BelagaviState

ಅಂತರ ಹೇಳೊಕೆ ಆಗೊದಿಲ್ಲ,ಗೆಲುವು ನಿಶ್ಚಿತವೆಂದ ಸತೀಶ ಜಾರಕಿಹೊಳಿ


ಗೋಕಾಕದ: ಹಿಲ್ ಗಾರ್ಡನ ನಲ್ಲಿರುವ ತಮ್ಮ ಸ್ವ ಗೃಹದಲ್ಲಿ ಮಾದ್ಯಮದವರ ಜೊತೆಯಲ್ಲಿ ಮಾತನಾಡಿ ಬೆಳಗಾವಿ ಉಪಚುನಾವಣೆಯಲ್ಲಿ‌ ಕಾಂಗ್ರೇಸ್ ಗೆಲುವು ನಿಶ್ಚಿತ ಆದರೆ ಅಂತರ ಹೇಳೊದಕ್ಕೆ ಆಗೊದಿಲ್ಲ ಎಂದರು

ಇನ್ನು ಲಾಕಡೌನ್ ಮಾಡುವುದನ್ನು ಬಿಟ್ಟು ಸರಕಾರ ಕಠಿಣ ನಿಯಮಗಳನ್ನು‌ ತಂದು ಕೊರಾನಾ ಜಾಗೃತಿ ಮಾಡುವುದನ್ನು ಹೆಚ್ಚಿಸಬೇಕೆಂದರು. ಅದನ್ನು ಬಿಟ್ಟು ಲಾಕಡೌನ್ ಮಾಡುವುದರಿಂದ ಬಡವರು ತೊಂದರೆ ಅನುಭವಿಸುತ್ತಾರೆ.

ಹಾಗೂ ನನ್ನ ಗೆಲುವನ್ನು ಪ್ರಥಮವಾಗಿ ಮತದಾರರಿಗೆ ಅರ್ಪಿಸಿ, ದುಡಿದಂತೆ ಎಲ್ಲ ಕಾರ್ಯಕರ್ತರ ಜೊತೆಯಲ್ಲಿ ನನ್ನ ಪರ ಪ್ರಚಾರ ಮಾಡಿದ ನನ್ನ ಮಕ್ಕಳ ಶ್ರಮ ಕೂಡ ಇದೆ ಎಂದರು.

ಹಾಗೂ ಮೊದಲೆ ನಾವು ಹಲವಾರು ಬಾರಿ ಮುಷ್ಕರ ಮಾಡುತ್ತಿರುವ ಸಾರಿಗೆ ನೌಕರರನ್ನು ಕರೆದು ಚರ್ಚಿಸಲು ತಿಳಿಸಿದ್ದೇವೆ, ಅದನ್ನು ಬಿಟ್ಟು ಅವರ ಮೇಲೆ ಒತ್ತಾಯ ಪೂರ್ವಕವಾಗಿ ಪ್ರಕರಣ ದಾಖಲಿಸುವುದು ಸರಿಯಲ್ಲ

ಇನ್ನು‌ ಆಕ್ಸಿಜನ್ ಬಗ್ಗೆ ಸರಕಾರದಲ್ಲಿ ಮೊದಲಿನಿಂದಲೂ ಗೊಂದಲದಲ್ಲಿದೆ.ಗೋಕಾಕದಲ್ಲಿ ಆಕ್ಸಿಜನ್ ಕೊರೆತೆಯಾದರೆ ನಮ್ಮ ಸಂಸ್ಥೆಯಿಂದ ಪೊರೈಕೆ ಮಾಡಲು ಸಿದ್ದರಿದ್ದೇವೆಂದರು.


Leave a Reply