BelagaviState

ಶಿವಸೇನೆ ವಿರುದ್ಧ ಗುಂಡಾಕಾಯ್ದೆ ದಾಖಲಿಸಿ: ಭೀಮಪ್ಪಾ ಗಡಾದ


ಬೆಳಗಾವಿ: ಮಹರಾಷ್ಟ್ರದ ದು ಕಚೇರಿಯನ್ನು ಬೆಳಗಾವಿಯಲ್ಲಿ ಪ್ರಾರಂಭಿಸಬೇಕೆಂದು ಸಂಜಯ ರಾವತ್ ಪತ್ರಿಕೆಯಲ್ಲಿ ಹೇಳಿಕೆ ಕೊಡುವುದರ ಮೂಲಕ ಗಡಿ ಭಾಗದಲ್ಲಿ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಆದರೂ ನಮ್ಮ ಸರಕಾರ ಕಣ್ಣು ಮುಚ್ಚಿ ಕೊಳಿತುಕೊಂಡಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಸಂಜಯ ರಾವತ ಸಂಜಯ ರಾವತ್ ಅವರ ಹೇಳಿಕೆ  ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ, ಒಬ್ಬ ರಾಜ್ಯ ಸಭಾ ಸದಸ್ಯ ಕರ್ನಾಟಕ್ಕೆ ಬಂದು ಮಹರಾಷ್ಟ್ರದ ಕಚೇರಿಯನ್ನು ಸ್ಥಾಪಿಸಬೇಕೆಂದು ಹೇಳುತ್ತಿದ್ದರೂ ನಮ್ಮ ರಾಜ್ಯದ ಶಾಸಕರು, ಸಚಿವರು ಮತ್ತು ಸಂಸದರು ಅದನ್ನು ವಿರೋಧಿಸದೆ ನಿದ್ರೆಯಲ್ಲಿ ಜಾರಿದಾರೆಯೇ ಎಂದು ಮಾತಿನ ಚಾಟಿ ಬೀಸಿದರು.

ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದನ್ನ ನಿಯಂತ್ರಣ ಮಾಡುವುದನ್ನು ಬಿಟ್ಟು, ಕರ್ನಾಟಕದಲ್ಲಿ ವಿವಾದ ಸೃಷ್ಟಿಸುವ ಕೆಲಸವನ್ನು ಶಿವಸೇನೆ ಮಾಡುತ್ತಿದೆ ಇದರ ಬಗ್ಗೆ ನಮ್ಮ ಸಾರ್ಕಾರ ಶಿವಸೇನೆ ಮತ್ತು ಎಂ.ಇ.ಎಸ್ ಮೇಲೆ ಗುಂಡಾ ಕಾಯ್ದೆ ದಾಖಲಿಸಬೇಕು.ಈ ಕುರಿತು ಸರ್ಕಾರ ಆದಷ್ಟು ಬೇಗನೆ ಕ್ರಮ ಕೈ ಗೊಳ್ಳಬೇಕು. ಇಲ್ಲದಿದ್ದರೆ ಕನ್ನಡಿಗರು ಬಿದಿಗೆ ಇಳಿದು ಹೋರಾಟ ಮಾಡುವ ಪರಿಸ್ಥಿತಿ ಏದುರಾಗಬಹುದು ಎಂದು ಭಿಮಪ್ಪ ಗಡಾದ ಅವರು ಎಚ್ಚರಿಕೆ ನೀಡಿದ್ದಾರೆ.

 

 


Leave a Reply