ್ಭದಲ್ಲಿ ಸಮಾಜ ನಮ್ಮ ಜೋತೆಯಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಸರ್ವರಿಗೂ ಶರಣು ಶರಣಾರ್ಥಿ ತಿಳಿಸುತ್ತಾ, ಪಂಚಮಸಾಲಿ ಸಮಾಜದ ಒಂದು ಶಕ್ತಿಯಾಗಿ ಬೆಳೆಯಲು ವಿಜಯಪುರ ಶಾಸಕ ಬಸವನಗೌಡ ಯತ್ನಾಳ್, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಹಾಗೂ ಡಾಕ್ಟರ್ ಬಸನಗೌಡ ಪಾಟೀಲ್ ಮತ್ತು ಸಮಾಜದ ಮುಖಂಡ ಸಹಾಯದಿಂದ ನಮ್ಮ ಸಮಾಜ ಈ ಸಂಘಟನೆ ಆಗಿದೆ ಎಂದು ಹೇಳಿದರೂ. ಮುಂಬರುವ ದಿನದಲ್ಲಿ ಪಂಚಮಸಾಲಿ ಸಮಾಜದ ೨ಎ ಮೀಸಲಾಯಿ ಸರ್ಕಾರ ನಿಡುತ್ತಾರೆ ಎಂಬುದು ಭರವಸೆ ಇದೆ ಬಿಎಸ್ ಯಡಿಯೂರಪ್ಪನವರು ನಮಗೆ ನ್ಯಾಯ ಒದಗಿಸುತ್ತಾರೆ ಎಂದು ಆತ್ಮವಿಶ್ವಾಸದಿಂದ ನುಡಿದರು.


Leave a Reply