BelagaviState

ಮದುವೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ: ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆಎಚ್ ಸೂಚನೆ


ಬೆಳಗಾವಿ: ಕೋವಿಡ್ ನಿಯಂತ್ರಣಕ್ಕೆ ನಿಯಮಗಳ ಪಾಲನೆ ಅನಿವಾರ್ಯವಾಗಿದ್ದು ನಗರದಲ್ಲಿ ಮಾಸ್ಕ ಧರಿಸದೇ ಇರುವವರಿಗೆ ದಂಡ ವಿಧಿಸಲಾಗುತ್ತದೆ ಮದುವೆ ಸಮಾರಂಭಗಳನ್ನು ಮಾಡಲು ಅನುಮತಿ ಪಡೆಯಲೇ ಬೇಕು ಮತ್ತು ಕೋವಿಡ್ ಸೂಚನೆ ಪಾಲಿಸದೇ ಇರುವ ಮಾಲ್ ಗಳನ್ನು ಬಂದ್ ಮಾಡಿ  ಎಫ್ಐರಆರ್ ದಾಖಲಿಸುತ್ತೇವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆಎಚ್ ಸೂಚನೆ ನೀಡಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ  ಅವರು ಕೋವಿಡ್ ಪರೀಕ್ಷೆ, ಲಸಿಕೆ ನೀಡುವುದನ್ನು ಹೆಚ್ಚಿಸುವುದು  ಹಾಗೂ ನಗರದಲ್ಲಿ ಜಾತ್ರೆ, ಎಪಿಎಂಸಿ, ಮಾಲ್ ಗಳು ಸೇರಿದಂತೆ ಅಧಿಕ ಜನಸೇರುವ  ಪ್ರದೇಶಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಎಪಿಎಂಸಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಆಯಾ ನಾಲ್ಕು ದಿಕ್ಕುಗಳಲ್ಲಿ ಹಿಂದಿನಂತೆ ಯಾವ ರೀತಿ ಮಾರುಕಟ್ಟೆ ವ್ಯವಸ್ಥೆ ಮಾಡಿದ್ದೇವೋ ಅದೇ ರೀತಿ ಈ ಬಾರಿಯೂ ಮಾಡುವ ನಿಟ್ಟಿನಲ್ಲಿ ಎಪಿಎಂಸಿ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇವೆ. ಕಿರಿದಾದ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುವವರಿಗೆ ಸಮೀಪದ ಮೈದಾನದಲ್ಲಿ ಮಾರಾಟಕ್ಕೆ ಮಾರ್ಕಿಂಗ್ ವ್ಯವಸ್ಥೆ ಮಾಡಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅನುಮತಿ ಇಲ್ಲದೇ ಯಾರೂ ಕೂಡ ಮದುವೆ ಮಾಡುವಂತಿಲ್ಲ. ಅದೇ ರೀತಿ ನಮ್ಮದೇಯಾದ ಒಂದು ತಂಡವನ್ನು ನಾವು ಅಲ್ಲಿಗೆ ಕಳಿಸಿಕೊಡುತ್ತೇವೆ. ಅವರು ಪರಿಶೀಲನೆ ಮಾಡುತ್ತಾರೆ. ಅದರಲ್ಲಿ ಪ್ರತಿ ಆದೇಶದಲ್ಲಿ ಪಾಲಿಕೆಯ ಯಾವ ಅಧಿಕಾರಿಗಳು ಯಾರು ಇರುತ್ತಾರೆ ಎಂಬುದನ್ನು ತಿಳಿಸುತ್ತೇವೆ. ವಿಡಿಯೋ ಗ್ರಾಫರ್ ಜೊತೆಗೆ ಆಗಮಿಸಿ ನೋಡಿಕೊಳ್ಳುತ್ತಾರೆ. ಮದುವೆಗೆ ಯಾರ್ಯಾರು ಬರುತ್ತಾರೆ ಎಂಬ ಹೆಸರನ್ನು ಕೊಟ್ಟರೆ ಮಾತ್ರ ಮದುವೆಗೆ ಅನುಮತಿ ನೀಡುತ್ತೇವೆ. ಯಾಕೆಂದರೆ ಒಂದು ವೇಳೆ ಮದುವೆಗೆ ಬಂದವರಲ್ಲಿ ಕೊರೊನಾ ಪಾಸಿಟಿವ್ ಬಂದರೆ ಅವರ ಸಂಪರ್ಕಿತರನ್ನು ಕಂಡು ಹಿಡಿಯಲು ಸಹಾಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.


Leave a Reply